PM Kisan Amount Not Received: 1 2 ನೇ ಕಂತಿನ ಹಣ ಇನ್ನೂ ಬಂದಿಲ್ವಾ ? ಹೀಗೆ ಮಾಡಿ ಎರಡೇ ದಿನ ಸಾಕು, ದುಡ್ಡು ಬರುತ್ತೆ!

ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈಗಾಗಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 17 ರಂದು ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ.


ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (ಪಿಎಂ ಕಿಸಾನ್ ಯೋಜನೆ) 12ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, 12ನೇ ಕಂತಿನ 2000 ರೂಪಾಯಿಯಂತೆ ಒಟ್ಟು 16,000 ಕೋಟಿ ರೂಪಾಯಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಆದರೆ ಈಗ ಪಿಎಂ ಕಿಸಾನ್ ಯೋಜನೆ ನಿಯಮದಲ್ಲಿ ಕೆಲವು ಬದಲಾವಣೆಯಾಗಿದ್ದು, ಇನ್ನೂ  ಹಣ ಖಾತೆಗೆ ಜಮೆ ಆಗಿದೆಯೇ ಎಂದು ಪರೀಕ್ಷಿಸಲು ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನ 2022 ಕಾರ್ಯಕ್ರಮವನ್ನು ಉದ್ಘಾಟಿಸಿದ್ದಲ್ಲದೆ, ಪಿಎಂ ಕಿಸಾನ್ ನಿಧಿಯನ್ನು ಬಿಡುಗಡೆ ಮಾಡಿದ್ದರು. ಆದರೆ,  ಮೋದಿ ಅವರು ಪಿಎಂ ಕಿಸಾನ್‌ನ 12ನೇ ಕಂತು ಬಿಡುಗಡೆ ಮಾಡಿ ಸರಿಯಾಗಿ ಒಂದು ತಿಂಗಳಾಗಿದ್ದು,  ಪಿಎಂ ಕಿಸಾನ್ ಇನ್ನು ಹಣವನ್ನು ಸ್ವೀಕರಿಸದಿದ್ದರೆ ಹೇಗೆ ದೂರು ನೀಡಬೇಕು ಎಂಬ ಅನುಮಾನ ಹೆಚ್ಚಿನವರಿಗೆ ಕಾಡುತ್ತಿದೆ.


ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಭಾಗವಾಗಿ ಇದುವರೆಗೆ 11 ಕಂತುಗಳಲ್ಲಿ ರೂ.2 ಲಕ್ಷ ಕೋಟಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 24 ರೊಳಗೆ ರೈತರ ಖಾತೆಗೆ ಪಿಎಂ ಕಿಸಾನ್ ಹಣವನ್ನು ಜಮಾ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವಾಲಯ ಈಗಾಗಲೇ ಘೋಷಿಸಿದೆ.


ಇತ್ತೀಚೆಗೆ ಬಿಡುಗಡೆಯಾದ 16,000 ಕೋಟಿ ರೂ.ಗಳ ಜೊತೆಗೆ ಇದುವರೆಗೆ ಒಟ್ಟು 2.16 ಲಕ್ಷ ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಪಿಎಂ ಕಿಸಾನ್ 12ನೇ ಕಂತು ಬಿಡುಗಡೆಯಾಗಿ ಒಂದು ತಿಂಗಳಾಗಿದ್ದರೂ ಕೂಡ  ಇನ್ನೂ ಕೆಲ ರೈತರ ಖಾತೆಗೆ ಹಣ ಜಮಾ ಆಗಿಲ್ಲದೆ ಇರುವುದರಿಂದ ಇದು ರೈತರಲ್ಲಿ ಆತಂಕ ಸಹಜವಾಗಿ ಮನೆ ಮಾಡಿದೆ

ಕೋಟಿಗಟ್ಟಲೆ ರೈತರಿಗೆ ಒಂದೇ ಬಾರಿಗೆ ಕಂತುಗಳಲ್ಲಿ ಜಮಾ ಆಗುವುದರಿಂದ ಖಾತೆಗೆ ಹಣ ಜಮಾ ಆಗಲು ಸ್ವಲ್ಪ ಸಮಯ ಹಿಡಿದು ತಡವಾಗುವುದು ಸಹಜ. ಆದರೆ, ತಿಂಗಳಾದರೂ ಕೆಲ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಹಾಗಾಗಿ,  ಹಣ ಠೇವಣಿ ಮಾಡದಿದ್ದರೆ ರೈತರು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದಾಗಿದೆ.

