Tulsi : ತುಳಸಿ ಸೇವನೆ ಹೆಚ್ಚಾದರೆ ಈ ಹಾನಿ ಉಂಟಾಗಬಹುದು!
ತುಳಸಿ ಇಲ್ಲದೇ ಹಿಂದೂ ಸಂಪ್ರದಾಯದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಹೌದು ತುಳಸಿ ಅಂದರೆ ತನ್ನದೇ ಆದ ಸ್ಥಾನ ಮಾನ ಹೊಂದಿದೆ. ಅಲ್ಲದೆ ಆರೋಗ್ಯಕ್ಕೂ ರಾಮಬಾಣ ಆಗಿದೆ ಮತ್ತು ಕೆಲವೊಂದು ಬಾರಿ ಬಾಯಿಯ ದುರ್ವಾಸನೆ ಕೂಡ ಕಡಿಮೆ ಮಾಡುತ್ತದೆ.ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅಂದರೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ ಆಯುರ್ವೇದದ ಪ್ರಮುಖ ಗಿಡಮೂಲಿಕೆಯಾದ ತುಳಸಿ ಯನ್ನು ಪರಿಚಯಿಸಿಕೊಳ್ಳಲೇ ಬೇಕು.
ತುಳಸಿಯನ್ನು ಹೆಚ್ಚಾಗಿ ಔಷಧಿಯಾಗಿ ಬಳಸಲಾಗುತ್ತದೆ. ಇದರಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ರಾಮ ತುಳಸಿ ಮತ್ತು ಕೃಷ್ಣ ತುಳಸಿ ಅತ್ಯಂತ ಸಾಮಾನ್ಯವಾಗಿದೆ.
ತುಳಸಿಯ ಪ್ರಯೋಜನಗಳನ್ನು ನಿಮ್ಮ ಪೂರ್ವಜನರಿಂದಲೂ ನೀವು ಕೇಳಿರಬಹುದು, ಇದರ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿರುವ ಕಾರಣ, ಇದರ ಸೇವನೆಯು ಹಾನಿಕಾರಕವಾದಾಗ, ಜನರಿಗೆ ಅದರ ಅರಿವಿರುವುದಿಲ್ಲ. ಆದ್ದರಿಂದ ತುಳಸಿ ಸೇವನೆ ಬಗ್ಗೆ ಎಚ್ಚರವಿರಲಿ ಪ್ರಯೋಜನದ ಬದಲು ಹಾನಿ ಉಂಟಾಗಬಹುದು.
ಆದರೂ ತುಳಸಿ ತುಂಬಾ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ ಹಳ್ಳಿಗಳಲ್ಲಿ ಕಫವಿರಲಿ, ಶೀತವಿರಲಿ, ಕೆಮ್ಮಿರಲಿ ತುಳಸಿಯನ್ನು ಬಳಸಿ ಹಲವು ವಿಧವಾದ ಔಷಧವನ್ನು ತಯಾರಿಸುತ್ತಾರೆ.
ತುಳಸಿ ಸೇವನೆಯ ಉಪಯೋಗ :
• ಗರ್ಭಾವಸ್ಥೆಯಲ್ಲಿ ತುಳಸಿಯನ್ನು ಸೇವಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅನೇಕ ಸಂಶೋಧನಾ ವರದಿಗಳಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ನೀಡಲಾಗಿದೆ. ತುಳಸಿಯಲ್ಲಿ ಫಲವತ್ತತೆ ನಿರೋಧಕ ಗುಣಗಳಿವೆ, ಆದ್ದರಿಂದ ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದು. ಅತಿಯಾದರೆ ಅಮೃತವು ವಿಷ.
• ತುಳಸಿ ತಿನ್ನುವುದರಿಂದ ಕೆಲವು ಅನನುಕೂಲತೆಗಳಿವೆ. ವೈದ್ಯರ ಪ್ರಕಾರ, ಆಂಟಿಫೆರ್ಟಿಲಿಟಿ ಗುಣಲಕ್ಷಣಗಳು ತುಳಸಿ ಎಲೆಗಳಲ್ಲಿ ಕಂಡುಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೆಚ್ಚು ತುಳಸಿ ತಿಂದರೆ, ನಿಮ್ಮ ವೀರ್ಯದ ಸಂಖ್ಯೆ ಕಡಿಮೆಯಾಗಬಹುದು.
• ತುಳಸಿ ಎಲೆಗಳು ಪಾದರಸ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ. ಅದೇ ಸಮಯದಲ್ಲಿ, ಅದರಲ್ಲಿ ಆರ್ಸೆನಿಕ್ ಕೂಡ ಇರುತ್ತದೆ. ನೀವು ಅದನ್ನು ಹೆಚ್ಚು ಅಗಿಯುತ್ತಿದ್ದರೆ, ನಿಮ್ಮ ಹಲ್ಲುಗಳು ಹಾನಿಗೊಳಗಾಗಬಹುದು. ಆದ್ದರಿಂದ ವೈದ್ಯರ ಸಲಹೆಗಳಿಲ್ಲದೆ ಅತಿಯಾಗಿ ಸೇವಿಸಬೇಡಿ.
• ತುಳಸಿಯು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಗುಣಗಳನ್ನು ಹೊಂದಿದೆ. ತುಳಸಿಯನ್ನು ಅತಿಯಾಗಿ ಸೇವಿಸುವುದರಿಂದ ರಕ್ತ ತೆಳುವಾಗುವ ಅಪಾಯವೂ ಇದೆ.
ಅದಲ್ಲದೆ ತುಳಸಿಯನ್ನು ಪೂಜೆ ವಿಧಿ ವಿಧಾನ ಮತ್ತು ಕೆಲವೊಂದು ಸಂಪ್ರದಾಯಗಳಲ್ಲಿ ಬಳಸಲಾಗುತ್ತದೆ.