ಬಜಾಜ್ ಪಲ್ಸರ್ N150 ಬಿಡುಗಡೆ: ಅತಿ ಕಡಿಮೆ ದರದಲ್ಲಿ ಲಭ್ಯವಾಗುವ ಸಾಧ್ಯತೆ!
ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ವಿನ್ಯಾಸದ ವಾಹನಗಳನ್ನು ಪರಿಚಯಿಸುತ್ತಲೇ ಇದೆ.
ಹೌದು ಈಗಾಗಲೇ ಬಿಡುಗಡೆಗೆ ದಾರಿಯಲ್ಲಿ ಇರುವ ಬಜಾಜ್ ಪಲ್ಸರ್ N150 ಬೈಕ್ ಜನರ ಮನ ಸೆಳೆದಿದೆ. ಬಜಾಜ್ ಇತ್ತೀಚೆಗೆ ಹೊಸ ಪೀಳಿಗೆಯ ಪಲ್ಸರ್ ಶ್ರೇಣಿಯನ್ನು ವಿಸ್ತರಿಸುವಲ್ಲಿ ಕಾರ್ಯನಿರತವಾಗಿದೆ. ಕಳೆದ ವರ್ಷ ಬಜಾಜ್ ಪಲ್ಸರ್ N250 ಮತ್ತು F250 ಹೊಚ್ಚ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶ ಮಾಡಿತು. ಜೊತೆಗೆ ಕೆಲವು ತಿಂಗಳ ಹಿಂದೆ ಪಲ್ಸರ್ N160 ಅನ್ನು ಕೂಡ ಬಿಡುಗಡೆ ಮಾಡಿತು. ಸದ್ಯ ಇದು ಭಾರತದಲ್ಲಿಯೂ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ.
ಈಗಾಗಲೇ ಹೊಸ ಬಜಾಜ್ ಪಲ್ಸರ್ ಶ್ರೇಣಿಯ ಪ್ರವೇಶ ಮಟ್ಟದ ಸ್ಪೋರ್ಟಿ N150 ಬೈಕನ್ನು ಸಾರ್ವಜನಿಕ ರಸ್ತೆಗಳಲ್ಲಿ ಟೆಸ್ಟಿಂಗ್ ವೇಳೆ ಕಾಣ ಸಿಕ್ಕಿದೆ. ಆದರೆ ಬಜಾಜ್ ಕಂಪನಿ ಮಾತ್ರ ಇನ್ನೂ ಯಾವುದೇ ಅಧಿಕೃತ ಬಿಡುಗಡೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಟೆಸ್ಟಿಂಗ್ ಬೈಕನ್ನು ನೊಡಿದರೆ ಬಹುತೇಕ ಬಿಡುಗಡೆಗೆ ಸಿದ್ಧವಿರುವಂತೆ ಕಾಣುತ್ತಿದೆ.
ಭಾರತದಲ್ಲಿ ರೋಡ್ ಟೆಸ್ಟ್ ನಡೆಸಿದ ಹೊಸ ಬಜಾಜ್ ಟ್ರಯಂಫ್ ಸ್ಕ್ರ್ಯಾಂಬ್ಲರ್ ಬೈಕ್ ಮುಂಬರುವ ಪಲ್ಸರ್ N150, N160 ಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಸ್ಪೋರ್ಟಿಯಾಗಿ ಕಾಣುವ ಮೋಟಾರ್ಸೈಕಲ್ ಖರೀದಿಸಲು ಬಯಸುವ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ನೀಡುವುದು ಈ ಬೈಕ್ ನಿರ್ಮಾಣದ ಮುಖ್ಯ ಉದ್ದೇಶವಾಗಿದೆ. ಪಲ್ಸರ್ N160 ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಈಗ N150 ಅನ್ನು ಒಟ್ಟು ಎರಡು ಪುನರಾವರ್ತನೆಗಳಲ್ಲಿ ಲಭ್ಯವಾಗುವಂತೆ ಮಾಡಬಹುದು.
