5G Smartphone: 5G ಸ್ಮಾರ್ಟ್ಫೋನ್ ಖರೀದಿ ಮಾಡೋ ಪ್ಲ್ಯಾನ್‌ ಇದೆಯಾ? ಇಲ್ಲಿದೆ ನೋಡಿ ಬೆಸ್ಟ್ 5ಜಿ ಮೊಬೈಲ್ಗಳು.

ಫೋನ್ ಎನ್ನುವುದು ಮಾನವನ ಅವಿಭಾಜ್ಯ ಅಂಗವಾಗಿ ಹೋಗಿದೆ. ಏನೂ ಇಲ್ಲದಿದ್ದರೂ ನಡೆಯುತ್ತೆ, ಆದರೆ ಫೋನ್ ಇಲ್ಲದೆ ಒಂದಿಂಚು ಕದಲೋಕೂ ಆಗಲ್ಲ ಎನ್ನೋ ಪರಿಸ್ಥಿತಿ ಈಗ ಎಲ್ಲರದು ಅಲ್ವಾ. ಹಾಗಾದರೆ ನಾವು ಫೋನ್ ಪ್ರಿಯರಿಗೆ ಬೆಸ್ಟ್ ಫೋನ್ ಆಫರ್ ಅದರಲ್ಲೂ 5G ಫೋನ್ ಗಳ ಬಗ್ಗೆ ಕೆಲವೊಂದು ಮಾಹಿತಿ ತಿಳಿಸ್ತೀವಿ.

 

ಇತ್ತೀಚೆಗೆ ಮೊಬೈಲ್ ಕಂಪನಿಗಳಿಂದ ಹೊಸ ಹೊಸ ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ 5ಜಿ ನೆಟ್​ವರ್ಕ್​ ಬಂದಾಗಿನಿಂದ 5G ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. ಇನ್ನೂ ನೀವು ಖರೀದಿ ಮಾಡಬಹುದಾದ 5 ಬೆಸ್ಟ್ ಸ್ಮಾರ್ಟ್​ಫೋನ್​​ಗಳ ಲೀಸ್ಟ್​​ ಇಲ್ಲಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್33 5G: ಈ 5G ಸ್ಮಾರ್ಟ್​​​ಫೋನ್​ 6GB + 128GB ರೂಪಾಂತರವು 16,999 ರೂ ಯಿಂದ ಪ್ರಾರಂಭವಾಗುತ್ತದೆ. ಇದು 120Hz ರಿಫ್ರೆಶ್ ರೇಟ್​​ನೊಂದಿಗೆ ಕಾರ್ನಿಂಗ್ ಗೊರಿಲ್ಲಾ 5 ಗ್ಲಾಸ್​​ನೊಂದಿಗೆ 6.6 ಇಂಚಿನ FHD+ ಡಿಸ್​​ಪ್ಲೇಯೊಮದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗೇ ಇದು Android 12, One UI 4 OS ನಲ್ಲಿ ಕಾರ್ಯನಿರ್ವಹಿಸುತ್ತದೆ.

ಹಾಗೇ 50MP ಕ್ಯಾಮೆರಾ 5MP ಅಲ್ಟ್ರಾ ವೈಡ್, 2MP ಮ್ಯಾಕ್ರೋ, 2MP ಡೆಪ್ತ್ ಲೆನ್ಸ್‌ನೊಂದಿಗೆ ಹಿಂದಿನ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಮತ್ತು 8MP ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಇದ್ದು, ಈ ಸ್ಮಾರ್ಟ್‌ಫೋನ್‌ನಲ್ಲಿ 6000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಕೂಡ ಹೊಂದಿದೆ.

