Turmeric In Winter: ಈ ರೀತಿಯಾಗಿ ಅರಿಶಿನವನ್ನು ಆಹಾರದಲ್ಲಿ ಬಳಸಿ, ಶೀತ-ಕೆಮ್ಮು ಕಡಿಮೆಯಾಗುತ್ತೆ!

ಭಾರತದಲ್ಲಿ ಅರಶಿನ ಬಳಕೆ ಹೆಚ್ಚಾಗಿ ಬಳಸುತ್ತಾರೆ. ಅರಶಿನ ಇಲ್ಲದೇ ಹಿಂದೂ ಸಂಪ್ರದಾಯದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಹೌದು ಅರಶಿನ ಅಂದರೆ ತನ್ನದೇ ಆದ ಸ್ಥಾನ ಮಾನ ಹೊಂದಿದೆ. ಅಲ್ಲದೆ ಆರೋಗ್ಯಕ್ಕೂ ರಾಮಬಾಣ ಆಗಿದೆ ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅದಲ್ಲದೆ ಸಾಂಬಾರು ಪದಾರ್ಥಗಳಲ್ಲಿ ಸಹ ಹೆಚ್ಚಾಗಿ ಬಳಸುತ್ತೇವೆ. ಅರಶಿನ ಕೆಲವೊಂದು ಆರೋಗ್ಯ ಸಮಸ್ಯೆಗೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ ಆಯುರ್ವೇದದ ಪ್ರಕಾರ ಅರಶಿನದ ಉಪಯೋಗವನ್ನು ಪರಿಚಯಿಸಿಕೊಳ್ಳಲೇ ಬೇಕು.

  • ಈಗಾಗಲೇ ಚಳಿಗಾಲದ ಆರಂಭ ಆದ ಕಾರಣ ಜ್ವರದ ಆರಂಭವನ್ನು ಸೂಚಿಸುತ್ತದೆ. ಇದಕ್ಕೆ ಅರಿಶಿನ ಹಾಲು ನೈಸರ್ಗಿಕ ಔಷಧವಾಗಿದೆ. ಅರಿಶಿನದಲ್ಲಿ ಬ್ಯಾಕ್ಟೀರಿಯಾದ ಸೋಂಕನ್ನು ತೆಗೆದುಹಾಕುವ ಶಕ್ತಿ ಇದೆ.

•ಮುಖ್ಯವಾಗಿ ಚಳಿಗಾಲದಲ್ಲಿ ಕೊಬ್ಬುಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ನಾವು ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುವ ಬಿಸಿ ಪಾನೀಯಗಳನ್ನು ಸೇವಿಸುವಾಗ ಜೊತೆಗೆ ಅರಿಶಿನ ಸೇವಿಸಬೇಕು. ಆಗ ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

•ಅರಶಿನವನ್ನು ಹಚ್ಚಿ ಸ್ನಾನ ಮಾಡಬಹುದು. ಮುಖವನ್ನು ಶುಭ್ರ ಗೊಳಿಸಬಹುದು. ಅರಶಿನ ಹಚ್ಚುವುದರಿಂದ ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ಬರುತ್ತದೆ .

• ಚಳಿಗಾಲದಲ್ಲಿ, ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಬಹುದು. ಚಳಿಗಾಲದ ಸಮಯದಲ್ಲಿ ಗಂಟಲು ನೋವು, ನೆಗಡಿ, ಕೆಮ್ಮು ಮತ್ತು ದೇಹದ ನೋವುಗಳಿಗೆ ಕಾರಣವಾಗುತ್ತದೆ. ಅರಿಶಿನವು ಒಂದು ಉತ್ತಮ ಅಂಶವಾಗಿದ್ದು, ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

• ಅರಶಿನವು ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಆಗಿ ನಮ್ಮಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ರೋಗನಿರೋಧಕ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಚಳಿಗಾಲದ ಆಹಾರದಲ್ಲಿ ಅರಿಶಿನವನ್ನು ಮಿಸ್ ಮಾಡದೇ ಸೇರಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.

  • ಅರಶಿನವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ವೈರಸ್, ಶೀತ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಸಾಬೀತಾಗಿದೆ.
    ಅರಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶದಿಂದಾಗಿ ದೇಹದಲ್ಲಿರುವ ಟಾಕ್ಸಿನ್ ಅನ್ನು ಒಳಗಿನಿಂದ ಹೊರಹಾಕುತ್ತದೆ, ಈ ಮೂಲಕ ದೇಹವನ್ನು ಆರೋಗ್ಯಕರವಾಗಿಡಲು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ.
  • ಅರಿಶಿನ ಚಹಾ ಸೇವಿಸುವುದರಿಂದ ಚಳಿಗಾಲದಲ್ಲಿ ಕೀಲು ನೋವು ಮತ್ತು ಸೈನಸ್ ಅನ್ನು ನಿಭಾಯಿಸಲು ಸಾಕಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದನ್ನು ನಿಯಮಿತವಾಗಿ ಕುಡಿಯುವುದು ಬಹಳ ಉತ್ತಮ. • ಅರಶಿನವನ್ನು ಸಾಂಪ್ರದಾಯಿಕ ಮಸಾಲೆಯ ಆಂಟಿ-ವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದಾಗಿ ಗಂಟಲಿನ ನೋವಿಗೆ ತ್ವರಿತ ಪರಿಹಾರ ನೀಡುತ್ತದೆ ಮತ್ತು ಅರಶಿನದ ಆಂಟಿಫಂಗಲ್ ಗುಣಲಕ್ಷಣಗಳು ಇದನ್ನು ವಿವಿಧ ಸೋಂಕುಗಳಿಗೆ ಪರಿಹಾರವಾಗಿ ಬಳಸಲು ಮತ್ತೊಂದು ಕಾರಣ ಎನ್ನಬಹುದು.

ಹೀಗೆ ನಾನಾ ರೀತಿಯಲ್ಲಿ ಅರಶಿನವನ್ನು ಉಪಯೋಗಿಸುವ ಮೂಲಕ ಅದರಿಂದಾಗಿ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.