ಬಜಾಜ್ ಪಲ್ಸರ್ N150 ಮುಖ್ಯ ಪ್ರಯೋಜನಗಳು:
- ಪವರ್ಟ್ರೇನ್ ಅನ್ನು N160 ಬೈಕಿನಿಂದ ಪಡೆಯುವ ನಿರೀಕ್ಷೆಯಿದೆ. ಮತ್ತು ಸ್ಪ್ಲಿಟ್ ಗ್ರ್ಯಾಬ್ ರೈಲ್ಗಳು, ಅಂಡರ್ಬೆಲ್ಲಿ ಎಕ್ಸಾಸ್ಟ್ ಯೂನಿಟ್, ಟ್ವಿನ್ ಎಲ್ಇಡಿ ಟೈಲ್ಲೈಟ್ಗಳು, ಹ್ಯಾಲೊಜೆನ್ ಹೆಡ್ಲ್ಯಾಂಪ್ ಇಲ್ಯುಮಿನೇಷನ್, ಹ್ಯಾಲೊಜೆನ್ ಟರ್ನ್ ಸಿಗ್ನಲ್ಗಳು, ಮಿಡಲ್ ಸೆಟ್ ಫುಟ್ಪೆಗ್ಗಳ ಸ್ಥಾನೀಕರಣ, ನೇರವಾದ ಹ್ಯಾಂಡಲ್ಬಾರ್ ಪೊಸಿಷನಿಂಗ್, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ರಿಯರ್ ಮೊನೊಶಾಕ್ ಸಸ್ಪೆನ್ಷನ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ cluster ಇತರ ಹೈಲೈಟ್ಗಳನ್ನು ಒಳಗೊಂಡಿರಲಿದೆ.
- ಇದು N250 ಮತ್ತು N160 ಬೈಕಿನ ಬಹುತೇಕ ಅದೇ ವಿನ್ಯಾಸವನ್ನು ಹೊಂದಿರುತ್ತದೆ. ಯಮಹಾ ಎಫ್ಜೆಡ್ ವಿ3, ಸುಜುಕಿ ಜಿಕ್ಸರ್ 155, ಟಿವಿಎಸ್ ಅಪಾಚೆ ಆರ್ಟಿಆರ್ 160 2ವಿ, ಹೋಂಡಾ ಯುನಿಕಾರ್ನ್ ಮತ್ತು ಮುಂತಾದವುಗಳ ವಿರುದ್ಧ ಮೋಟಾರ್ಸೈಕಲ್ ಅನ್ನು ಆಕ್ರಮಣಕಾರಿಯಾಗಿ ಇರಿಸಲು ಕಡಿಮೆ ಬೆಲೆಗೆ ತರಲಾಗುವುದು. •ಬಜಾಜ್ ಪಲ್ಸರ್ N150 ಬೆಲೆ ಸುಮಾರು ರೂ. 1.07 ಲಕ್ಷ (ಎಕ್ಸ್ ಶೋರೂಂ) ಇರಲಿದ್ದು, ಇದು ಈಗಾಗಲೇ ಅಸ್ತಿತ್ವದಲ್ಲಿರುವ ಪಲ್ಸರ್ 150 ನಲ್ಲಿ ಕಂಡುಬರುವ ಹೆಡ್ಲ್ಯಾಂಪ್ ಪಡೆಯಲಿದೆ. ಜೊತೆಗೆ N160 ನಲ್ಲಿ ಬಳಸಲಾದ ಕೊಳವೆಯಾಕಾರದ ಚೌಕಟ್ಟನ್ನು ಮುಂಬರುವ ಮಾದರಿಯನ್ನು ಬೆಂಬಲಿಸಲು ಟ್ವೀಕ್ ಮಾಡಬಹುದು.
ಒಟ್ಟಿನಲ್ಲಿ ಬೈಕ್ ಖರೀದಿಸುವ ಯೋಚನೆಯಿದ್ದಲ್ಲಿ ಈ ಮೇಲಿನ ಬೈಕ್ ನಿಮಗೆ ಈಗಿನ ಟ್ರೆಂಡಿಗೆ ಸರಿ ಹೋಲುತ್ತವೆ ಅನ್ನಬಹುದು.