ನಿರ್ಗತಿಕ ವಿಧವೆಯರಿಗಾಗಿ ಸರ್ಕಾರ ನೀಡುತ್ತಿದೆ ವಿಧವಾ ವೇತನ | ಈ ಯೋಜನೆಯ ಮಾಹಿತಿ ಇಲ್ಲಿದೆ…
ಸರಕಾರ ಜನರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಆದ್ರೆ, ಅದೆಷ್ಟೋ ಜನರಿಗೆ ಮಾಹಿತಿ ಕೊರತೆಯಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದೇ ಸರ್ಕಾರದ ಉದ್ದೇಶ.
ಅದರಂತೆ, ಸರ್ಕಾರವು 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನವನ್ನು ನೀಡುತ್ತಿದೆ. ನಿರ್ಗತಿಕ ವಿಧವೆ ಅಂದರೆ ಪತಿಯ ಜೀವಿಸಿಲ್ಲದ ಅಥವಾ ಕಾನೂನು ರೀತ್ಯಾ ಮೃತಪಟ್ಟಿರುವನೆಂದು ಭಾವಿಸುವವನ ಪತ್ನಿ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12,000/- ಹಾಗೂ ನಗರ ಪ್ರದೇಶಗಳಲ್ಲಿ ರೂ.17,000/- ಕ್ಕಿಂತ ಕಡಿಮೆ ಇರಬೇಕು.
ಅರ್ಹತೆ :
*18 ವರ್ಷ ಮೇಲ್ಪಟ್ಟ ವಿಧವೆಯರಾಗಿರಬೇಕು.
*ಅರ್ಜಿದಾರಳು ಅಥವಾ ಆಕೆಯ ಮರಣ ಹೊಂದಿದ ಪತಿಯು ಅರ್ಜಿ ದಿನಾಂಕದಿಂದ ಹಿಂದಿನ ನಿರಂತರ 3 ವರ್ಷಗಳ ಅವಧಿಗೆ ಕಡಿಮೆ ಇಲ್ಲದಂತೆ ಈ ರಾಜ್ಯದ ನಿವಾಸಿಯಾಗಿಬೇಕು.
*ವಿಧವಾ ವೇತನಕ್ಕಾಗಿ ಸಲ್ಲಿಸುವ ಅರ್ಜಿಯು ಗೊತ್ತುಪಡಿಸಿದ ನಮೂನೆಯಲ್ಲಿರಬೇಕು ಮತ್ತು ಅದನ್ನು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಸಲ್ಲಿಸಬೇಕು. ಬೇರೆ ಪಿಂಚಣಿ ಪಡೆಯುತ್ತಿರುವವರು ವಿಧವಾ ವೇತನಕ್ಕೆ ಅರ್ಹರಾಗುವುದಿಲ್ಲ.
*ಮೃತರಾಗುವ ವರೆಗೆ ಅಥವಾ ಪುನರ್ ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದು ನಿಗದಿತ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರೆಗೆ ವಿಧವಾ ವೇತನ ಪಡೆಯಬಹುದು.
*ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕ ರಣ ಪತ್ರ ಅಥವಾ ಭಾರತ ಚುನಾವಣ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.
ಸಲ್ಲಿಸಬೇಕಾದ ದಾಖಲೆಗಳು:
ಆಧಾರ್ ಕಾರ್ಡ್ ಪ್ರತಿ, ಆದಾಯ, ವಿಳಾಸ, ಪತಿಯ ಮರಣ ದೃಢೀಕರಣ ಪತ್ರ ಹಾಗೂ ಬ್ಯಾಂಕ್/ಅಂಚೆ ಖಾತೆ ಪ್ರತಿ, ವಯಸ್ಸಿನ ದೃಢೀಕರಣ ಪತ್ರ
ವಯೋಮಿತಿ: 18ರಿಂದ 39 ವರ್ಷ:
ಕೇಂದ್ರದ ಪಾಲು ಶೂನ್ಯ, ರಾಜ್ಯದ ಪಾಲು 800, ಒಟ್ಟು 800 ರೂ.
40ರಿಂದ 79 ವರ್ಷ: ಕೇಂದ್ರದ ಪಾಲು 300, ರಾಜ್ಯದ ಪಾಲು 500, ಒಟ್ಟು 800 ರೂ.
ಯೋಜನೆ ಉದ್ದೇಶ: ನಿರ್ಗತಿಕ ವಿಧವೆಯರಿಗೆ ಆರ್ಥಿಕ ಸಹಾಯ ಒದಗಿಸುವುದು
ಅರ್ಜಿ ಸಲ್ಲಿಕೆ :
ಆಯಾ ವ್ಯಾಪ್ತಿಯ ನಾಡ ಕಚೇರಿ, ತಾಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು ಅಥವಾ (http://www.nadakacheri.karnataka.gov.in) ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗಿನ್ ಆಗಿ ದಾಖಲೆ ನಮೂದಿಸಿ ಅರ್ಜಿ ಸಲ್ಲಿಸಬಹುದು ಹಾಗೂ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಯೋಜನೆಯ ಸಹಾಯವಾಣಿ 155245 ಸಂಖ್ಯೆಗೆ ಕರೆ ಮಾಡಬಹುದು.