ಅಶ್ಲೀಲ ವೀಡಿಯೋ ಕಳಿಸ್ತಾರೆ ಅನ್ನೋ ಆರೋಪ | ನಟಿ ರಾಣಿ ಮೇಲೆ‌ ಮಾನನಷ್ಟ ಮೊಕದ್ದಮೆ – ಡಿಂಗ್ರಿ ನಾಗರಾಜ್

ನಟಿ ರಾಣಿ ಯವರು ಕನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಮಹತ್ತರ ಆರೋಪಗಳನ್ನು ಮಾಡಿದ್ದರು.

 

ಈ ಆರೋಪದ ಬೆನ್ನಲ್ಲೇ ಡಿಂಗ್ರಿ ನಾಗರಾಜ್ ರವರು ಪ್ರತಿಕ್ರಿಯೆ ನೀಡಿದ್ದಾರೆ. ಸಂಘದಲ್ಲಿ ಹಣದ ದುರುಪಯೋಗ ಮಾಡುತ್ತಿದ್ದ ಆರೋಪ ಮಾಡಿದ್ದು ಜೊತೆಗೆ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎನ್ನುವುದು ರಾಣಿ ಆರೋಪವಾಗಿತ್ತು.

ರಾಣಿ ಅವರ ಆರೋಪಕ್ಕೆ ಅಧ್ಯಕ್ಷ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ರಾಣಿ ಆರೋಪ ಎಲ್ಲವೂ ನಿರಾಧಾರ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ, ರಾಣಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕುವ ಕುರಿತು ಎಚ್ಚರಿಕೆ ನೀಡಿದ್ದು, ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಅವರು ಸಂಘದ ಆವರಣದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ಶುರು ಮಾಡಿದ್ದರಿಂದ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಲಾಗಿದೆ. ಈಗ ನಾವು ಕಾರ್ಯಕ್ರಮ ಮಾಡುತ್ತಿರುವುದನ್ನು ವಿರೋಧಿಸುವ ಸಲುವಾಗಿ ಈ ರೀತಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ಅಶ್ಲೀಲ ವಿಡಿಯೋ ಕಳಿಸಿರೋದು ಸುಳ್ಳು ಮಾಹಿತಿಯಾಗಿದ್ದು, ಹಾಗಾಗಿ, ನಾವೇ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ’ ಎಂದು ಡಿಂಗ್ರಿ ನಾಗರಾಜ್ ಗುಡುಗಿದ್ದಾರೆ.

ಕರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಬುಗಿಲೆದ್ದಿದ್ದು, ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಯ ಕುರಿತಾಗಿ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

ಕರ್ನಾಟಕ ಚಲನಚಿತ್ರ ಪೋಷಕರ ಸಂಘದಿಂದ ಅನೇಕರಿಗೆ ತುಂಬ ಒಳ್ಳೆಯದಾಗಿದೆ. ಇವತ್ತು ನಾವು ಸಂಘದ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ ನಾನು ಡಿಂಗ್ರಿ ನಾಗರಾಜ್, ಆಡುಗೋಡಿ ಶ್ರೀನಿವಾಸ್ ವಿರುದ್ಧ ಆರೋಪ ಮಾಡುತ್ತಿದ್ದೇನೆ. ನಾವು ಯಾವುದಾದರೂ ವಿಷಯವನ್ನು ನೇರವಾಗಿ ಹೇಳಿದರೆ ಈ ಸಂಘದ ಪ್ರಸ್ತುತ ಅಧ್ಯಕ್ಷ ಡಿಂಗ್ರಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಖಚಾಂಚಿ ಸುರೇಶ್‌ ಅವರು ಸೊಂಟದ ಕೆಳಗಿನ ಮಾತುಗಳನ್ನಾಡುತ್ತಾರೆ ಅಲ್ಲದೆ, ನಾವು ಹೇಳಿದಂತೆ ಕೇಳಬೇಕು ಎನ್ನುವ ವಾದ ಮಾಡುತ್ತಾರೆ.

ಯಾವುದಾದರೂ ಆಯೋಜಕರು ಸಿಕ್ಕಿದರೆ, ಅವರ ಬಗ್ಗೆ ನಾವು ಹೇಳುವಂತಿಲ್ಲ. ನಮ್ಮ ಸಂಘದಲ್ಲಿನ ಮಹಿಳೆಯರಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸುತ್ತಾರೆ ಎಂದು ನಟಿ ರಾಣಿ ಆರೋಪಿಸಿದ್ದಾರೆ.

Leave A Reply

Your email address will not be published.