ರೆಡ್ಮಿ ನೋಟ್ 11ಟಿ 5G: ಇನ್ನೂ ಶಿಯೋಮಿಯ ರೆಡ್ಮಿ ನೋಟ್​ 11ಟಿ 5ಜಿ ಸ್ಮಾರ್ಟ್ಫೋನ್ ಸುಮಾರು 17,999 ರೂಪಾಯಿಗೆ ಲಭ್ಯವಿದೆ. ಈ ಸ್ಮಾರ್ಟ್​​ಫೋನ್​ 6.6-ಇಂಚಿನ FHD + ಡಿಸ್​​ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್​​ನೊಂದಿಗೆ ಇದನ್ನು ತಯಾರಿಸಲಾಗಿದೆ. ಇದು 33W ಪ್ರೊ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಹಾಗೂ 50MP AI ಮುಖ್ಯ + 8MP ಅಲ್ಟ್ರಾ-ವೈಡ್ ಜೊತೆಗೆ ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

CE 2 Lite 5G: ಹಾಗೇ ಒನ್​ಪ್ಲಸ್​ ಸ್ಮಾರ್ಟ್ಫೋನ್ 18,999 ದರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 6.59-ಇಂಚಿನ 401 PPI, IPS LCD ಡಿಸ್​ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್ ಹೊಂದಿದೆ. ಅಷ್ಟೇ ಅಲ್ಲದೆ, ಆಕ್ಟಾ ಕೋರ್ 2.2 GHz, ಡ್ಯುಯಲ್ ಕೋರ್ + 1.7 GHz, ಹೆಕ್ಸಾ ಕೋರ್ ಮತ್ತು ಸ್ನಾಪ್‌ಡ್ರಾಗನ್ 695 ಈ ಹ್ಯಾಂಡ್‌ಸೆಟ್‌ನ ಉತ್ತಮ ಫೀಚರ್ಸ್​ ಅನ್ನು ಹೊಂದಿದೆ. ಇನ್ನೂ ಕ್ಯಾಮೆರಾ ಸೆಟಪ್ ಬಗ್ಗೆ ಹೇಳಬೇಕಾದರೆ 64 MP + 2 MP + 2 MP ಜೊತೆಗೆ 16 MP ಮುಂಭಾಗದ ಕ್ಯಾಮೆರಾದೊಂದಿಗೆ ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಐಕ್ಯೂ Z6 5G: ಇದರ ಬೆಲೆ ಸುಮಾರು 15,499 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 20Hz ರಿಫ್ರೆಶ್ ರೇಟ್​ನೊಂದಿಗೆ 6.5-ಇಂಚಿನ FHD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಹಾಗೂ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು 50MP+ 2MP +2MP ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 16MP ಮುಂಭಾಗದ ಕ್ಯಾಮೆರಾದಂತಹ ಫೀಚರ್ಸ್​ ಅನ್ನು ಹೊಂದಿದೆ.

ಒಪ್ಪೊ ಎ74 5G: ಈ ಸ್ಮಾರ್ಟ್‌ಫೋನ್ 14,990 ರೂಪಾಯಿಗೆ ಸಿಗಲಿದೆ. ಇದು 6.5 ಇಂಚಿನ FHD+ ಹೈಪರ್-ಕಲರ್ ಸ್ಕ್ರೀನ್, 90Hz ರಿಫ್ರೆಶ್ ದರದೊಂದಿಗೆ ಪಂಚ್-ಹೋಲ್ ಡಿಸ್​​ಪ್ಲೇಯನ್ನು ಒಳಗೊಂಡಿದೆ. ಹಾಗೂ 5000mAh ಬ್ಯಾಟರಿಯನ್ನು ಹೊಂದಿದೆ. ಜೊತೆಗೆ 48MP ಮುಖ್ಯ + 2MP ಮ್ಯಾಕ್ರೋ + 2MP ಡೆಪ್ತ್ ಲೆನ್ಸ್‌ನೊಂದಿಗೆ ಹಿಂದಿನ ಟ್ರಿಪಲ್ ಕ್ಯಾಮೆರಾ ಸೆಟಪ್, 8MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Leave A Reply

Your email address will not be published.