ಶಬರಿಮಲೆ ಯಾತ್ರಾರ್ಥಿಗಳಿಗೆ ಸಿಹಿಸುದ್ದಿ : ಬೆಳಗಾವಿ, ಹುಬ್ಬಳ್ಳಿಯಿಂದ ಶಬರಿಮಲೆಗೆ ಪ್ರತ್ಯೇಕ ರೈಲು
ಬೆಂಗಳೂರು : ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕವಾಗಿ ರೈಲು ಓಡಿಸಲು ನೈಋುತ್ಯ ರೈಲ್ವೆ ನಿರ್ಧರಿಸಿದೆ. ಎರಡೂ ಕಡೆಗಳಿಂದ ಶಬರಿಮಲೆ ಸಮೀಪದ ಕೊಲ್ಲಂಗೆ ರೈಲು ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ – ಕೊಲ್ಲಂ ರೈಲು (07357/07358) ನವೆಂಬರ್ 20 ರಂದು (07357) ಬೆಳಗ್ಗೆ 11.30ಕ್ಕೆ ಬೆಳಗಾವಿಯಿಂದ ಹೊರಟು ಮರು ದಿನ ಮಧ್ಯಾಹ್ನ 3.15ಕ್ಕೆ ಕೊಲ್ಲಂ ತಲುಪಲಿದೆ. ಇದೇ ರೈಲು (07358) ನವೆಂಬರ್ 21 ರಂದು ಸಂಜೆ 5.10ಕ್ಕೆ ಕೊಲ್ಲಂನಿಂದ ಹೊರಟು ಮರು ದಿನ ರಾತ್ರಿ 11ಕ್ಕೆ ಬೆಳಗಾವಿ ತಲುಪಲಿದೆ.
ಇದೇ ರೀತಿ ಡಿಸೆಂಬರ್ 4 ರಿಂದ ಜನವರಿ 15 ರ ವರೆಗೆ ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು (07361) ಪ್ರತಿ ಭಾನುವಾರದಂದು ಬೆಳಗ್ಗೆ 11.30ಕ್ಕೆ ಬೆಳಗಾವಿಯಿಂದ ಹೊರಡಲಿದ್ದು, ಮರು ದಿನ ಮಧ್ಯಾಹ್ನ 3.15ಕ್ಕೆ ಕೊಲ್ಲಂ ತಲುಪಲಿದೆ. ಇದೇ ಮಾರ್ಗದಲ್ಲಿ ಹಿಂದಿರುಗುವ ಕೊಲ್ಲಂ – ಬೆಳಗಾವಿ ವಿಶೇಷ ಎಕ್ಸಪ್ರೆಸ್ ರೈಲು (07362) ಡಿಸೆಂಬರ್ 5 ರಿಂದ ಜನವರಿ 16 ರ ವರೆಗೆ ಕೊಲ್ಲಂನಿಂದ ಪ್ರತಿ ಸೋಮವಾರದಂದು ಸಂಜೆ 5.10ಕ್ಕೆ ಹೊರಟು ಮರು ದಿನ ರಾತ್ರಿ 11 ಕ್ಕೆ ಬೆಳಗಾವಿ ತಲುಪಲಿದೆ.
ಖಾನಾಪುರ, ಲೋಂಡಾ, ಹುಬ್ಬಳ್ಳಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪೊದನೂರು, ಪಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನ ಕೋಟ್ ಮಾರ್ಗವಾಗಿ ರೈಲು ಸಂಚರಿಸಲಿದೆ.
ಹುಬ್ಬಳ್ಳಿ – ಕೊಲ್ಲಂ ವಿಶೇಷ ರೈಲು
ಹುಬ್ಬಳ್ಳಿ – ಕೊಲ್ಲಂ (07359/07360) ರೈಲು ನವೆಂಬರ್ 27 ರಂದು ಮಧ್ಯಾಹ್ನ 2.40ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಮರು ದಿನ ಮಧ್ಯಾಹ್ನ 3.15ಕ್ಕೆ ಕೊಲ್ಲಂ ತಲುಪಲಿದೆ. ಇದೇ ರೈಲು ನವೆಂಬರ್ 28 ರಂದು ಸಂಜೆ 5.10ಕ್ಕೆ ಕೊಲ್ಲಂನಿಂದ ಹೊರಟು ಮರು ದಿನ ರಾತ್ರಿ 8ಕ್ಕೆ ಹುಬ್ಬಳ್ಳಿ ತಲುಪಲಿದೆ.
ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪೊದನೂರು, ಪಲಕ್ಕಾಡ್, ತ್ರಿಶೂರ, ಎರ್ನಾಕುಲಂ, ಕೊಟ್ಟಾಯಂ, ತಿರುವಲ್ಲಾ, ಚೆಂಗನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನಕೋಟ್ ಮಾರ್ಗವಾಗಿ ರೈಲು ಸಂಚರಿಸಲಿದೆ.