ಭಿಕ್ಷೆ ಬೇಡುವಂತೆ ನಟಿಸಿ ಟಿಡಿಪಿ ನಾಯಕನ ಮೇಲೆ ಹಲ್ಲೆ!

ಮಾರುವೇಷಧಾರಿಯಾಗಿ ಬಂದು ನಾಯಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣವೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ತುಲಿಯಲ್ಲಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಪೊಲ್ನಾಟಿ ಶೇಷಗಿರಿ ರಾವ್ ಅವರ ಮನೆಗೆ ಸ್ವಾಮೀಜಿ ವೇಷದಲ್ಲಿ ಬಂದು ಭಿಕ್ಷೆ ಬೇಡುವಂತೆ ನಟಿಸಿ, ರಾವ್ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾನೆ.

 

ಘಟನೆಯ ದೃಶ್ಯಾವಳಿಯು ರಾವ್ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ದಾಳಿಕೋರನು ದಾರ್ಶನಿಕರ ವೇಷ ಧರಿಸಿರುವುದನ್ನು ಕಾಣಬಹುದು. ಆತನಿಗೆ ರಾವ್ ತನ್ನ ಮನೆಯ ಪ್ರವೇಶದ್ವಾರದಲ್ಲಿ ಕೆಲವು ಧಾನ್ಯಗಳನ್ನು ನೀಡುತ್ತಿದ್ದಾಗ, ಕುಡುಗೋಲಿನಿಂದ ಹಲ್ಲೆ ನಡೆಸಿ ಕಿಡಿಗೇಡಿಯು ಅಲ್ಲಿಂದ ಎಸ್ಕೆಪ್ ಆಗುವುದನ್ನು ನೋಡಬಹುದು.

ಘಟನೆಯ ವೇಳೆ ರಾವ್ ಅವರ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದೂ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ವ್ಯಕ್ತಿಯು ಮೋಟಾರು ಬೈಕ್‌ನಲ್ಲಿ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟಕ್ಕೂ ರಾವ್ ನ ಮೇಲೆ ದಾಳಿ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ ವಿಚಾರಣೆಯಲ್ಲಿ ಉತ್ತರ ಸಿಗಬೇಕಿದೆ.

Leave A Reply

Your email address will not be published.