ಈಗಿನ ದಿನಗಳಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾ ಎಚ್ಚರಿಕೆಯಿಂದ ವಾಹನ ಚಲಾಯಿಸಿದ್ರೆ ಮಾತ್ರ ನಾವು ಸುರಕ್ಷಿತವಾಗಿ ಮನೆಗೆ ತಲುಪಬಹುದು. ಹಲವಾರು ಜನರು ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಬ್ರೇಕ್ ಮಾಡೋದು ಹೀಗೇ ಹಲವಾರು ರೀತಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ.
ಹೀಗೇ ಸಂಚಾರಿ ನಿಯಮಗಳನ್ನು ಬ್ರೇಕ್ ಮಾಡುವುದರಿಂದ ರಸ್ತೆ ಅಪಘಾತಗಳು ಸಂಭವಿಸುವುದಷ್ಟೇ ಅಲ್ಲದೆ ಇತರರಿಗೂ ತೊಂದರೆ ಉಂಟಾಗುತ್ತದೆ. ಇದಕ್ಕೆ ಸಂಚಾರಿ ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಮೋಟಾರು ವಾಹನ ಕಾಯ್ದೆಯ ಪ್ರಕಾರ, ಕೇಂದ್ರ ,ರಾಜ್ಯಗಳ ಸರ್ಕಾರಿ ಸಂಚಾರಿ ನಿಯಮ ಉಲ್ಲಂಘನೆಗೆ ಹಲವಾರು ಭಾರೀ ದಂಡವನ್ನು ಹಾಕಲಾಗ್ತಿದೆ. ಇಷ್ಟಾದರೂ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಅಂತಹ ಜನರಿಗೆ ಇದೀಗ ದೊಡ್ಡ ಎಚ್ಚರಿಕೆಯನ್ನು ನೀಡಿದ್ದಾರೆ.
ಅದೇನೆಂದರೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಮಾತ್ರವಲ್ಲ ಜೈಲುವಾಸದ ಸಾಧ್ಯತೆಯೂ ಇದೆ. ಅಷ್ಟೇ ಅಲ್ಲದೇ, ಒಂದೇ ಸಮಯದಲ್ಲಿ ಅನೇಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ರೆ, ಏಕಕಾಲದಲ್ಲಿ ಅನೇಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರಿ ದಂಡವನ್ನು ವಿಧಿಸಬಹುದಾಗಿದೆ.
ಉದಾಹರಣೆಗೆ, ನೀವು ಅನರ್ಹ ಚಾಲನಾ ಪರವಾನಗಿಯನ್ನು ಹೊಂದಿರುವ ಕಾರನ್ನು ಹೊಂದಿದ್ದರೆ, ಕುಡಿದು ಮತ್ತು ವಿಮೆಯಿಲ್ಲದೆ ವೇಗದ ಚಾಲನೆ ಮಾಡಿದ್ರೆ, ಒಟ್ಟಾಗಿ ಎಲ್ಲಾ ಉಲ್ಲಂಘನೆಗಳಿಗೆ ದಂಡವನ್ನು ವಿಧಿಸಲಾಗುತ್ತದೆ.
ಒಂದು ವೇಳೆ ನೀವು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ರೆ ಮೊದಲ ಬಾರಿಗೆ ₹ 10,000 ರೂ.ಗಳ ದಂಡ, ಎರಡನೇ ಬಾರಿಗೆ ₹15,000 ರೂ.ಗಳ ದಂಡ, ಅನರ್ಹ ಚಾಲನಾ ಪರವಾನಗಿಯೊಂದಿಗೆ ವಾಹನ ಚಲಾಯಿಸಿದರೆ ₹10,000 ರೂ., ಮತ್ತು ವಿಮೆ ಇಲ್ಲದೇ ವಾಹನ ಚಲಾಯಿಸಿದರೆ ₹2,000 ರಿಂದ ₹4 ಸಾವಿರದವರೆಗೆ ದಂಡ ಬೀಳುತ್ತದೆ.
ಅಷ್ಟೇ ಅಲ್ಲದೇ, ಮೊದಲ ಬಾರಿಗೆ ದುಡುಕಿನ ಚಾಲನೆಗೆ ₹5000, ಮತ್ತು ಎರಡನೇ ಬಾರಿ ₹10,000. ಕೆಲವೊಮ್ಮೆ ದಂಡದೊಂದಿಗೆ ಜೈಲಿಗೆ ಹೋಗುವ ಸಾಧ್ಯತೆಯೂ ಇರುತ್ತದೆ, ಇದೆಲ್ಲವೂ ಒಟ್ಟಾದರೆ, ನಿಮ್ಮ ಮೇಲೆ ಬೀಳುವ ದಂಡ ನಿಮಗೆ ಖಂಡಿತ ಹೊರೆಯಾಗುತ್ತದೆ. ಹಾಗಾಗಿ ಭಾರಿ ದಂಡವನ್ನು ತಪ್ಪಿಸಲು, ಸಂಚಾರಿ ನಿಯಮಗಳನ್ನು ಪಾಲಿಸಿ, ನಿಮ್ಮ ಪ್ರಾಣವನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಮನೆ ತಲುಪಿ ಇದು ಉತ್ತಮ.