3 ಮಾತ್ರೆ ಸೇವಿಸುವ ಬದಲು 3 ಪಟ್ಟು ಹೆಚ್ಚು ಮಾತ್ರೆ ಸೇವಿಸಿದ ಮಹಿಳೆ | ಮುಂದೆ ಆಗಿದ್ದು ಮಹಾ ಎಡವಟ್ಟು!!

ಅನಾರೋಗ್ಯ ಎಂದಾಕ್ಷಣ ಎಲ್ಲರ ಮನಸ್ಸಿಗೆ ತಟ್ಟನೆ ಬರೋದೇ ಗುಳಿಗೆ ನುಂಗುವುದು. ಹೇಗಾದ್ರು ಮಾಡಿ ಒಮ್ಮೆ ಈ ತಲೆನೋವು, ಜ್ವರ ಕಮ್ಮಿ ಆಗಲಿ ಅನ್ನುವುದೇ ಉದ್ದೇಶ. ಆದ್ರೆ, ಅನಾರೋಗ್ಯ ಕಮ್ಮಿ ಏನೋ ಆಗಬಹುದು, ಆದರೆ ಇದರಿಂದ ಆರೋಗ್ಯಕ್ಕೆ ಪೆಟ್ಟು ಬೀಳೋದಂತೂ ಖಚಿತ.

 

ಹೌದು. ಇದಕ್ಕೆ ಉದಾಹರಣೆಯಾಗಿಯೇ ಇದೆ ಇಲ್ಲೊಂದು ಕಡೆ ನಡೆದ ಘಟನೆ. ಮಹಿಳೆ ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದಾಗಿ ತಲೆನೋವು ಹೆಚ್ಚಾಯಿತೆಂದು ಹೆಚ್ಚಿನ ಮಾತ್ರೆಗಳನ್ನು ಸೇವಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇಂತಹದೊಂದು ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಚಂದ್ರಮ್ಮ (28)ಎಂದು ಗುರುತಿಸಲಾಗಿದೆ.  ವೈದ್ಯರ ಸಲಹೆ ಪ್ರಕಾರ ಚಂದ್ರಮ್ಮ ಪ್ರತಿದಿನ 3 ಮಾತ್ರೆ ಸೇವಿಸಬೇಕಿತ್ತು. ಆದರೆ ಇವರು ತಲೆನೋವು ಹೆಚ್ಚಾಯಿತು ಎಂದು ಒಂದೇ ಬಾರಿಗೆ 3 ಪಟ್ಟು ಹೆಚ್ಚು ಮಾತ್ರೆ ಸೇವಿಸಿದ್ದಾರೆ. ಇದರಿಂದ ಅಸ್ವಸ್ಥರಾದ ಚಂದ್ರಮ್ಮರನ್ನು ಅವರ ಕುಟುಂಬದವರು ಕೂಡಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಆದರೆ ದುರದೃಷ್ಟವಶಾತ್​, ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಚಂದ್ರಮ್ಮ ಮೃತಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಎಂಟು ವರ್ಷಗಳಿಂದ ಉಸಿರಾಟದ ತೊಂದರೆ, ತಲೆನೋವಿನಿಂದ ಬಳಲುತ್ತಿದ್ದರು. ದಿನನಿತ್ಯಕ್ಕಿಂತ ಹೆಚ್ಚು ತಲೆನೋವು ಅನುಭವಿಸುತ್ತಿದ್ದರು ಎಂದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಾತ್ರೆಗಳನ್ನು ಇವರು ಸೇವಿಸಿದ್ದಾರೆ. ಇವರ ಈ ನಿರ್ಧಾರದಿಂದ ಇದೀಗ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

Leave A Reply

Your email address will not be published.