ಮಟನ್‌ ಸೂಪ್‌ ನಿಂದಾಗಿ ಕೊಲೆಯಾದ ವೇಟರ್‌ | ಅಷ್ಟಕ್ಕೂ ಮಟನ್‌ ಸೂಪ್‌ ನಲ್ಲೇನಿತ್ತು?

ಮಟನ್ ಸೂಪ್ ನಿಂದ ವೇಟರ್ ನನ್ನು ಕೊಲೆ ಮಾಡಲಾಗಿದೆ ಎಂದರೆ ಆಶ್ಚರ್ಯವೆನಿಸುತ್ತದೆ ಅಲ್ವಾ! ಹಾಗಾದರೆ ನಿಜವಾಗಿಯೂ ನಡೆದಿದ್ದಾದರೂ ಏನು ಎಂದು ನೋಡೋಣ. ಇನ್ನೂ ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿರುವುದಾಗಿದೆ.

 

ಮಹಾರಾಷ್ಟ್ರದ ಪುಣೆಯ ಪಿಂಪಲ್ ಸೌದಾಗರ್ ಪ್ರದೇಶದ ಹೋಟೆಲ್‍ವೊಂದರಲ್ಲಿ ಈ ಘಟನೆ ನಡೆದಿದೆ. ಮಂಗೇಶ್ ಪೋಸ್ತೆ (19) ಎಂಬಾತ ಈ ಹೋಟೆಲ್ ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಆ ಹೊಟೆಲ್‍ಗೆ ತಡರಾತ್ರಿ ಕುಡಿತದ ಅಮಲಿನಲ್ಲಿ ಬಂದ ಇಬ್ಬರು ಗ್ರಾಹಕರು ಮಟನ್ ಸೂಪ್ ಬೇಕೆಂದು ಆರ್ಡರ್ ಮಾಡಿದ್ದಾರೆ. ಆಗ ಮಟನ್ ಸೂಪ್‍ನ್ನು ಮಂಗೇಶ್ ಆ ಇಬ್ಬರು ಗ್ರಾಹಕರಿಗೆ ಸರ್ವ್ ಮಾಡಿದ್ದಾರೆ. ಈ ವೇಳೆ ಗ್ರಾಹಕರು ಮಟನ್ ಸೂಪ್‍ನಲ್ಲಿ ಅಕ್ಕಿ ಇರುವುದನ್ನು ಗಮನಿಸಿದ್ದಾರೆ.

ಇದರಿಂದ ಕೋಪಗೊಂಡ ಆ ಇಬ್ಬರು ಗ್ರಾಹಕರು ಹೋಟೆಲ್‍ನಲ್ಲಿ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲ ಎಂದು ಮಂಗೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಮಂಗೇಶ್‍ಗೆ ತಲೆಗೆ ಅತಿಯಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಅಲ್ಲಿಗೆ ಬಿಡಿಸಲು ಬಂದ ಮತ್ತಿಬ್ಬರು ವೇಟರ್‌ಗಳ ಮೇಲೂ ಅವರು ಹಲ್ಲೆ ನಡೆಸಿದ್ದು, ಅವರಿಬ್ಬರಿಗೂ ಗಂಭೀರ ಗಾಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೇ ಆರೋಪಿಗಳಲ್ಲಿ ಒಬ್ಬನನ್ನು ವಿಜಯ್ ವಾಘಿರೆ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿಯ ಹೆಸರು ಇನ್ನೂ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Leave A Reply

Your email address will not be published.