ರಾಜ್ಯ ಸರಕಾರದಿಂದ 2023 ನೇ ಸಾಲಿನ ಅಧಿಕೃತ ಸಾರ್ವತ್ರಿಕ,ಪರಿಮಿತ ರಜೆಗಳ ಪಟ್ಟಿ ಬಿಡುಗಡೆ!

ಕರ್ನಾಟಕ ಸರ್ಕಾರವು 2023ನೇ ಸಾಲಿನ ಸರ್ಕಾರಿ ನೌಕರರ ರಜಾ ದಿನಗಳನ್ನು ಅಧಿಕೃತವಾಗಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.

 

ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2023ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.

  • ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ 15.01.2023 ಬಸವ ಜಯಂತಿ/ಅಕ್ಷಯ ತೃತೀಯ 23.04.2023ಮತ್ತು ನರಕ ಚತುರ್ದಶಿ 12.11.2023 ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ 14.10.2023ಹಾಗೂ ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ (22.04.2023) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ
    (28.10.2023) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
  • ದಿನಾಂಕ:01.04.2023 ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ, ಸದರಿ ದಿನದಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜಾ ಇರುತ್ತದೆ.
  • ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸುವರು.
  • ನೂತನ ವರ್ಷಾರಂಭ (01.01.2023), ದೇವರ ದಾಸಿಮಯ್ಯ ಜಯಂತಿ (26.03.2023), ವಿಶ್ವ ಕರ್ಮ ಜಯಂತಿ (17.09.2023) ಮತ್ತು ಕ್ರಿಸ್‌ಮಸ್ ಈವ್ (24.12.2023) ಭಾನುವಾರದಂದು, ಹಾಗೂ ಹೋಲಿ ಸ್ಮಾಟರ್ ಡೇ (08.04.2023) ಎರಡನೇ ಶನಿವಾರದಂದು ಬರುವುದರಿಂದ, ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ,
  • ಸೌರಮಾನ ಯುಗಾದಿ (14.04.2023) ಶುಕ್ರವಾರ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ, ಸ್ವರ್ಣಗೌರಿ ವ್ರತ (18.09.2023) ಸೋಮವಾರ ವರಸಿದ್ಧಿ ವಿನಾಯಕ ವ್ರತ ಹಾಗೂ ಅನಂತ ಪದ್ಮನಾಭ ವ್ರತ (28.09.2023) ಗುರುವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಈ ಮೇಲಿನ ದಿನಾಂಕವು 2023ರ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗುವ ರಜಾ ದಿನಗಳ ಪಟ್ಟಿ ಬಿಡುಗಡೆಯನ್ನು ವರದಿಯನ್ನು ಸರ್ಕಾರವು ಆದೇಶಿಸಿದೆ.

Leave A Reply

Your email address will not be published.