7th Pay Commission : ಕೇಂದ್ರ ಸರಕಾರಿ ನೌಕರರಿಗೆ ಸಿಗಲಿದೆ ಕಡಿಮೆ ಬಡ್ಡಿದರದಲ್ಲಿ ಎಚ್ ಬಿಎ ( HBA)

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ.ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದ್ದು, ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು. ಇದೀಗ , 7th Pay Commission, ಎಚ್ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಕಡಿಮೆ ಬಡ್ಡಿ ದರದಲ್ಲಿ 34 ತಿಂಗಳ ಮೂಲ ವೇತನ ಅಥವಾ 25 ಲಕ್ಷ ರೂ. ವರೆಗೆ ಮುಂಗಡ ಪಡೆಯಬಹುದಾದ ಅವಕಾಶ ಕೂಡ ಕಲ್ಪಿಸಲಾಗಿದೆ.

 

ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ (7th Pay Commission) ಶಿಫಾರಸಿನ ಅನ್ವಯ, 2023ರ ಮಾರ್ಚ್ 31ರ ವರೆಗೆ ಕಡಿಮೆ ಬಡ್ಡಿ ದರದಲ್ಲಿ (Interest Rate) ಮನೆ ನಿರ್ಮಾಣ ಮುಂಗಡ ಅಥವಾ ಹೌಸ್ ಬ್ಯುಲ್ಡಿಂಗ್ ಅಡ್ವಾನ್ಸ್ (HBA) ಪಡೆಯಬಹುದಾಗಿದೆ. ಸದ್ಯ ಎಚ್​ಬಿಎ ಬಡ್ಡಿ ದರ ಶೇಕಡಾ 7.1ರಷ್ಟಿದ್ದು, ಬಡ್ಡಿ ದರವನ್ನು ಕಡಿಮೆ ಮಾಡುವ ಬಗ್ಗೆ 2022ರ ಏಪ್ರಿಲ್ 1ರಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಯೊಜನೆ ಕೈಗೊಂಡಿತ್ತು.

ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು (Central Government Employees) ಮನೆ ನಿರ್ಮಾಣ, ಮನೆ ನಿರ್ಮಾಣಕ್ಕಾಗಿ ನಿವೇಶನ ಖರೀದಿ, ವಸತಿ ಸೌಕರ್ಯಗಳ ವಿಸ್ತರಣೆ, ಫ್ಲ್ಯಾಟ್ ಅಥವಾ ಮನೆ ಖರೀದಿಸಲು ಮನೆ ನಿರ್ಮಾಣ ಮುಂಗಡ ಹಣ ಪಡೆಯಬಹುದಾಗಿದ್ದು, ಅಲ್ಲದೆ, ಮನೆ ನಿರ್ಮಾಣ ಈಗಾಗಲೇ ಪ್ರಾರಂಭಿಸಿದ್ದರೂ ಕೂಡ ಮುಂಗಡ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಶೇಕಡಾ 7.1ರ ಬಡ್ಡಿಯಲ್ಲಿ 25 ಲಕ್ಷ ರೂ.ವರೆಗೆ ಪಡೆಯಲು ಅವಕಾಶವಿದೆ. 2017ರ ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು 34 ತಿಂಗಳ ಮೂಲ ವೇತನ ಅಥವಾ 25 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಮುಂಗಡ ಪಡೆಯಬಹುದಾಗಿದೆ. ಒಂದು ವೇಳೆ ಮನೆ ಅಥವಾ ಫ್ಲ್ಯಾಟ್​ ದರ 25 ಲಕ್ಷ ರೂ.ಗಿಂತ ಕಡಿಮೆ ಇದ್ದರು ಕೂಡ ಕಡಿಮೆ ಮುಂಗಡ ಪಡೆಯಬಹುದಾಗಿದೆ.

ಮುಂಗಡದ ಮೊತ್ತ ನೌಕರರು ಖರೀದಿಸುವ ಮನೆ ಅಥವಾ ನಿವೇಶನದ ಒಟ್ಟು ಮೊತ್ತದ ಶೇಕಡಾ 80 ಅನ್ನು ಮೀರುವಂತಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದ್ದು, ಮನೆ ವಿಸ್ತರಣೆಗೂ ಕೂಡ ಇದೇ ನಿಯಮ ಅನ್ವಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಖರೀದಿ ಅಥವಾ ನಿರ್ಮಾಣ ಮಾಡುವುದಾದರೆ ಸಂಬಂಧಿಸಿದ ವಿಭಾಗ ಮುಖ್ಯಸ್ಥರಿಂದ ಅನುಮತಿ ದೊರೆತರೆ ಶೇಕಡಾ 100ರ ವರೆಗೂ ಮುಂಗಡ ಪಡೆಯಬಹುದಾಗಿದೆ. ಆದರೆ, 25 ಲಕ್ಷ ರೂ. ಒಳಗಿದ್ದಲ್ಲಿ ಮಾತ್ರ ಇದು ಅನ್ವಯವಾಗುತ್ತದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳು ಈಗಾಗಲೇ ಮನೆ ಹೊಂದಿದ್ದರೆ ಅದರ ವಿಸ್ತರಣೆಗೂ ಎಚ್​ಬಿಎ ನಿಯಮದ ಅಡಿಯಲ್ಲಿ ಮುಂಗಡ ಪಡೆಯಬಹುದಾಗಿದ್ದು, ನೌಕರರ 34 ತಿಂಗಳ ಮೂಲ ವೇತನ ಅಥವಾ 10 ಲಕ್ಷ ರೂ. ವರೆಗೆ ಮುಂಗಡ ಪಡೆಯಲು ಅವಕಾಶವಿದೆ.

Leave A Reply

Your email address will not be published.