ವರನ ಕಡೆಯವರು ವಧುವಿಗೆ ನೀಡಿದ ಗಿಫ್ಟ್ ನೋಡಿ ಮದುವೆ ಕ್ಯಾನ್ಸಲ್ | ಅಷ್ಟಕ್ಕೂ ಆ ಗಿಫ್ಟ್ ನಲ್ಲೇನಿತ್ತು ಗೊತ್ತಾ!!
ಮದುವೆ ಎಂಬ ಸುಂದರ ಬೆಸುಗೆ ಎರಡು ಜೋಡಿಗಳನ್ನು ಒಂದುಗೂಡಿಸುವ ಜೊತೆಗೆ ಹೊಸ ದಾಂಪತ್ಯ ಜೀವನಕ್ಕೆ ಜೀವನಕ್ಕೆ ಮುನ್ನುಡಿ ಬರೆಯಲು ಪ್ರೇರೇಪಿಸುತ್ತದೆ. ಆದರೆ, ಹಸೆ ಮಣೆ ಏರುವ ಜೋಡಿಗಳು ಪರಸ್ಪರ ಮಾತುಕತೆ ನಡೆಸಿ ಇಬ್ಬರು ಸಮ್ಮತಿ ಸೂಚಿಸಿದ ಮೇಲೆ ಮದುವೆಯ ತಯಾರಿ ಭರ್ಜರಿಯಾಗಿ ಸಜ್ಜಾಗುವುದು ವಾಡಿಕೆ. ಆದರೆ, ಈ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಕೂಡ ಮನಸ್ತಾಪಗಳಾಗಿ ಮದುವೆಗೂ ಮೊದಲೇ ರಾದ್ದಂತಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಇಲ್ಲೊಬ್ಬಳು ವಧು ಮದುವೆ ನಿರಾಕರಿಸಿದ ಕಾರಣ ಕೇಳಿದರೆ ನಿಜಕ್ಕೂ ಅಚ್ಚರಿ ಪಡುವುದು ಖಚಿತ!!.
ಸಾಮಾನ್ಯವಾಗಿ ಭಾರತೀಯ ಮದುವೆಗಳ ಆಚರಣೆ, ಶಾಸ್ತ (Indian Marriage) ಅದ್ಧೂರಿಯಾಗಿ ನಡೆಯುತ್ತವೆ. ಅಡಿಗೆಯಿಂದ ಹಿಡಿದು ಆಚರಣೆಗಳೆಲ್ಲವೂ ಸಂಭ್ರಮದಲ್ಲೇ ಮಾಡುತ್ತಾರೆ. ಮದುವೆ ಎಂದರೆ ಸಾಕು ಮನೆಯವರಿಗೆ, ಕುಟುಂಬದವರಿಗೆ ಎಲ್ಲಿಲ್ಲದ ಖುಷಿ. ಕೆಲವೊಂದು ಬಾರಿ ಕೆಲವೊಂದು ಅಡಚಣೆಗಳಿಂದ ಮದುವೆಯೆ ರದ್ದಾಗಿ ಕುಟುಂಬದವರ ಮುಂದೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಕೂಡ ತಲೆದೋರುತ್ತದೆ.
ಉತ್ತರಾಖಂಡದ ಹಲ್ದ್ವಾನಿಯ ವಧುಗೆ ವರನ ಕುಟುಂಬವು ಆಕೆಗೆ ಅಗ್ಗದ ಲೆಹೆಂಗಾವನ್ನು (Lehenga) ಕಳುಹಿಸಿದ ಬಳಿಕ ತನ್ನ ಮದುವೆಯನ್ನೇ ರದ್ದುಗೊಳಿಸಿದ ಅಚ್ಚರಿಯ ಘಟನೆ ನಡೆದಿದೆ. ಈ ವರ್ಷ ಜೂನ್‌ನಲ್ಲಿ ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಲ್ಲದೆ, ಅವರ ಮದುವೆಯ ದಿನಾಂಕವನ್ನು ನವೆಂಬರ್ 5 ಕ್ಕೆ ನಿಗದಿಪಡಿಸಲಾಗಿತ್ತು. ಹಾಗಾಗಿ, ಮದುವೆಗೆ ಮುಂಚಿತವಾಗಿ ವರನ ಕುಟುಂಬದವರು ಸೊಸೆಗೆ ಪ್ರೀತಿಯಿಂದ ಲೆಹಂಗವನ್ನು ಕಳಿಸಿದ್ದಾರೆ.
