ಯೋಗ ಹೇಳಿಕೊಡುವ ಕೆಲಸಕ್ಕೆ ₹ 30,000 ಸಂಬಳ, ಈಗಲೇ Apply ಮಾಡಿ

NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.
ಒಟ್ಟು 2 ಡಿಜಿಟಲ್ ಆರ್ಟಿಸ್ಟ್​(Digital Artist), ಯೋಗ ಥೆರಪಿಸ್ಟ್(Yoga Therapist)​​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಫ್​ಲೈನ್(Offline)​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ನವೆಂಬರ್ 30, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

 

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 30/11/2022

ಹುದ್ದೆಯ ಮಾಹಿತಿ:
ಯೋಗ ಥೆರಪಿಸ್ಟ್​-1
ಡಿಜಿಟಲ್ ಆರ್ಟಿಸ್ಟ್​-1

ವಯೋಮಿತಿ:
ಯೋಗ ಥೆರಪಿಸ್ಟ್​- ಗರಿಷ್ಠ 40 ವರ್ಷ
ಡಿಜಿಟಲ್ ಆರ್ಟಿಸ್ಟ್​- ಗರಿಷ್ಠ 40 ವರ್ಷ

ವಿದ್ಯಾರ್ಹತೆ:
ಯೋಗ ಥೆರಪಿಸ್ಟ್​- ಎಂಎಸ್ಸಿ
ಡಿಜಿಟಲ್ ಆರ್ಟಿಸ್ಟ್​-ಬಿಎಸ್ಸಿ, ಎಂಎಸ್ಸಿ

ಆಯ್ಕೆ ಪ್ರಕ್ರಿಯೆ:
ಸ್ಕಿಲ್ ಟೆಸ್ಟ್
ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 30, 2022ಕ್ಕೆ ಮುನ್ನ ಕಳುಹಿಸಬೇಕು.
ನಿರ್ದೇಶಕರು,
ನಿಮ್ಹಾನ್ಸ್,
P.B.No.2900,
D.R. ಕಾಲೇಜು ಅಂಚೆ,
ಹೊಸೂರು ರಸ್ತೆ,
ಬೆಂಗಳೂರು-560029
ಅರ್ಜಿಯ ಸಾಫ್ಟ್​ ಕಾಪಿಯನ್ನು ಇ-ಮೇಲ್ ಐಡಿ csp.nimhans@gmail.com ಗೆ ಕಳುಹಿಸಬಹುದು.

Leave A Reply

Your email address will not be published.