‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’| ದೊಡ್ಮನೆಯಲ್ಲಿ ರೂಪೇಶ್ ರಾಜಣ್ಣನ ಬ್ರೇಸ್ಲೆಟ್,ಉಂಗುರ ಕಳವು

ಬಿಗ್ ಬಾಸ್ ಮನೆಯಲ್ಲಿ ಪ್ರತೀಬಾರಿ ಒಂದಲ್ಲಾ ಒಂದು ವಿಷಯಕ್ಕೆ ಜಗಳ ಆಡುತ್ತಲೇ ಇರುತ್ತಾರೆ. ಆದರೆ ಇದೀಗ ಇನ್ನೊಂದು ಘಟನೆ ನಡೆದಿದೆ. ದೊಡ್ಮನೆಯಲ್ಲಿ ರಾಜಣ್ಣ ತಮ್ಮ ಬ್ರೇಸ್ಲೆಟ್, ಉಂಗುರವನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ.

 

ಈ ಬಾರಿ ಬಿಗ್ ಬಾಸ್ ಮನೆ ಮಂದಿಗೆ ಗೊಂಬೆ ತಯಾರಿಸುವ ಟಾಸ್ಕ್ ಕೊಟ್ಟಿದ್ದರು. ಈ ವಿಷಯವಾಗಿ ಮನೆಯಲ್ಲಿ ಮಹಾಯುದ್ಧವೇ ನಡೆದಿತ್ತು. ಈ ಟಾಸ್ಕ್ ಬಳಿಕ ರಾಜಣ್ಣ ತಮ್ಮ ಬ್ರೇಸ್ಲೆಟ್ ಮತ್ತು ಉಂಗುರ ಕಳೆದು ಹೋಗಿರುವುದು ಅವರ ಗಮನಕ್ಕೆ ಬಂದಿದೆ. ನಂತರ ಬಿಗ್ ಬಾಸ್ ಬ್ರೇಸ್ಲೆಟ್ ಎಲ್ಲಿದೆ ಎಂದು ತಿಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ.

ಇತ್ತ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡೆ ಎಂದು ರಾಜಣ್ಣ ಚಿಂತೆ ಮಾಡ್ತಾ ಇದ್ದರೆ, ಅತ್ತ ರೂಪೇಶ್ ಶೆಟ್ಟಿ ಇವರನ್ನು ಚೆನ್ನಾಗಿಯೇ ಆಟ ಆಡಿಸಿದ್ದಾರೆ. ಸಿಕ್ಕಿದ್ದೆ ಚಾನ್ಸ್ ಎಂದು ರೂಪೇಶ್ ಶೆಟ್ಟಿ, ರಾಜಣ್ಣ ಕೈಯಲ್ಲಿ ಭಿಕ್ಷೆ ಬೇಡಿಸಿದ್ದಾರೆ. ನಂತರ ಕ್ಯಾಮೆರಾ ಮುಂದೆ ರೂಪೇಶ್ ಶೆಟ್ಟಿ ನಾನೇ ಬ್ರೇಸ್ಲೆಟ್ ಮತ್ತು ಉಂಗುರ ತೆಗೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆಮೇಲೆ ರಾಜಣ್ಣಗೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಸಾನ್ಯ ಕೂಡ ರಾಜಣ್ಣಗೆ ಬಕ್ರಾ ಮಾಡಿದ್ದರು. ಇದೀಗ ರೂಪೇಶ್ ಶೆಟ್ಟಿ ಸರದಿ, ಒಟ್ನಲ್ಲಿ ರಾಜಣ್ಣ ಪೇಚಾಟ, ಪರದಾಟ ನೋಡಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ಇದಂತು ‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’ ಎಂಬಂತಾಯಿತು.

Leave A Reply

Your email address will not be published.