ಜೀವ ಬೆದರಿಕೆ ಹಾಕಿದ ಪ್ರಕರಣ : ‘ಕಾಮಿಡಿ ಕಿಲಾಡಿʼ ನಯನ ವಿರುದ್ಧ ದೂರು ದಾಖಲು

ಕನ್ನಡದ ರಿಯಾಲಿಟಿ ಶೋಗಳಲ್ಲಿ ಒಂದಾದ ಜೀ ಕನ್ನಡದ ಜನಪ್ರಿಯ ಶೋ ಕಾಮಿಡಿ ಕಿಲಾಡಿಗಳ (Comedy Khiladigalu) ಮೂಲಕ ಎಲ್ಲರನ್ನು ರಂಜಿಸುತ್ತಿದ್ದ ನಯನಾ ವಿರುದ್ಧ ಬೆಂಗಳೂರಿನ ಆರ್.ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು!!. ಕನ್ನಡದಲ್ಲಿ ರಿಯಾಲಿಟಿ ಶೋ ನಲ್ಲಿ ಮಾತ್ರವಲ್ಲದೇ, ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರ ಮಾಡಿರುವ ಹಾಸ್ಯ ಕಲಾವಿದೆ ನಯನಾ ತಮಗೆ ಜೀವ ಬೆದರಿಕೆ ಹಾಕಿದ್ದು ಜೊತೆಗೆ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸೋಮಶೇಖರ್ ಎನ್ನುವವರು ಬೆಂಗಳೂರಿನ ಆರ್.ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ .

ಹಣದ ಹಂಚಿಕೆ ವಿಚಾರಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ಆರೋಪ ಮಾಡಿದ್ದು, ಜೀವ ಬೆದರಿಕೆ ಮತ್ತು ನಿಂದನೆ ಆರೋಪದಡಿ ಹಾಸ್ಯ ನಟಿಯ ಮೇಲೆ ದೂರು ದಾಖಲಾಗಿದೆ. ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ನಯನಾ ಮತ್ತು ಟೀಮ್ ಬಹುಮಾನವಾಗಿ 3 ಲಕ್ಷ ರೂಪಾಯಿ ಹಣ ಪಡೆದಿದ್ದು, ಈ ತಂಡದಲ್ಲಿ ಸೋಮಶೇಖರ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಹಣದಲ್ಲಿ ಸರಿಯಾದ ಪಾಲು ಆಗಿಲ್ಲ ಎನ್ನುವ ಕಾರಣಕ್ಕಾಗಿ ಸೋಮಶೇಖರ್ ಮತ್ತು ನಯನಾ ಮಧ್ಯ ಮನಸ್ತಾಪ ನಡೆದಿದ್ದು, ನಯನಾರ ಧ್ವನಿ ಎಂದು ಹೇಳಲಾದ ಆಡಿಯೋ ವೈರಲ್ ಆಗಿದೆ. ಅದರಲ್ಲಿ ಸೋಮಶೇಖರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮಾತುಗಳು ಇವೆ ಎನ್ನಲಾಗಿದೆ.

ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡುತ್ತಾರೆ ಅಲ್ಲದೆ, ನಾನು ಸ್ಟೇಶನ್ ನಲ್ಲೇ ಇದ್ದೇನೆ. ನೀನು ಹಣ ಕೊಡದೇ ಇದ್ದರೆ, ನಿನ್ನನ್ನು ಏನು ಬೇಕಾದರೂ ಮಾಡುವುದಕ್ಕೆ ರೆಡಿ ಎಂದು ನಯನಾರ ಧ್ವನಿ ಎಂದು ಹೇಳಲಾದ ಆಡಿಯೋದಲ್ಲಿ ಅವಾಜ್ ಹಾಕುವಂತಹ ಮಾತುಗಳು ಕೇಳಿಬರುತ್ತಿವೆ.

ಸೋಮಶೇಖರ್ ರವರು ಈ ಕುರಿತು , ನಯನಾ ಆರೋಪದಲ್ಲಿ ಹುರುಳಿಲ್ಲ ಜೊತೆಗೆ ನಾನು ಯಾರಿಗೂ ಹಣ ಕೊಡಬೇಕಾಗಿಲ್ಲ ಎಂದು ಹೇಳಿದ್ದು, ಜೊತೆಗೆ ಚಾನಲ್ ಹೇಳಿದಂತೆ ನಾನು ಮಾಡಿದ್ದೇನೆ ಆದರೆ, ನಯನಾ ಹಣದ ವಿಚಾರವಾಗಿ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave A Reply

Your email address will not be published.