ದುಬಾರಿ ಎಲೆಕ್ಟ್ರಿಕ್ ಕಾರಿನ ಮಾಲೀಕರಾದ ಕೂಲ್ ಕ್ಯಾಪ್ಟನ್ ಧೋನಿ | ಈ ಕಾರಿನ ವಿಶೇಷತೆ ಎಷ್ಟಿದೆ ತಿಳಿದುಕೊಳ್ಳಿ
ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಕಾರು, ಬೈಕ್‌ಗಳ ಕ್ರೇಜ್ ಇರುವವರಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮೊದಲಿಗರು. ಇವರಲ್ಲಿ ಆಧುನಿಕ ಮತ್ತು ವಿಂಟೇಜ್ ಕ್ಲಾಸಿಕ್ಗಳನ್ನು ಒಳಗೊಂಡಿರುವ ಕಾರು ಮತ್ತು ಬೈಕ್‌ಗಳ ಅದ್ಭುತ ಭಂಡಾರವೇ ಇದೆ.
ಇತ್ತೀಚೆಗೆ ಕ್ಯಾಪ್ಟನ್ ಕೂಲ್ ಧೋನಿ ತಮ್ಮ ಮೊದಲ ಹೊಚ್ಚಹೊಸ ಎಲೆಕ್ಟ್ರಿಕ್ ಕಾರ್ Kia EV6 ಅನ್ನು ಖರೀದಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ. ಮಹೇಂದ್ರ ಸಿಂಗ್ ಧೋನಿ ಅವರ ಹೊಸ ಕಿಯಾ EV6 ನಲ್ಲಿ ಅವರ ಸ್ನೇಹಿತರಾದ ರುತುರಾಜ್ ಗಾಯಕ್ವಾಡ್ ಮತ್ತು ಕೇದಾರ್ ಜಾಧವ್ ಅವರೊಂದಿಗೆ ಕಾಣಿಸಿಕೊಂಡಿರುವ ವೀಡಿಯೊವೊಂದು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಆಗಿದೆ.
ಭಾರತದಲ್ಲಿ ಕೊರಿಯನ್ ಕಾರು ತಯಾರಕರಿಂದ ಪರಿಚಯಿಸಲಾದ ಅತ್ಯಂತ ದುಬಾರಿ ಮತ್ತು ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರ್ Kia EV6 2022 ರಲ್ಲಿ ಬಿಡುಗಡೆಯಾಗಿದೆ.
EV6 ಕಿಯಾದಿಂದ ಹೊರಹೊಮ್ಮಿರುವ ಮೊದಲ ಎಲೆಕ್ಟ್ರಿಕ್ ವಾಹನವಾಗಿದ್ದೂ, ಇದು ಹುಂಡೈ-ಕಿಯಾದ ಇ-ಜಿಎಂಪಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕ್ರಾಸ್‌ಒವರ್‌ನ ಸಿಗ್ನೇಚರ್ ಶೇಡ್ ಆಗಿರುವ ಕಿಯಾ ಬೂದುಬಣ್ಣದಿಂದ ಕೂಡಿದ್ದೂ, ಹೊಚ್ಚ ಹೊಸತಾಗಿ ಕಾಣುತ್ತಿದೆ. ಇದನ್ನು ತಾತ್ಕಾಲಿಕ ನೋಂದಣಿ ಸಂಖ್ಯೆಗಳಲ್ಲಿ ಚಾಲನೆ ಮಾಡಲಾಗುತ್ತಿದೆ.
ಇತ್ತೀಚೆಗೆ Kia ಬಿಡುಗಡೆಯಾದಾಗಿನಿಂದ, ಭಾರತದಲ್ಲಿ ಸದ್ಯ 200 ಯುನಿಟ್‌ಗಳ EV6 ಮಾರಾಟವಾಗಿದ್ದೂ, Kia ಈಗ ಭಾರತದಲ್ಲಿ EV6 ನ ಹೆಚ್ಚಿನ ಯೂನಿಟ್‌ಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ. Kia EV6 ಭಾರತಕ್ಕೆ ಎರಡು ವಿಭಿನ್ನ ರೂಪಾಂತರಗಳಲ್ಲಿ ಆರಂಭಿಕ ಬೆಲೆ ರೂ. 59.95 ಲಕ್ಷದೊಂದಿಗೆ ಆಗಮಿಸಿದೆ.
ಮುಂಭಾಗದ-ಮೌಂಟೆಡ್ ಸಿಂಗಲ್ ಮೋಟಾರ್‌ನೊಂದಿಗೆ 2 ವೀಲ್-ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಬರುತ್ತಿದ್ದೂ, ಇದರ ಗರಿಷ್ಠ ಶಕ್ತಿಯು 229 bhp ಹಾಗೂ 350 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕಬಲ್ಲದು. ಎಲೆಕ್ನಿಕ್ ಮೋಟಾರ್‌ಗಳ ಸಂಯೋಜನೆಯಿಂದ ಹೆಚ್ಚು ಪ್ರೀಮಿಯಂ ಆಲ್- ವೀಲ್-ಡ್ರೈವ್ ಆವೃತ್ತಿಯನ್ನು ಹೊಂದಿದೆ. Kia ತನ್ನ 77.4 kWh ಬ್ಯಾಟರಿ ಪ್ಯಾಕ್‌ನಿಂದ EV6 ಗಾಗಿ ARAI ಸೈಕಲ್‌ನಲ್ಲಿ 708 ಕಿ.ಮೀಗಳ ರೇಂಜ್ ನೀಡುವುದಾಗಿ ಹೇಳಿಕೊಂಡಿದೆ.
ಇದನ್ನು ಚಾರ್ಜ್ ಮಾಡಲು 350 kW DC ಫಾಸ್ಟ್ ಚಾರ್ಜರ್ ನಿಂದ ಚಾರ್ಜ್ ಮಾಡಬೇಕು. ಸಂಯೋಜಿತ ಶಕ್ತಿ ಮತ್ತು ಟಾರ್ಕ್ ಔಟ್‌ಪುಟ್‌ಗಳನ್ನು ಕ್ರಮವಾಗಿ 325 bhp ಮತ್ತು 605 Nm ನಲ್ಲಿ ರೇಟ್ ಮಾಡಲಾಗಿದೆ. ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಧೋನಿ ಕಾರು.
EV6 ಪ್ರಸ್ತುತ ವೋಲ್ಲೋ XC40 ರೀಚಾರ್ಜ್‌ನೊಂದಿಗೆ ಸ್ಪರ್ಧಿಸುತ್ತಿದ್ದೂ, ಶೀಘ್ರದಲ್ಲೇ ಅದರ ದೂರದ ಸೋದರಸಂಬಂಧಿ ಹ್ಯುಂಡೈ loniq 5 ನೊಂದಿಗೆ ಸ್ಪರ್ಧಿಸಲಿದೆ. ಭಾರತಕ್ಕೆ ಇದು 2023 ರ ಮೊದಲ ತ್ರೈಮಾಸಿಕದಲ್ಲಿ ಆಗಮಿಸಲಿದೆ.