ದೇವರ ಪವಾಡ ??| ತಾನಾಗಿಯೇ ಒಡೆಯುತ್ತೆ ತೆಂಗಿನಕಾಯಿ !
ದೇವರ ಮೇಲಿನ ನಂಬಿಕೆ ಎಲ್ಲರಿಗೂ ಒಂದೇ. ಆದರೆ ಪೂಜಿಸುವ ವಿಧಾನಗಳು ವಿಭಿನ್ನ ಆಗಿರಬಹುದು ಅಷ್ಟೇ. ದೇವರನ್ನು ಹೀಗೆಯೇ ಪೂಜಿಸಬೇಕು ಎಂದು ದೇವರೇ ಬಂದು ಹೇಳದಿದ್ದರೂ ಸಹ ಅನಾಧಿಕಾಲದಿಂದ ಬಂದ ಸಂಪ್ರದಾಯ ಪದ್ಧತಿಗಳ ಆಧಾರದಲ್ಲಿ ಇಂದಿನ ಪೀಳಿಗೆಯವರು ದೇವರ ಪೂಜೆಗಳನ್ನು ಮಾಡುವುದು ರೂಢಿ ಆಗಿದೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ತೆಂಗಿನಕಾಯಿಯನ್ನು ಕೊಟ್ಟರೆ ಪೂಜಾರಿಗಳು ಕಲ್ಲಿನ ಮೇಲೆ ಒಡೆದು, ಎರಡು ಹೋಳು ಮಾಡಿ, ದೇವರಿಗೆ ಅರ್ಪಿಸಿ, ವಾಪಸ್ ಕೊಡುತ್ತಾರೆ ಆದರೆ, ಈ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ದೇವರ ಮುಂದೆ ಇಡಲಾಗುತ್ತದೆ. ವಾಪಸ್ ಕೊಡುವಾಗ ತೆಂಗಿನಕಾಯಿ ತಾನಾಗಿಯೇ ಒಡೆದಿರುತ್ತದೆ ಎಂದು ಅಲ್ಲಿನ ಭಕ್ತರು ಮತ್ತು ಪೂಜಾರಿಗಳು ಹೇಳುತ್ತಿದ್ದಾರೆ.
ಹೌದು ಒಡಿಶಾದ ಬೌದ್ ಜಿಲ್ಲೆಯ ಬಿಲಾಸ್ಪುರ್ ಪಂಚಾಯಿತಿಯ ಬದರಾಹಜುರ್ ಗ್ರಾಮದ ಪೂರ್ಣಬಾ ದೇವಸ್ಥಾನವು ತನ್ನ ಪವಾಡದಿಂದಲೇ ತುಂಬಾ ಹೆಸರುವಾಸಿಯಾಗಿದೆ.
ಪೂರ್ಣಬಾ ದೇವಸ್ಥಾನದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಸಾಕಷ್ಟು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಬರುವ ಭಕ್ತರು ದೇವತೆಗೆ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ವಾಪಾಸ್ ತೆಗೆದುಕೊಳ್ಳುವಾಗ ತೆಂಗಿನಕಾಯಿ ಅದಾಗಿಯೇ ಒಡೆದು ಹೋಗಿರುತ್ತದೆ ಅಂತೆ.
ಪ್ರಸ್ತುತ ಪೂರ್ಣಬಾ ದೇವಸ್ಥಾನದಲ್ಲಿ ಕ್ಷೀರ ಅಭಿಷೇಕ ಮತ್ತು ಜಲ ಅಭಿಷೇಕಕ್ಕೂ ಹೆಸರುವಾಸಿಯಾಗಿದ್ದು, ಕಳೆದ 40 ವರ್ಷಗಳಿಂದ ಸಾಕಷ್ಟ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ಮತ್ತು ತಮ್ಮ ಇಷ್ಟಗಳನ್ನು ಈಡೇರಿಸುತ್ತಾ, ಕಷ್ಟಗಳನ್ನು ಹೋಗಲಾಡಿಸುತ್ತಾನೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ.