ನಟ ಚೇತನ್‌ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ದೇಣಿಗೆ ಸಂಗ್ರಹ; ರಾಷ್ಟ್ರೀಯ ಹಿಂದೂ ಸಮಿತಿಯಿಂದ ವಿಭಿನ್ನ ಅಭಿಯಾನ

Share the Article

ಮೈಸೂರು: ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಬೆಂಬಲಿಸಿ ನಟ ಚೇತನ್‌ ಅಹಿಂಸಾ ಪೋಸ್ಟ್​ ಹಾಕಿದ್ದರು.
ಇದರ ವಿರುದ್ದ ಮೈಸೂರಿನ ರಾಷ್ಟ್ರೀಯ ಹಿಂದೂ ಸಮಿತಿಯಿಂದ, ಅಗ್ರಹಾರದ ಪ್ರಮುಖ‌ ರಸ್ತೆ ಅಂಗಡಿಗೆ ತೆರಳಿ ಪೇ ಚೇತನ್ ಪೋಟೋ ಹಿಡಿದು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.

ಚೇತನ್ ನಮ್ಮ ದೇಶದಲ್ಲಿ ಇರಲು ಯೋಗ್ಯನಲ್ಲ ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎನ್ನುವ ಅಭಿಯಾನವನ್ನು ಶುರು ಮಾಡಿದ್ದಾರೆ.
ನಟ ಚೇತನ್ ಅಹಿಂಸಾ ತಮ್ಮ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ 5 ದಿನಗಳ ಹಿಂದೆ ಬೆಂಗಳೂರಿನ ನ್ಯೂ ಹೊರೈಜನ್​ ಕಾಲೇಜಿನ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದರು ಅವರನ್ನು ಬೆಂಬಲಿಸುವ ಮೂಲಕ ಮತ್ತೆ ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ.

ಚೇತನ್​ ಅಹಿಂಸಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ಕಾಲೇಜ್​ ಫೆಸ್ಟ್​ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆ ಕೂಗಿದ್ದಾರೆ. ಇದನ್ನು ಅವರು ವಿನೋದಕ್ಕಾಗಿ ಮಾಡಲಾಗಿದೆ.

Leave A Reply