ಮಗಳಿನೊಂದಿಗೆ ಸಮಯ ಕಳೆಯಲು ಅಪ್ಪ ಮಾಡಿದ ಈ ನಿರ್ಧಾರ | ಇವರ ತ್ಯಾಗಕ್ಕೆ ‘ಸೂಪರ್ ಡ್ಯಾಡ್’ ಅನ್ನದೆ ಇರಲು ಸಾಧ್ಯವಿಲ್ಲ!

ಅದೆಷ್ಟೋ ಜನರು ಕೆಲಸಕ್ಕಾಗಿ ತನ್ನ ಫ್ಯಾಮಿಲಿಯಿಂದ ದೂರ ಉಳಿಯುತ್ತಾರೆ. ಯಾವುದೇ ಸಂಪರ್ಕ ಇಲ್ಲದೆ, ಹಗಲು ರಾತ್ರಿ ಅನ್ನದೆ ದುಡಿಯುತ್ತಾರೆ. ಕೆಲವೊಂದಷ್ಟು ಜನ ಕೆಲಸದ ಜೊತೆ ಫ್ಯಾಮಿಲಿಗೂ ಇಂಪಾರ್ಟೆನ್ಸ್ ಕೊಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ತನ್ನ ಪ್ರೀತಿಯ ಮಗಳಿಗಾಗಿ ತಂದೆ ಮಾಡಿದ ತ್ಯಾಗ ನೋಡಿದ್ರೆ ವಾವ್ ಸೂಪರ್ ಡ್ಯಾಡ್ ಅನ್ನದೆ ಇರಲು ಸಾಧ್ಯವಿಲ್ಲ.

 

ಹೌದು. ಐಐಟಿ ಖರಗ್‌ಪುರ ಪದವೀಧರ ಅಂಕಿತ್‌ ಜೋಶಿ ಎನ್ನುವವರು ನವಜಾತ ಮಗಳಿನೊಂದಿಗೆ ಸಮಯ ಕಳೆಯಲು ದೊಡ್ಡ ವೇತನದ ಉದ್ಯೋಗಕ್ಕೆಯೇ ರಾಜೀನಾಮೆ ನೀಡಿದ್ದಾರೆ. ಇವರು ಕೆಲವೇ ತಿಂಗಳ ಮೊದಲು ಒಂದು ಕಂಪನಿಯ ಹಿರಿಯ ಉಪಾಧ್ಯಕ್ಷರಾಗಿ ಹೊಸ ಉದ್ಯೋಗವನ್ನು ಅಂಕಿತ್‌ ಆರಂಭಿಸಿದ್ದರು. ಅವರಿಗೆ ದೊಡ್ಡ ಮಟ್ಟದ ಸಂಬಳ ಕೂಡ ಬರುತ್ತಿತ್ತು.

ಆದರೆ ಆಗ ತಾನೆ ಜನಿಸಿದ ಮಗುವಿನೊಂದಿಗೆ ಸಮಯ ಕಳೆಯಲು ಅವರು ಉದ್ಯೋಗವನ್ನೇ ತ್ಯಜಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅಂಕಿತ್‌, “ಇದೊಂದು ವಿಲಕ್ಷಣ ನಿರ್ಧಾರ ಎಂದು ನನಗೆ ಗೊತ್ತು. ವೃತ್ತಿ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಅನೇಕರು ಎಚ್ಚರಿಕೆ ನೀಡಿದರು. ಆದರೆ ನನ್ನ ನಿರ್ಧಾರವನ್ನು ಪತ್ನಿ ಆಕಾಂಕ್ಷ ಬೆಂಬಲಿಸಿದಳು,’ ಎಂದು ಹೇಳಿದ್ದಾರೆ. ಅವರ ನಿರ್ಧಾರಕ್ಕೆ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಉತ್ತಮ ತಂದೆ ಏನಿಸಿಕೊಳ್ಳುಲು ಇದು ಕೂಡ ಉತ್ತಮವಾದ ಮಾರ್ಗ ಎಂದು ಹೇಳಬಹುದಾಗಿದೆ…

Leave A Reply

Your email address will not be published.