ಮಂಗಳೂರು : ರಿಕ್ಷಾ ಸ್ಫೋಟ ಪ್ರಕರಣ | ಶಾರೀಕ್ ಗುರುತು ಪತ್ತೆ ಹಚ್ಚಲು ಮಂಗಳೂರಿಗೆ ಆಗಮಿಸಿದ ಹೆತ್ತವರು!
ಮಂಗಳೂರಿನ ಜನತೆಯನ್ನು ಬೆಚ್ಚಿಸಿದ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ (Auto Blast) ಕುಕ್ಕರ್ ಬಾಂಬ್ ಬ್ಲಾಸ್ಟ್ ನಿಗೂಢ ಸ್ಫೋಟದ ಹಿಂದೆ ಉಗ್ರರ ಕೈವಾಡ ಇರುವ ಅನುಮಾನ ದಟ್ಟವಾಗಿದ್ದು, ಉಗ್ರರ ಕೃತ್ಯದ ಕುರುಹುಗಳು ಬೆಳಕಿಗೆ ಬರುತ್ತಿವೆ.
ಎರಡು ವರ್ಷಗಳ ಹಿಂದೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಗೋಡೆ ಮೇಲೆ ಉಗ್ರ ಸಂಘಟನೆ ಲಷ್ಕರ್ ಪರವಾಗಿ ಬರಹ ಬರೆದ ಸಂದರ್ಭ, ಈ ಪ್ರಕರಣದಲ್ಲಿ ಮಾಝ್ ಮುನೀರ್ ಜೊತೆ ಶಾರೀಕ್ನನ್ನು ಬಂಧಿಸಲಾಗಿ ತಲೆಮರೆಸಿಕೊಂಡಿದ್ದ ಆರೋಪಿ ಮತ್ತೊಮ್ಮೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಪ್ರಕರಣದ ಬಳಿಕ ಇದೀಗ ಆಟೋದಲ್ಲಿ ಸಂಭವಿಸಿದ (Auto Blast) ಕುಕ್ಕರ್ ಬಾಂಬ್ ಬ್ಲಾಸ್ಟ್ ನಿಗೂಢ ಸ್ಫೋಟದ ಹಿಂದೆ ಆರೋಪಿತನ ಕೈವಾಡ ಸ್ಪಷ್ಟವಾಗಿ ಕಾಣುತ್ತಿದೆ ಎನ್ನಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಶಂಕಿತ ಉಗ್ರನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಶಾರೀಕ್ ಎಂದು ಗುರುತಿಸಲಾಗಿದೆ.
ಹೌದು!!ಮಂಗಳೂರಿನ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ (Auto Blast) ನಿಗೂಢ ಸ್ಫೋಟದ ಹಿಂದೆ ಉಗ್ರರ ಕೃತ್ಯ ಮುನ್ನಲೆಗೆ ಬಂದಿದೆ.
ಆಟೋ ಸ್ಫೋಟಗೊಂಡ ಸ್ಥಳದಲ್ಲಿ ಪ್ರೇಮ್ರಾಜ್ ಹೆಸರಿನ ಆಧಾರ್ ಕಾರ್ಡ್ (Fake Aadhar Card) ದೊರೆತ್ತಿದ್ದು, ಈ ಬಳಿಕ ಆಧಾರ್ ಕಾರ್ಡ್ ನ ಜಾಡು ಹುಡುಕುತ್ತಾ ಹೊರಟ ಖಾಕಿ ಪಡೆಗೆ ಇದೊಂದು ನಕಲಿ ದಾಖಲೆ ಅನ್ನುವ ಸಂಗತಿ ತಿಳಿದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಶಂಕಿತ ಉಗ್ರನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಶಾರೀಕ್ ಎಂದು ಗುರುತಿಸಲಾಗಿದೆ.
ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಶಾರೀಕ್ ಚಿಕಿತ್ಸೆ ಪಡೆಯುತ್ತಿದ್ದು, ಶೇ.40 ರಷ್ಟು ಶಾರೀಕ್ ದೇಹ ಸುಟ್ಟು ಹೋಗಿರುವ ಜೊತೆಗೆ ಮುಖದ ಬಾವು ಬಂದಿದ್ದ ಕಾರಣ ಪೊಲೀಸರಿಗೆ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಶಿವಮೊಗ್ಗದಿಂದ ಶಾರೀಕ್ ಪೋಷಕರನ್ನು ಮಂಗಳೂರಿಗೆ ಕರೆಸಿಕೊಂಡರೆ, ಪೋಷಕರು ಶಾರೀಕ್ ನನ್ನು ಗುರುತಿಸಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ .
ಹಾಗಾಗಿ, ಮಂಗಳೂರಿನ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚುವ ನಿಟ್ಟಿನಲ್ಲಿ ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ.
