ಸಕ್ಕತ್ ಆಗಿ ಬ್ಯೂಟಿ ಫಾಲೋ ಮಾಡೋರಿಗೆ ಇಲ್ಲಿದೆ ಸಿಂಪಲ್ ಆಗಿರೋ ಆರೋಗ್ಯಕರ ಟಿಪ್ಸ್
ಇಂದಿನ ಫ್ಯಾಷನ್ ಯುಗದಲ್ಲಿ ಪ್ರತಿಯೊಬ್ಬರು ಕೂಡ ತಮ್ಮನ್ನು ತಾವು ಚಂದ ಕಾಣಿಸಿಕೊಳ್ಳಲು ಹಲವು ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿಯೇ ಪಾಲಿಸುತ್ತಾರೆ. ಅದರಲ್ಲೂ ಹುಡುಗಿಯರು ಅಂದ್ರೆ ಒಂದು ಕೈ ಮೇಲೆಯೇ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಕೇವಲ ಮುಖದ ಸೌಂದರ್ಯ ಕಾಪಾಡಿ ಕೊಳ್ಳದೆ ಉಗುರು, ತಲೆ ಕೂದಲು ಹೀಗೆ ಆರೈಕೆ ಮಾಡುವುದರ ಮೂಲಕ ತಮ್ಮನ್ನು ತಾವು ಸುಂದರವಾಗಿಸುತ್ತಾರೆ.
ಹೌದು. ಉಗುರನ್ನು ಸುಂದರವಾಗಿಸಲು ಮುಖ್ಯವಾಗಿ ಬಳಸೋದು ನೈಲ್ ಪಾಲಿಶ್. ಆದ್ರೆ, ಹುಡುಗಿಯರ ಪ್ರಾಬ್ಲಮ್ ಏನಪ್ಪಾ ಅಂದ್ರೆ, ಅದನ್ನ ಬಳಸೋಕೆ ಹೇಗಾದ್ರು ಬಳಸುತ್ತಾರೆ. ಆದ್ರೆ, ರಿಮೂವ್ ಮಾಡೋದೇ ಟೆನ್ಶನ್. ಇದಕ್ಕಾಗಿಯೇ ಪರದಾಡುತ್ತಾರೆ. ಹಾಗೂ ಅನೇಕ ಕೆಮಿಕಲ್ ಗಳನ್ನು ಕೂಡ ಬಳಸಿ ರಿಮೂವ್ ಮಾಡುತ್ತಾರೆ. ಆದ್ರೆ, ನಾವೀಗ ನಿಮಗೆ ಸಿಂಪಲ್ ಆಗಿ ಆರೋಗ್ಯಕರವಾಗಿ ಮಾತ್ರವಲ್ಲದೆ ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಸಿ ನೈಲ್ ಪಾಲಿಶ್ ರಿಮೂವ್ ಮಾಡೋದನ್ನ ಹೇಳಿಕೊಡುತ್ತೇವೆ..
ಮೊದಲನೆಯದಾಗಿ ನಿಂಬೆ. ನಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲಕ್ಕೆ ನೈಲ್ ಪಾಲಿಶ್ ತೆಗೆಯುವ ಶಕ್ತಿ ಇದೆ. ಆದ್ದರಿಂದ ನೀವು ನಿಂಬೆ ರಸವನ್ನು ಉಗುರಿನ ಮೇಲೆ ರಬ್ ಮಾಡಬಹುದು. ರಬ್ ಮಾಡಿದ ನಂತರ ಸ್ವಲ್ಪ ಸಾಬೂನು ಎಣ್ಣೆ ಅಥವಾ ವಿನೆಗರ್ ಹಾಕಿ ಉಜ್ಜಿದರೆ ನೀವು ಸುಲಭವಾಗಿ ನೈಲ್ ಪಾಲಿಷ್ ಅನ್ನು ತೆಗೆದುಹಾಕಬಹುದು.
ಹಾಗೆಯೇ ಇನ್ನೊಂದು ಅಸ್ತ್ರ ಟೂತ್ಪೇಸ್ಟ್. ಟೂತ್ಪೇಸ್ಟ್ನಲ್ಲಿರುವ ಈಥೈಲ್ ಅಸಿಟೇಟ್ ರಾಸಾಯನಿಕವು ನೈಲ್ ಪಾಲಿಷ್ ರಿಮೂವರ್ನಲ್ಲಿಯೂ ಇದೆ. ಹಾಗಾಗಿ ಟೂತ್ ಪೇಸ್ಟ್ ಅನ್ನು ಉಗುರುಗಳ ಮೇಲೆ ಹಚ್ಚಿ 5 ನಿಮಿಷದ ನಂತರ ಉಜ್ಜಿದರೆ ನೈಲ್ ಪಾಲಿಶ್ ಪೂರ್ಣವಾಗಿ ಹೋಗುತ್ತದೆ, ಜೊತೆಗೆ ಉಗುರಿನ ಅಂದ ಹೆಚ್ಚಾಗುತ್ತದೆ. ನೋಡಿದ್ರಲ್ಲ ಸಿಂಪಲ್ ಆದ ವಸ್ತು ಬಳಸಿ ಹೇಗೆ ರಿಮೂವ್ ಮಾಡಬಹುದು ಎಂದು.. ಹಾಗಿದ್ರೆ, ಈ ಟಿಪ್ಸ್ ಬಳಸಿ ನಿಮ್ಮ ಅಂದವನ್ನು ಚಂದವಾಗಿಸಿಕೊಳ್ಳಿ..