ಪಿಎಂ ಕಿಸಾನ್ ಹಣ ಪಡೆಯದಿದ್ದರೆ, ಯಾರಿಗೆ ದೂರು ನೀಡಬೇಕು? ಪಾಲಿಸುವುದು ಹೇಗೆ? ಎಂಬ ಅನುಮಾನ ರೈತರಲ್ಲಿ ಮೂಡಿರುತ್ತದೆ..

ಹಾಗಾದ್ರೆ, ಯಾರಿಗೆ  ದೂರು ನೀಡಬೇಕು ಎಂಬ ಮಾಹಿತಿ ನಿಮಗಾಗಿ:
ದೂರು ನೀಡಲು ಹಲವು ಮಾರ್ಗಗಳಿದ್ದು,  ಆದರೆ ರೈತರು ದೂರು ನೀಡುವ ಮುನ್ನ  ಹಣ ಸಂದಾಯದ ಸ್ಥಿತಿಗತಿ ಪರಿಶೀಲಿಸಿ ಹಣ ಜಮೆಯಾಗಿದೆಯೇ ಎಂಬುದನ್ನು ಖಚಿತಪಡಿಸಕೊಂಡ ಬಳಿಕವೇ  ದೂರು ನೀಡಬೇಕು.

ಹಾಗಾದರೆ, ಹಣ ಜಮೆಯ ಸ್ಥಿತಿಗತಿ ಪರಿಶೀಲಿಸಲು ಮೊದಲು PM ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in/ ತೆರೆಯಬೇಕು.ಅಲ್ಲಿ  ರೈತರ ಕಾರ್ನರ್ ವಿಭಾಗದಲ್ಲಿ ಫಲಾನುಭವಿಯ ಸ್ಥಿತಿಯ ಮೇಲೆ ಕ್ಲಿಕ್ ಮಾಡಬೇಕು.  ರೈತರು ತಮ್ಮ ಆಧಾರ್ ಸಂಖ್ಯೆ ವಿವರಗಳನ್ನು ನಮೂದಿಸಬೇಕು ಮತ್ತು ಡೇಟಾ ಪಡೆದುಕೊಂಡ ಮೇಲೆ ಕ್ಲಿಕ್ ಮಾಡಬೇಕು. ಆಗ, 12ನೇ ಕಂತು ರೈತರ ಖಾತೆಗೆ ಜಮೆಯಾಗಿದೆಯೇ ಎಂಬುದು ತಿಳಿಯುತ್ತದೆ.

ರೈತರಿಗೆ 12ನೇ ಕಂತು ಜಮಾ ಆಗದಿದ್ದರೆ ರೈತರು ನಾನಾ  ರೀತಿಯಲ್ಲಿ ದೂರು ನೀಡಬಹುದಾಗಿದೆ. ರೈತರು ಇಮೇಲ್ ಮೂಲಕ ದೂರು ನೀಡಲು ಬಯಸಿದರೆ, ದೂರುದಾರರು pmkisan-ict@gov.in ಅಥವಾ pmkisan-funds@gov.in ಇಮೇಲ್ ಐಡಿಗಳಲ್ಲಿ ದೂರು ನೀಡಬಹುದು. ಅಥವಾ ಸಹಾಯವಾಣಿ ಸಂಖ್ಯೆಗಳಾದ 011-24300606, 155261ಗೆ ​​ಕರೆ ಮಾಡಬಹುದಾಗಿದೆ. ಅಲ್ಲದೆ, ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 1800-115-526 ಗೆ ಕರೆ ಮಾಡಿ ದೂರು ನೀಡಬಹುದು

Leave A Reply

Your email address will not be published.