ನಟಿ ಆಶಿಕಾ ರಂಗನಾಥ್ ಕುಡಿದು ರೋಡಲ್ಲಿ ಗಲಾಟೆ?!
ಚಂದನವನದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ನಟಿ ಆಶಿಕಾ ರಂಗನಾಥ್ ತಮ್ಮ ಸಹಜ ನಟನೆಯ ಮೂಲಕ ಅಭಿಮಾನಿಗಳ ದಿಲ್ ಕದ್ದ ಚೆಲುವೆ. ಗಣೇಶ್, ಶ್ರೀಮುರಳಿ, ಸುದೀಪ್ ಹಾಗೂ ಶ್ರೀಮುರಳಿ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕ್ರೇಜಿ ಬಾಯ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಆಶಿಕಾ ರಂಗನಾಥ್ ಅವರಿಗೆ ಹೆಸರಿನ ಜೊತೆಗೆ ಫೇಮ್ ಪಡೆದುಕೊಂಡದ್ದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳುನಗೆ ಚಿತ್ರ ಎಂದರು ತಪ್ಪಾಗದು. ಈ ಚಿತ್ರದಲ್ಲಿ ಮೂವರು ನಟಿಯರಲ್ಲಿ ಆಶಿಕಾ ರಂಗನಾಥ್ ಒಬ್ಬಳಾಗಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ.
ಚಂದನವನದಲ್ಲಿ ಮಾತ್ರವಲ್ಲದೇ, ಅನೇಕ ಚಿತ್ರಗಳಲ್ಲಿ ನಟಿಸಿ ಬಹು ಬೇಡಿಕೆಯ ನಟಿಯಾಗಿರುವ ಆಶಿಕಾ ರಂಗನಾಥ್ ಪರಭಾಷೆಗಳಿಗೂ ಕಾಲಿಟ್ಟಿದ್ದು, ಪರಭಾಷೆ ತನ್ನ ವೃತ್ತಿ ಜೀವನದಲ್ಲಿ ಹತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕೆಲಸ ನಿರ್ವಹಿಸಿದ್ದರು ಕೂಡ ಇಲ್ಲಿಯವರೆಗೂ ಒಮ್ಮೆಯೂ ವಿವಾದ ಬರದ ರೀತಿ ಕಾರ್ಯ ನಿರ್ವಹಿಸಿದ ಹಿರಿಮೆಯನ್ನು ಹೊಂದಿದ್ದಾರೆ.ಆದರೆ ಇದೀಗ ಆಶಿಕಾ ರಂಗನಾಥ್ ಕುಡಿದು ರಸ್ತೆಯಲ್ಲಿ ತೂರಾಡಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ರೀತಿಯ ವಿಚಾರಗಳು ಅಲ್ಲದೆ, ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಟಿ ಆಶಿಕಾ ರಂಗನಾಥ್ ಕುಡಿದು ರಂಪಾಟ ಮಾಡಿದ್ದು, ಕುಡಿದ ಮತ್ತಿನಲ್ಲಿ ಆಶಿಕಾ ರಂಗನಾಥ್ ಜಗಳ ಮಾಡಿಕೊಂಡಿದ್ದಾರೆ ಎಂಬ ಬರಹಗಳ ಅಡಿಯಲ್ಲಿ ಈ ವಿಡಿಯೊ ವೈರಲ್ ಆಗಿತ್ತು. ಆದರೆ ಈ ವಿಡಿಯೊ ಹಿಂದಿನ ಸತ್ಯಾಂಶದ ರಹಸ್ಯ ಹೆಚ್ಚಿನವರಿಗೆ ತಿಳಿದಿಲ್ಲ.
ವೈರಲ್ ಆಗಿರುವ ಈ ವಿಡಿಯೊದಲ್ಲಿ ನಟಿ ಆಶಿಕಾ ರಂಗನಾಥ್ ಮದ್ಯದ ಬಾಟಲಿ ಹಿಡಿದು ಕುಡಿದ ಮತ್ತಿನಲ್ಲಿ ಪೊಲೀಸ್ ಮುಂದೆಯೇ ತೂರಾಡುತ್ತಾ ತನ್ನ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಕ್ಯಾಮೆರಾ ಆಫ್ ಮಾಡುವಂತೆ ಜೋರು ಮಾಡಿ ಗದರಿದ್ದಾರೆ. ಜೊತೆಗೆ ವಿಡಿಯೊ ಮಾಡುತ್ತಿದ್ದ ಕ್ಯಾಮೆರಾಮ್ಯಾನ್ಗೆ ಮಧ್ಯದ ಬೆರಳನ್ನು ತೋರಿಸಿದ್ದಾರೆ. ಹೀಗಾಗಿ ಈ ವಿಡಿಯೊ ಬಹುಬೇಗನೆ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದೆ.
