ಅಕ್ರಮ ಸಂಬಂಧ ಆರೋಪ | ದಂಪತಿಗಳ ಚಪ್ಪಲಿ ಹಾರ ಹಾಕಿ, ಮೂತ್ರ ವಿಸರ್ಜನೆ ಮಾಡಿ ಅವಮಾನ!

Share the Article

ಮನುಷ್ಯನ ಅಟ್ಟಹಾಸ ಮಿತಿಮೀರುತ್ತಿದೆ. ಇತ್ತೀಚಿಗೆ ಮನುಷ್ಯರು ಪ್ರಾಣಿಗಳಿಗಿಂತ ಕಡೆಯಾಗಿ ವರ್ತಿಸುತ್ತಿರುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಹಾಗೆಯೇ ಜೋಡಿಯೊಂದು ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಇಬ್ಬರ ನಡುವೆ ಅಕ್ರಮ ಸಂಬಂಧ ಇದೆ ಅಂತ ಆರೋಪಿಸಿ ರಾಜಸ್ಥಾನದ ‘ಖಾಪ್’ ಪಂಚಾಯತ್ ಸದಸ್ಯರು, ಅವರಿಗೆ ಚಪ್ಪಲಿ ಹಾರ ಹಾಕಿ ನಂತರ ಅವರ ಮೇಲೆ ಬಲವಂತವಾಗಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದಲ್ಲದೆ ಅವರಿಗೆ 45 ಸಾವಿರ ರೂ. ದಂಡ ವಿಧಿಸಿದ್ದಾರೆ.

ವೀಡಿಯೋದಲ್ಲಿರುವ ವ್ಯಕ್ತಿ 2006ರಲ್ಲಿ ವಿವಾಹವಾಗಿದ್ದನು, ಈತನ ವಿರುದ್ಧ 2015ರಲ್ಲಿ ವರದಕ್ಷಿಣೆ ಪ್ರಕರಣ ದಾಖಲಾಗಿತ್ತು. ನಂತರ ಎರಡನೇ ಮದುವೆಯಾಗಿದ್ದಾನೆ. ಎರಡನೇ ಮದುವೆಯಾಗಿದ್ದರಿಂದ ವ್ಯಕ್ತಿ ವಿರುದ್ಧ ಕೋಪಗೊಂಡಿದ್ದ ಮೊದಲ ಪತ್ನಿ ಸಹೋದರ, ಆಗಸ್ಟ್ 22ರಂದು ಪಯೌಡಿ ಕುಗ್ರಾಮದ ಬಳಿ ಭೇಟಿಯಾಗಲು ತಿಳಿಸಿದ್ದನು.

ಆ ನಂತರ 2022ರ ಆಗಸ್ಟ್ 23ರಂದು ಈ ಘಟನೆ ನಡೆದಿದ್ದು ಘಟನೆ ವೇಳೆ ವ್ಯಕ್ತಿ ಮತ್ತು ಆತನ 2ನೇ ಪತ್ನಿಗೆ ಅತ್ತೆಯಂದಿರು ಹಿಗ್ಗಾಮುಗ್ಗಾ ಥಳಿಸಿ, ಬಲವಂತವಾಗಿ ಅವರನ್ನು ಮಧೋರಾಜಪುರಕ್ಕೆ ಎಳೆದೊಯ್ದರು. ಮಧೋರಾಜಪುರದಲ್ಲಿ ಪಂಚ ಪಟೇಲರ ನಡುವೆ ಪಂಚಾಯತಿ ನಡೆಸಿ ದಂಡ ವಿಧಿಸಲಾಯಿತು.

ಸುಮಾರು ಮೂರು ತಿಂಗಳ ಬಳಿಕ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಥಳಿತಕ್ಕೆ ಒಳಗಾದ ವ್ಯಕ್ತಿ ದೂರು ನೀಡಿದರೂ, ಪ್ರಕರಣ ಮುಂದುವರಿಯಲಿಲ್ಲ.

ಪ್ರಸ್ತುತ ಈ ವೀಡಿಯೋ ವೈರಲ್ ಆದ ಬಳಿಕ ಐವರನ್ನು ಬಂಧಿಸಿ, ಆರೋಪಿಗಳ ವಿರುದ್ಧ ಶುಕ್ರವಾರ ಎಫ್‍ಐಆರ್ ದಾಖಲಿಸಿರುವುದಾಗಿ ವರಿಷ್ಠಾಧಿಕಾರಿ ದಿನೇಶ್ ಶರ್ಮಾ ಅವರು ಮಾಹಿತಿ ತಿಳಿಸಿದ್ದಾರೆ.

ಏನೇ ತಪ್ಪು ಮಾಡಿದರೂ ಶಿಕ್ಷೆ ನೀಡಲು ಕಾನೂನು ಇದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ನೀಡಿಲ್ಲ ಎಂಬುದು ಈ ಮೂಲಕ ಮತ್ತೇ ಸಾಬೀತಾಗಿದೆ.

Leave A Reply