ಬೇರೆಯವನ ಹೆಂಡತಿ ಜೊತೆ ಪ್ರಿಯಕರನ ಪಲ್ಲಂಗದಾಟ | ಎಂಟ್ರಿ ಕೊಟ್ಟ ಪ್ರಿಯತಮೆಯ ಗಂಡ , ನಂತರ ನಡೆದೇ ಹೋಯ್ತು ಹೈಡ್ರಾಮಾ
ಬೆಂಗಳೂರಿನಲ್ಲಿ ಪ್ರಿಯಕರನೊಬ್ಬ ಪ್ರೇಯಸಿಯ ಜೊತೆ ಏಕಾಂತದಲ್ಲಿದ್ದಾಗ ಪ್ರಿಯತಮೆಯ ಗಂಡನ ಎಂಟ್ರಿಯಾಗಿ ಹೈಡ್ರಾಮಾವೊಂದು ನಡೆದಿದೆ. ಆ ವೇಳೆ ಪ್ರಿಯಕರ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅಸ್ಸಾಂ ಮೂಲದ ಮುಕುಂದ್ ಖೌಂದ್ (36) ಬಂಧಿತ ಪ್ರಿಯಕರ. ಪ್ರೇಯಸಿಯ ಗಂಡನಿಂದ ತಪ್ಪಿಸಿಕೊಳ್ಳಲು ಹೆಚ್ಎಎಲ್ ಗೇಟ್ ಮೇಲೆ ಹಾರಿದ್ದನು. ಈ ವೇಳೆ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಪೂರ್ವಿ ಡೋಲೈ ಎಂಬಾಕೆಯ ಜೊತೆ ಮುಕುಂದ್ ಖೌಂದ್ ಅಕ್ರಮ ಸಂಬಂಧ ಹೊಂದಿದ್ದನು. ಪೂರ್ವಿ ಡೋಲೈ ಪತಿ ಬಿಪುಲ್ ಡೋಲೈ ಹೆಎಚ್ಎಲ್ ನ ಖಾಸಗಿ ಕಂಪನಿಯಲ್ಲಿ ಆಫಿಸ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ನವೆಂಬರ್ 9ರಂದು ಪೂರ್ವಿ ಮತ್ತು ಮುಕುಂದ್ ಇವರಿಬ್ಬರು ಕೆ.ಆರ್.ಪುರಂ ರೈಲ್ವೇ ನಿಲ್ದಾಣದಲ್ಲಿ ಇದ್ದಾರೆ ಎಂದು ಪತಿಗೆ ಗೊತ್ತಾಗಿದೆ. ಈ ಇಬ್ಬರನ್ನು ಯಮಲೂರಿನಲ್ಲಿರುವ ಮನೆಗೆ ಕರೆತಂದಿದ್ದನು. ನಂತರ ಮನೆಯಲ್ಲಿ ಮೂವರ ನಡುವೆಯು ಭಾರೀ ಜಗಳ ಶುರುವಾಗಿದೆ.
ಆಕೆಯ ಪತಿ ಬಿಪುಲ್ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದಾನೆ. ಇದರಿಂದ ಭಯಭೀತನಾಗಿ ಮುಕುಂದ್ ಮನೆಯಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಮುಕುಂದ್ ಮನೆಯ ಸಮೀಪದಲ್ಲಿದ್ದ ಹೆಚ್ಎಎಲ್ ಗೇಟ್ ಜಿಗಿದು ನಿಷೇಧಿತ ಪ್ರದೇಶವನ್ನು ಪ್ರವೇಶಿಸಿದ್ದಾನೆ.
ಈ ವೇಳೆ ಮುಕುಂದ್ನನ್ನು ನೋಡಿದ ಹೆಚ್ಎಎಲ್ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊದಲು ಭದ್ರತಾ ಸಿಬ್ಬಂದಿ ಮುಕುಂದ್ನನ್ನು ಕಳ್ಳ ಎಂದು ಭಾವಿಸಿದ್ದರು. ಆದರೆ ನಂತರ ವಿಚಾರಣೆ ನಡೆಸಿದಾಗ ಮುಕುಂದ್ ನಡೆದ ಘಟನೆಯನ್ನು ಹೇಳಿದ್ದಾನೆ.
ವಿಚಾರಣೆ ಬಳಿಕ ಮುಕುಂದ್ ವಿರುದ್ಧ ಹೆಎಚ್ಎಎಲ್ ಸೆಕ್ಯೂರಿಟಿ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಮುಕುಂದ್ನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.
ಈ ಘಟನೆಯು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರ ಎರಡು ದಿನ ಮುಂಚಿತವಾಗಿ ನಡೆದಿತ್ತು. ಹಾಗಾಗಿ ಹೆಚ್ಎಎಲ್ನಲ್ಲಿ ಭದ್ರತಾ ಲೋಪ ಎಂದು ಹೇಳಲಾಗಿತ್ತು. ಇದೀಗ ಘಟನೆ ಬಗ್ಗೆ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಸ್ಪಷ್ಟನೆ ನೀಡಿದ್ದಾರೆ.