ಒಂದು ವೇಳೆ ಪೋಷಕರು ಗುರುತು ಹಿಡಿಯಲು ಸಾಧ್ಯವಾಗದೆ ಇದ್ದಾಗ ಡಿಎನ್ಎ ಪರೀಕ್ಷೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದೆಡೆ ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಹಿನ್ನೆಲೆ ತೀರ್ಥಹಳ್ಳಿಯ ಸೊಪ್ಪುಗಡ್ಡೆಯಲ್ಲಿರುವ ಶಾರೀಖ್ ನಿವಾಸ ಹಾಗು ಶಾರೀಕ್ ಸಂಬಂಧಿಕರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿವರೆಗೂ ಸುಮಾರು ಒಟ್ಟು 4 ಮನೆಗಳ ಮೇಲೆ ದಾಳಿ ಪೊಲೀಸರು ದಾಳಿ ನಡೆಸಿದ್ದಾರೆ.ಆಟೋ ಚಾಲಕ ಪುರಷೋತ್ತಮ್ ಮತ್ತು ಶಂಕಿತ ಉಗ್ರನಿಗೆ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಟೋ ಚಾಲಕನ ಬೆನ್ನು ಮತ್ತು ಕಾಲಿನ ಭಾಗದಲ್ಲಿ ಗಾಯಗಳಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಇನ್ನು ಶಂಕಿತ ಉಗ್ರ ಶಾರೀಕ್ ಮುಖ ಊದಿಕೊಂಡಿದ್ದು, ಸುಮಾರು ಶೇ.40ರಷ್ಟು ದೇಹದ ಭಾಗ ಸುಟ್ಟಿರುವುದರಿಂದ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲದೆ ಯಾವುದೇ ಮಾಹಿತಿ ಸದ್ಯ ಕಲೆ ಹಾಕಲು ಆರೋಪಿಯ ಬಾಯಿಂದ ಹೇಳಿಸಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ. ಶಂಕಿತ ಉಗ್ರನ ಜಾಡು ಕಂಡು ಹಿಡಿಯುವ ನಿಟ್ಟಿನಲ್ಲಿ ಉಗ್ರ ವಾಸವಿದ್ದ ಮನೆಗೆ ಬಾಂಬ್ ಪತ್ತೆ ದಳ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಇದರ ಜೊತೆಗೆ NIA ತಂಡವೂ ಭೇಟಿ ನೀಡಿ, ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಮನೆಯಲ್ಲಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಛಾವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಈ ಹಿಂದೆ ಸಂಘಿ ಮತ್ತು ಮನುವಾದಿಗಳೇ ನಿಮ್ಮ ಜೊತೆ ಡೀಲ್ ಮಾಡಲು ಲಷ್ಕರ್ ಮತ್ತು ತಾಲಿಬಾನ್ಗಳನ್ನ ಕರೆಸುವಂತೆ ಮಾಡಬೇಡಿ ಎಂದು ಗೋಡೆಯ ಮೇಲೆ ಬರೆಯಲಾದ ಪ್ರಕರಣದಲ್ಲಿ ಎಂಟು ತಿಂಗಳು ಜೈಲಿನಲ್ಲಿದ್ದ ಮಾಝ್ ಮುನೀರ್ ಜೊತೆ ಶಾರೀಕ್ ಜಾಮೀನಿನ ಮೇಲೆ ಹೊರ ಬಂದಿದ್ದರು . ಈ ನಡುವೆ ಶಂಕಿತ ಆರೋಪಿ ಸೂಸೈಡ್ ಬಾಂಬರ್ ಆಗಿದ್ದನೇನೋ?? ಎಂಬ ಅವಮಾನ ಪೋಲಿಸ್ ಪಡೆಗೆ ಗಾಢವಾಗಿ ಕಾಡುತ್ತಿದೆ.ಈ ರೀತಿ ಅವಮಾನ ಮೂಡಲು ಕಾರಣವೂ ಇದೆ.ಬೇರೆ ವ್ಯಕ್ತಿಯೋರ್ವನ ಜೊತೆ ಬಂದಿದ್ದ ಶಾರೀಕ್ ಮದ್ಯ ಖರೀದಿ ಮಾಡಿದ್ದು, ಈ ಸಂದರ್ಭ ಎರಡು ಮೂರು ಶರ್ಟ್ ಧರಿಸಿರುವುದನ್ನು ಕೆಲವರು ಗಮನಿಸಿದ್ದಾರೆ. ಹಾಗಾಗಿ ಈತ ಸೂಸೈಡ್ ಬಾಂಬರ್ ಆಗಿರಬಹುದಾ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.
ಶಂಕಿತ ಆರೋಪಿ ಶಾಕೀರ್ ಜೊತೆ ಬಂದಿದ್ದ ಎನ್ನಲಾದ ವ್ಯಕ್ತಿಯ ಪತ್ತೆಗೂ ಪೊಲೀಸರು ಬಲೆ ಬೀಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅನುಮಾನಾಸ್ಪದ ವ್ಯಕ್ತಿ ಹಾಗೂ ಚಾಲಕ ಪುರುಷೋತ್ತಮ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಐಸಿಯು ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಇನ್ನು ಆಟೋ ಚಾಲಕ ಪುರುಷೋತ್ತಮ್ ಮಕ್ಕಳು ಆಸ್ಪತ್ರೆಗೆ ಭೇಟಿ ನೀಡಿ, ತಂದೆಯ ಆರೋಗ್ಯ ವಿಚಾರಿಸಿದ್ದಾರೆ.