SBI ನಲ್ಲಿ ಖಾತೆ ಹೊಂದಿರುವ ಉದ್ಯೋಗಿಗಳಿಗೆ ಗುಡ್ ನ್ಯೂಸ್!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ-ಹೊಸ ಸೇವೆಗಳನ್ನು ಒದಗಿಸುತ್ತಲೇ ಬಂದಿದ್ದು, ಇದೀಗ ಸ್ಯಾಲರಿ ಅಕೌಂಟ್ ಹೊಂದಿರೋರಿಗೆ ಸಿಹಿಸುದ್ದಿ ನೀಡಿದೆ.
ಹೌದು. ಎಸ್ಬಿಐ ಸ್ಯಾಲರಿ ಅಕೌಂಟ್ ಇರೋರಿಗೆ ಯೋನೋ ಆಪ್ ಮೂಲಕ ಸುಮಾರು 35 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯುವ ಅವಕಾಶವನ್ನು ನೀಡಿದೆ. ಡಿಜಿಟಲ್ ಮೂಲಕ ಸಾಲವನ್ನು ಪಡೆಯಲು ಸಹಾಯಕವಾಗಲಿದೆ ಎಂದು ಈ ಆಪ್ ಮೂಲಕ ಸಾಲವನ್ನು ಪಡೆಯುವ ಅವಕಾಶವನ್ನು ಎಸ್ಬಿಐ ನೀಡಿದೆ.
ಎಸ್ಬಿಐ ಯೋನೋ ಆಪ್ನಲ್ಲಿ ರಿಯಲ್-ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ (ಆರ್ಟಿಎಕ್ಸ್ಸಿ) ಅನ್ನು ಪರಿಚಯಿಸಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ರಿಯಲ್-ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ (ಆರ್ಟಿಎಕ್ಸ್ಸಿ) ಸಾಲವು ಸಂಪೂರ್ಣವಾಗಿ ಡಿಜಿಟಲ್ ಸಾಲ ವ್ಯವಸ್ಥೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಬಿಐ ಚೇರ್ಮನ್ ದಿನೇಶ್ ಖಾರಾ, “ನಮ್ಮ ಕ್ವಾಲಿಫೈಡ್ ಗ್ರಾಹಕರಿಗೆ ನಾವು ಯೋನೋ ಆಪ್ ಮೂಲಕ ರಿಯಲ್-ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ (ಆರ್ಟಿಎಕ್ಸ್ಸಿ) ಸಾಲವನ್ನು ಪಡೆಯಬಹುದು. ಡಿಜಿಟಲ್ ರೂಪದಲ್ಲಿ ಸಾಲವನ್ನು ಪಡೆಯಬಹುದು. ಯಾವುದೇ ತೊಂದರೆ ಇಲ್ಲದೆ, ಯಾವುದೇ ಕಾಗದ ದಾಖಲೆಯನ್ನು ಸಲ್ಲಿಸದೆ ಸಾಲವನ್ನು ಪಡೆಯಬಹುದು,” ಎಂದು ತಿಳಿಸಿದ್ದಾರೆ.
ಎಕ್ಸ್ಪ್ರೆಸ್ ಕ್ರೆಡಿಟ್ ವೇತನವನ್ನು ಪಡೆಯುವವರಿಗೆ ನೀಡುವ ಸಾಲವಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಡಿಫೆನ್ಸ್ನಲ್ಲಿರುವ ವೇತನ ಪಡೆಯುವ ಗ್ರಾಹಕರು ಈ ಸಾಲವನ್ನು ಪಡೆಯಬೇಕಾದರೆ ಎಸ್ಬಿಐ ಬ್ಯಾಂಕ್ಗೆ ಭೇಟಿ ನೀಡಬೇಕಾಗಿಲ್ಲ. ಕ್ರೆಡಿಟ್ ಚೆಕ್, ಸಾಲ ಪಡೆಯುವ ಅರ್ಹತೆ ಚೆಕ್ ಮಾಡುವುದು, ಶುಲ್ಕ, ದಾಖಲೆ ಎಲ್ಲವು ಕೂಡಾ ಆನ್ಲೈನ್ ಮೂಲಕ ನಡೆಯಲಿದೆ.