ಅರೇ!!! ನಟಿ ಈ ರೀತಿ ವಿವಾದ ಸೃಷ್ಟಿಸಿಕೊಂಡಿದ್ದಾರಾ ಎಂಬ ಕುತೂಹಲ ಹೆಚ್ಚಿನವರಲ್ಲಿ ಮೂಡಿರಬಹುದು.ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದ ಚಿತ್ರೀಕರಣದ ಸಂದರ್ಭದ ವೀಡಿಯೋ ಇದಾಗಿದ್ದು, ಇನ್ನು ನಟಿ ಆಶಿಕಾ ರಂಗನಾಥ್ ಕುಡಿದು ಗಲಾಟೆ ಮಾಡಿರುವ ಈ ವಿಡಿಯೊ ನಿಜ ಜೀವನದ್ದಲ್ಲ ಬದಲಾಗಿ ಸಿನಿಮಾದ ಚಿತ್ರೀಕರಣದ್ದು ಎಂದು ತಿಳಿದ ಮೇಲೆ ಅಭಿಮಾನಿಗಳು ನಿರಾಳರಾಗಿದ್ದಾರೆ .
ಚಿತ್ರದ ಒಂದು ದೃಶ್ಯದಲ್ಲಿ ಆಶಿಕಾ ರಂಗನಾಥ್ ಕುಡಿದು ಗಲಾಟೆ ಮಾಡುವುದನ್ನು ಚಿತ್ರೀಕರಿಸಲಾಗಿದ್ದು ಆ ವಿಡಿಯೊ ಇದೀಗ ವೈರಲ್ ಆಗಿ ಗಾಳಿ ಸುದ್ದಿಗಳನ್ನು ಹುಟ್ಟಿಸುತ್ತಿದೆ. ಇನ್ನು ಚಿತ್ರದ ಟ್ರೈಲರ್ನಲ್ಲೂ ಅನೇಕ ದೃಶ್ಯಗಳಲ್ಲಿ ನಟಿ ಆಶಿಕಾ ರಂಗನಾಥ್ ಕುಡಿದು ತೂರಾಡಿದ ದೃಶ್ಯಗಳಿದ್ದು, ಇನ್ನು ವೈರಲ್ ಆಗಿರುವ ಈ ವಿಡಿಯೊದಲ್ಲಿ ಆಶಿಕಾ ರಂಗನಾರ್ಥ ಕೈನಲ್ಲಿರುವ ಬಾಟಲಿ ಓಪನ್ ಕೂಡ ಆಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಇನ್ನು ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲ್ಲರಿಗೂ ಚಿತ್ರೀಕರಣ ಸಂದರ್ಭದ ಈ ವಿಡಿಯೊವನ್ನು ಲೀಕ್ ಮಾಡಿದ್ಯಾರು ಎಂಬ ಪ್ರಶ್ನೆ ಬುಗಿಲೆದ್ದಿದೆ. ವೀಕ್ಷಕರ ಮನಸ್ಸಲ್ಲಿ ಒಳ್ಳೆ ಭಾವನೆ ಮೂಡಿಸಿರುವ ನಟಿ ಕುರಿತು ಇಂತಹ ವಿಡಿಯೊ ಹರಿಬಿಡುವುದರಿಂದ ಚಿತ್ರೀಕರಣದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದವರು ಇದನ್ನೇ ನಿಜ ಎಂದು ನಂಬಿ ಆಶಿಕಾ ಮೇಲೆ ಕೆಟ್ಟ ಅಭಿಪ್ರಾಯ ಮೂಡಬಹುದು ಎಂಬ ಅಭಿಪ್ರಾಯ ಕೂಡ ಕೇಳಿ ಬರುತ್ತಿದೆ.
ಇದಲ್ಲದೆ, ಈವರೆಗೆ ಲೀಕ್ ಆಗದ ಈ ವಿಡಿಯೊ ಚಿತ್ರ ಬಿಡುಗಡೆಗೆ ವಾರ ಬಾಕಿ ಇರುವಾಗ ಲೀಕ್ ಆಗಿರುವುದನ್ನು ಗಮನಿಸಿ ಇದು ಕೇವಲ ಪಬ್ಲಿಸಿಟಿಗಾಗಿ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.