ಯಾರದೋ ಕಳೆದು ಹೋದ ಬರೋಬ್ಬರಿ 40 ಕೋಟಿ ಚೆಕ್ ಓರ್ವನಿಗೆ ದೊರೆತು ವಾಪಸ್ ಮಾಡಿದ | ಬದಲಿಗೆ ಆತನಿಗೆ ಏನು ದೊರೆಯಿತು ಗೊತ್ತಾ?
ಕೆಲವೊಂದು ಬಾರಿ ಏನೆಲ್ಲಾ ವಿಚಿತ್ರ ಘಟನೆಗಳು ನಡೆಯುತ್ತದೆ ಎಂದರೆ. ‘ನಾವು ಅಂದು ಕೊಂಡಿದ್ದೇ ಒಂದು ಆದದ್ದು ಮಾತ್ರ ಇನ್ನೊಂದು’ ಈ ತರ ನಡೆಯುತ್ತದೆ. ಹಲವರಿಗೆ ಅದೆಷ್ಟೋ ಬಾರಿ ನಡೆಯುವಾಗ ಆಕಸ್ಮಿಕವಾಗಿ ಹಣ, ಕೆಲವು ಬಾರಿ ಕಳೆದುಹೋದ ಚೆಕ್ ಹಾಳೆಗಳೂ ಸಿಗುತ್ತವೆ. ಈ ರೀತಿಯ ಹಲವಾರು ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಸಿಕ್ಕ ಆ ಕಳೆದುಹೋದ ಚೆಕ್ ಮೊತ್ತವನ್ನು ನೋಡಿದರೆ ತಲೆ ತಿರುಗತ್ತದೆ. ಅಷ್ಟಕ್ಕೂ ಆ ಚೆಕ್ ನಲ್ಲಿದ್ದ ಮೊತ್ತ ಎಷ್ಟು ಗೊತ್ತಾ? ಚೆಕ್ ಅನ್ನು ಹಿಂದಿರುಗಿಸಿ ಕೊಟ್ಟಾಗ ಅವರಿಗೆ ನೀಡಿದ ಉಡುಗೊರೆ ಏನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಅನೋವರ್ ಎಂಬ ಜರ್ಮನ್ ಪ್ರಜೆಯೊಬ್ಬ ತನ್ನ ತಾಯಿಯನ್ನು ಭೇಟಿ ಮಾಡಿ ಮನೆಗೆ ಮರಳುವಾಗ ಮೈದಾನದಲ್ಲಿ ಏನೋ ಒಂದು ಹಾಳೆ ಹಾರುತ್ತಿರುವುದು ಕಂಡುಬಂದಿತು. ಅದನ್ನು ಅವನು ಹೋಗಿ ತೆಗೆದುಕೊಂಡಾಗ ಅದೊಂದು ಚೆಕ್ ಹಾಳೆಯಾಗಿತ್ತು ಅದು ಕೂಡ ಕ್ರಾಸ್ ಮಾಡಿರುವ ಚೆಕ್ ಆಗಿತ್ತು. ಇಲ್ಲಿನ ಜನಪ್ರೀಯ ಚಾಕೊಲೇಟ್ ಕ್ಯಾಂಡಿ ತಯಾರಕರಾದ ಹರಿಬೋ ಎಂಬ ಕಂಪನಿಗೆ ಸಂದಾಯವಾಗಬೇಕಿದ್ದ ಚೆಕ್ ಅದಾಗಿತ್ತು. ಇನ್ನೂ ವಿಶೇಷವೆಂದರೆ ಅದರಲ್ಲಿ ಪಾವತಿಸಬೇಕಾಗಿದ್ದ ಮೊತ್ತ 4.8 ಮಿಲಿಯನ್ ಯುರೋಗಳಾಗಿತ್ತು. ಅಂದರೆ ಇದು ಭಾರತೀಯ ರೂಪಾಯಿಗಳಲ್ಲಿ 40 ಕೋಟಿಗೂ ಅಧಿಕ ಮೊತ್ತ.
