ಮುದ್ದು ಮುಖದ ಚೆಲುವ ಸತ್ಯ ಸೀರಿಯಲ್‌ ನ ನಟನ ಮದುವೆ ಫಿಕ್ಸ್‌ | ಸಾಗರ್‌ ಕೈ ಹಿಡಿಯೋ ಕನ್ಯೆ ಈಕೆನೇ ನೋಡಿ

ಸತ್ಯ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದಿರುವ ಹೀರೋ ಸಾಗರ್ ಗೌಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಿರಿ ರಾಜು ಜೊತೆ ನಟ ಸಾಗರ್ ಹಸೆಮಣೆ ಏರುತ್ತಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ಅನೇಕ ಕಿರುತರೆ ನಟ-ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಮತ್ತೋರ್ವ ಕಿರುತರೆಯ ಖ್ಯಾತ ನಟ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅವರು ಯಾರೆಂದರೆ ಸತ್ಯ ಧಾರಾವಾಹಿಯ ನಾಯಕ ಸಾಗರ್ ಗೌಡ.

ಇದೀಗ ನಟ ಸಾಗರ್ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಇನ್ನೂ, ಸಾಗರ್ ಕೈ ಹಿಡಿಯುತ್ತಿರುವ ಯುವತಿ ಯಾರೆಂದರೆ, ನಟಿ, ಮಾಡೆಲ್ ಸಿರಿ ರಾಜು. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಿರಿ ರಾಜು ತನ್ನ ಭಾವಿ ಪತಿ ಯಾರೆಂದು ಪರಿಚಯ ಮಾಡಿಕೊಂಡಿದ್ದಾರೆ. ನಟ ಸಾಗರ್ ಜೊತೆ ಇರುವ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿ ಮದುವೆ ವಿಚಾರ ರಿವೀಲ್ ಮಾಡಿದ್ದಾರೆ. ಫೋಟೋ ನೋಡಿ ನಟ ಸಾಗರ್ ಮತ್ತು ಸಿರಿ ಜೋಡಿಗೆ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ನಾನು ಮದುವೆಯಾಗುತ್ತಿರುವ ಅದ್ಭುತ ವ್ಯಕ್ತಿಯನ್ನು ಪರಿಚಯಿಸುತ್ತಿದ್ದೀನಿ ಎಂದು ಹೇಳಿ ಇಬ್ಬರೂ ಪೋಟೋ ಶೇರ್ ಮಾಡಿದ್ದಾರೆ. ಹಾಗೇ ಇವರಿಬ್ಬರೂ ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ನಿಶ್ಚಿತಾರ್ಥ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದ್ದು, ಹಾಗೇ ಮುಂದಿನ ವರ್ಷ ಮದುವೆಯಾಗುವ ಸಾಧ್ಯತೆ ಕೂಡ ಇದೆ ಎಂಬ ಮಾಹಿತಿ ತಿಳಿದುಬಂದಿದೆ.

ಸದ್ಯ ಸಾಗರ್ ಗೌಡ ಅವರು ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮೂಲ್ ಬೇಬಿ ಅಂತಾನೆ ಫೇಮಸ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಸಿರಿ ಕೂಡ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದು ಕೆಲವು ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ. ಇದೀಗ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

Leave A Reply

Your email address will not be published.