Health Tip : ಕುಂಬಳಕಾಯಿ ಒಮ್ಮೆ ತಿಂದು ನೋಡಿ | ಇದರ ಪ್ರಯೋಜನ ಅಷ್ಟಿಷ್ಟಲ್ಲ!

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸರಿಯಾಗಿ ಎಲ್ಲಾ ಆಹಾರವನ್ನು ಸಮತೋಲನವಾಗಿ ಸೇವಿಸಬೇಕು ಅಂದರೆ ಪ್ರತಿಯೊಂದು ತರಕಾರಿಗಳಲ್ಲಿಯೂ ತನ್ನದೇ ಆದ ಗುಣಗಳು ಹೊಂದಿರುತ್ತದೆ. ಉದಾಹರಣೆಗೆ
ಕುಂಬಳಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕುಂಬಳಕಾಯಿಯು ವಿವಿಧ ರೀತಿಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿದೆ, ಇದು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಆದರೆ ಹೆಚ್ಚಿನ ಜನರಿಗೆ ಕುಂಬಳಕಾಯಿ ಇಷ್ಟವಾಗೋದಿಲ್ಲ. ಕುಂಬಳಕಾಯಿ ಅಡುಗೆ ಮಾಡಿದಾಗ ಯಾಕಮ್ಮಾ ಇದನ್ನು ಮಾಡಿದೆ ಎಂದು ಕೇಳುವ ಒಬ್ಬರಾದರೂ ಮನೆಯಲ್ಲಿ ಇರುತ್ತಾರೆ. ಹಿರಿಯರಿಗೆ ಇದನ್ನು ತಿನ್ನಲು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಕೇಳಿದ್ರೆ ಖಂಡಿತಾ ಅದನ್ನ ಎಲ್ಲರೋ ಇಷ್ಟ ಪಡ್ತಾರೆ. ಆಸಕ್ತಿದಾಯಕ ವಿಷಯವೆಂದರೆ, ವಯಸ್ಸು ಹೆಚ್ಚಾದಂತೆ, ನಿಮ್ಮ ಆರೋಗ್ಯಕ್ಕೆ ಕುಂಬಳಕಾಯಿ ( pumpkin) ತುಂಬಾನೆ ಪ್ರಯೋಜನ ಇದೆ .

ಕುಂಬಳಕಾಯಿ ಗುಣಗಳು :
• ವೈದ್ಯಕೀಯ ಸಂಶೋಧನೆ ವರದಿಯೊಂದರ ಪ್ರಕಾರ ಕುಂಬಳಕಾಯಿ ಕ್ಯಾನ್ಸರ್ ನಲ್ಲಿ ಪ್ರಯೋಜನಕಾರಿ. ಇದನ್ನ ತಿನ್ನೋದ್ರಿಂದ ಕ್ಯಾನ್ಸರ್ ನ ಅಪಾಯಕಾರಿ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಕುಂಬಳಕಾಯಿಯಲ್ಲಿರುವ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತವೆ. ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಇದು ತುಂಬಾ ಪ್ರಯೋಜನಕಾರಿ.

• ಸ್ಥೂಲಕಾಯದಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ಅದನ್ನು ಕಡಿಮೆ ಮಾಡಲು ಯೋಜಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಸೇರಿಸಲು ಮರೆಯಬೇಡಿ. ಕುಂಬಳಕಾಯಿ ಕಾಂಡವು ಸ್ಥೂಲಕಾಯ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಅಲ್ಲದೆ ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.

• ಕುಂಬಳಕಾಯಿಯಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಹೃದಯದ ನರಗಳನ್ನು ನಿರ್ಬಂಧಿಸುವ ಕೊಳಕು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತವೆ. ಇದು ದೀರ್ಘಕಾಲದವರೆಗೆ ಹೃದ್ರೋಗಗಳಿಂದ ಸುರಕ್ಷಿತವಾಗಿದೆ. ಹೃದಯ ಆರೋಗ್ಯವಾಗಿದ್ರೆ ನೀವೂ ಸಹ ಆರೋಗ್ಯದಿಂದಿರಬಹುದು.

•ನೀವು ದೆಹಲಿ ಅಥವಾ ನೋಯ್ಡಾದಂತಹ ನಗರಗಳಲ್ಲಿ ವಾಸಿಸುತ್ತಿದ್ದರೆ, ಇಂದಿನಿಂದ ಕುಂಬಳಕಾಯಿಯನ್ನು ಸೇವಿಸಲು ಪ್ರಾರಂಭಿಸಿ. ಕುಂಬಳಕಾಯಿಯು ಕ್ಯಾರೋಟಿನಾಯ್ಡ್ ಸಂಯುಕ್ತವನ್ನು ಹೊಂದಿದೆ, ಇದು ಅಸ್ತಮಾದಂತಹ ಉಸಿರಾಟದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತೆ.

• ಕುಂಬಳಕಾಯಿ ಕಣ್ಣುಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸುವುದು ಮಾತ್ರವಲ್ಲದೆ, ವಯಸ್ಸಾದಂತೆ ಸಂಭವಿಸುವ ಕಣ್ಣಿನ ಪೊರೆಗಳಂತಹ ಕಣ್ಣಿನ ಕಾಯಿಲೆಗಳಲ್ಲಿಯೂ ಪ್ರಯೋಜನಕಾರಿಯಾಗಿದೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸೋದನ್ನು ಮರಿಬೇಡಿ.

• ನೀವು ಒತ್ತಡ ಅಥವಾ ಆತಂಕ ಸಮಸ್ಯೆಯಿಂದ ಬಳಲುತ್ತಿದ್ರೆ ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಸೇರಿಸಿ. ಕುಂಬಳಕಾಯಿ ಖಿನ್ನತೆ-ಶಮನಕಾರಿ ಗುಣಲಕ್ಷಣಗಳನ್ನು ಸಹ ಹೊಂದಿದೆ ಎಂದು ಸಂಶೋಧನೆ ತಿಳಿಸಿದೆ. ಅಲ್ಲದೇ ಇದು ಖಿನ್ನತೆಯಂತಹ ಮಾನಸಿಕ ಕಾಯಿಲೆಯನ್ನು ಗುಣಪಡಿಸಲು ನಿಮಗೆ ಸಹಾಯ ಮಾಡುತ್ತದೆ.

ಹೌದು ವೈದ್ಯಕೀಯ ವರದಿಯ ಪ್ರಕಾರ, ಕುಂಬಳಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್, ಆಂಟಿ-ಡಯಾಬಿಟಿಕ್ ಗುಣಲಕ್ಷಣಗಳು ಸೇರಿದಂತೆ ಉರಿಯೂತ ಶಮನಕಾರಿ ಗುಣಗಳಿವೆ. ಇದಲ್ಲದೆ, ಕುಂಬಳಕಾಯಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ಫೈಬರ್, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಕೊಬ್ಬು ಮತ್ತು ಸತುವಿನ ಉತ್ತಮ ಮೂಲವಾಗಿದೆ.

ಈ ಎಲ್ಲಾ ಗುಣಗಳಿರುವ ಕುಂಬಳಕಾಯಿಯನ್ನು ಸೇವಿಸುವುದರ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.