ಅಷ್ಟು ದೊಡ್ಡ ಮೊತ್ತವನ್ನು ನೋಡಿದಾಕ್ಷಣ ಅವನಿಗೆ ಊಹೆ ಮಾಡಲು ಆಗಲಿಲ್ಲ. ಇಷ್ಟು ದೊಡ್ಡ ಮೊತ್ತದ ಹಣದ ಚೆಕ್ ಸಿಕ್ಕ ನಂತರ ಅನೋವರ್ ಸ್ವಲ್ಪ ಯೋಚಿಸಿ ಅದನ್ನು ಹಿಂತಿರುಗಿಸಲು ನಿರ್ಧರಿಸಿದ್ದಾನೆ. ಅದರಂತೆ ಅವನು ಆ ಹರಿಬೋ ಕಂಪನಿಯನ್ನು ಸಂಪರ್ಕಿಸಿ ಸಿಕ್ಕ ಚೆಕ್ ಬಗ್ಗೆ ಹೇಳಿದ್ದಾನೆ. ತಕ್ಷಣವೇ ಹರಿಬೊ ಕಂಪನಿಯ ವಕೀಲರು ಅನೋವರ್ ನನ್ನು ಕುರಿತು ಆ ಚೆಕ್ ಅನ್ನು ನಾಶಪಡಿಸಿ ಅದರ ದೃಢೀಕರಣವನ್ನು ತಮಗೆ ಕಳುಹಿಸಿಕೊಡಲು ಹೇಳಿದ್ದಾರೆ. ಅನೋವರ್ ಅವರು ವಕೀಲರು ಹೇಳಿದಂತೆಯೇ ಮಾಡಿದ್ದಾನೆ. ಹರಿಬೊ ಕಂಪನಿಗೆ ಹಣ ಸಂದಾಯ ಮಾಡಲು ಸೂಪರ್ ಮಾರ್ಕೆಟ್ ಒಂದು ಆ ಚೆಕ್ ಅನ್ನು ನೀಡಿತ್ತು ಎಂದು ತಿಳಿದು ಬಂದಿದೆ.
ಅನೋವರ್ ಇಷ್ಟು ದೊಡ್ಡ ಮೊತ್ತದ ಚೆಕ್ ಬಗ್ಗೆ ಪ್ರಾಮಾಣಿಕವಾಗಿ ಕಂಪನಿಗೆ ಹೇಳಿದ್ದರಿಂದ ಅದಕ್ಕೆ ತಕ್ಕಂತೆಯೇ ಕೆಲ ದಿನಗಳಲ್ಲಿ ಅನೋವರ್ ಗೆ ಕಂಪನಿ ವತಿಯಿಂದ ಒಂದು ಉಡುಗೊರೆ ದೊರೆತಿತ್ತು. ಅವನಲ್ಲಿ ಏನೋ ಒಂದು ನಿರೀಕ್ಷೆ ಮೂಡಿತ್ತೋ ಏನೋ, ಆದರೆ ಆ ಉಡುಗೊರೆಯನ್ನು ತೆರೆದಾಕ್ಷಣ ಅದರಲ್ಲಿ ಕೆಲ ಚಾಕೊಲೇಟ್ ಹಾಗೂ ಕ್ಯಾಂಡಿಗಳು ಮಾತ್ರವೇ!…
ತದನಂತರ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡಾಗ ಪರ ಹಾಗೂ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದೂ, ಈ ನಡುವೆ ಕ್ಯಾಂಡಿ ತಯಾರಕ ಹರಿಬೊ ಹೇಳಿರುವಂತೆ ಆ ಚೆಕ್ ಕ್ರಾಸ್ ಮಾಡಲಾಗಿದ್ದರಿಂದ ಅದನ್ನು ಯಾರೂ ಸಹ ಕ್ಯಾಶ್ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರರು, ಈ ವ್ಯಕ್ತಿಗೆ ಹರಿಬೊದ ನಾಲ್ಕು ಮಿಲಿಯನ್ ಮೊತ್ತದ ಚೆಕ್ ಸಿಕ್ಕಿದೆ, ಆದರೆ ಹರಿಬೊ ಮಾತ್ರ ಆ ವ್ಯಕ್ತಿಗೆ ಆರು ಯುರೋ ಮೌಲ್ಯದ ಕ್ಯಾಂಡಿಯ ಧನ್ಯವಾದದ ಉಡುಗೊರೆ ನೀಡಿದೆ” ಎಂದು ಕುಟುಕಿದ್ದಾರೆ. ಇನ್ನೊಬ್ಬ ಬಳಕೆದಾರರು, “ನೋಡಿ ಇಲ್ಲೊಬ್ಬ ವ್ಯಕ್ತಿ ಸಿಹಿ ತಿನಿಸು ತಯಾರಕರಿಗೆ ಸಲ್ಲಬೇಕಾಗಿದ್ದ ನಾಲ್ಕು ಮಿಲಿಯನ್ ಮೊತ್ತದ ಚೆಕ್ ಹುಡುಕಿದ್ದಾನೆ. ಆದರೆ, ಆ ತಯಾರಕರಿಂದ ಅವನಿಗೆ ಸಿಕ್ಕಿದ್ದು ಕೇವಲ ಆರು ಕ್ಯಾಂಡಿಗಳು ಮಾತ್ರ” ಎಂದು ವ್ಯಂಗ್ಯವಾಡಿದ್ದಾರೆ.