ಮದುವೆಗೆ ಕೆಲವೇ ದಿನಗಳ ಮೊದಲು, ವರನ ತಂದೆ ತನ್ನ ಭಾವಿ ಸೊಸೆಗೆ ₹ 10,000 ಬೆಲೆಯ ಲೆಹೆಂಗಾವನ್ನು ಕಳುಹಿಸಿದ್ದರಿಂದ ಅಲ್ಮೋರಾಕ್ಕೆ ಸೇರಿದ ತನ್ನ ನಿಶ್ಚಿತ ವರನೊಂದಿಗೆ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಾಳೆ. ಕಡಿಮೆ ಬೆಲೆ ಮತ್ತು ಕಳಪೆ ಗುಣಮಟ್ಟದಿಂದಾಗಿ ಅವರು ಉಡುಪನ್ನು ಮೆಚ್ಚಲಿಲ್ಲ ಎಂದು ಹೇಳಿಕೊಂಡಿದ್ದು, ವರನ ಕುಟುಂಬಕ್ಕೆ ಶಾಕ್ ಆಗಿರುವುದಂತು ಸುಳ್ಳಲ್ಲ.
ಈ ಘಟನೆಯ ಬಳಿಕ ಮತ್ತೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ಮಾಡಿ ಮದುವೆಯನ್ನು ರದ್ದುಗೊಳಿಸಲಾಯಿತು. ಸಣ್ಣ ಪುಟ್ಟ ವಿಚಾರಕ್ಕೂ ತಗಾದೆ ತೆಗೆದು, ಗಲಾಟೆ ಮಾಡಿ ಮದುವೆ ನಿಲ್ಲಿಸುವ ಅನೇಕ ಪ್ರಯತ್ನ ನಡೆಯುತ್ತಿರುತ್ತದೆ. ಕೆಲವೊಂದು ಬಾರಿ ಎರಡು ಕುಟುಂಬದವರ ಜಗಳದಿಂದ ಮದುವೆಗಳು ನಿಂತರೆ, ಮತ್ತೆ ಕೆಲವು ಸಲ ಏನಾದರೂ ದೋಷಗಳಿಂದ ಮದುವೆಗಳು ರದ್ದಾಗುವುದುಂಟು.
ಆದರೆ ಈ ಪ್ರಕರಣದಲ್ಲಿ ತಮ್ಮ ಭಾವಿ ಸೊಸೆಗೆ ಪ್ರೀತಿಯಿಂದ ನೀಡುವ ಉಡುಗೊರೆಯನ್ನು ಕಡಿಮೆ ಎಂದು ಪರಿಗಣಿಸಿ ಮದುವೆ ನಿಲ್ಲಿಸಿದ್ದು, ನಿಜಕ್ಕೂ ಅಚ್ಚರಿ ಅದಲ್ಲದೇ, ಮದುವೆಯ ಮೊದಲೇ ಬಟ್ಟೆಗಾಗಿ ಗಲಾಟೆ ಮಾಡಿದಾಕೆ ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಕೂಡ ಮುಂದೊಮ್ಮೆ ಖಂಡಿತ ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದು ಗಲಾಟೆ ಮಾಡಿ ಮದುವೆಯ ದಿನವೇ ವಿಚ್ಛೇದನ ಕೋರಿದ್ದರು ಆಶ್ಚರ್ಯವಿಲ್ಲ.