ಪ್ರೇಯಸಿಯನ್ನೇ 35 ಪೀಸ್ ಮಾಡಿ ಭೀಕರ ಹತ್ಯೆ ಮಾಡಿದ ಪ್ರಕರಣ | ಭಯಾನಕ ಸತ್ಯ ಬಾಯ್ಬಿಟ್ಟ ಕಿರಾತಕ!

ಪ್ರಿಯಕರ ಅಫ್ತಾಬ್‍ನಿಂದಲೇ ನಡೆದ ಶ್ರದ್ಧಾಳ ಭೀಕರ ಹತ್ಯೆ ಪ್ರಕರಣವು ದಿನೇ ದಿನೇ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಅಫ್ತಾಬ್ ಶ್ರದ್ಧಾಳ ಹತ್ಯೆ ಮಾಡಿದ್ದು ಹೇಗೆ ಎಂಬುದರ ಬಗ್ಗೆ ಆಶ್ಚರ್ಯಕರ ಮಾಹಿತಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಹತ್ಯೆಯ ಕಥನವನ್ನು ಎಳೆ ಎಳೆಯಾಗಿ ಕಿರಾತಕ ಬಿಚ್ಚಿಟ್ಟಿದ್ದು, ಅಫ್ತಾಬ್ ಹೇಳಿದ ಈ ಕಥೆ ಕೇಳಿ ಪೊಲೀಸರೇ ಒಂದು ಬಾರಿ ದಂಗಾಗಿ ಹೋಗಿದ್ದಾರೆ. ಹಾಗಾದರೆ ಅವನು ಪೋಲಿಸರ ಮುಂದೆ ಬಿಚ್ಚಿಟ್ಟ ಅಂತಹ ಭಯಾನಕ ವಿಷಯ ಏನಿರಬಹುದು?

 

ಅಫ್ತಾಬ್‍ ನ ಹೇಳಿಕೆ, ನಾನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಮೂಲದವ. ಡೇಟಿಂಗ್ ಆ್ಯಪ್‍ ನಲ್ಲಿ ಶ್ರದ್ಧಾಳ ಪರಿಚಯವಾಗಿತ್ತು. ನಂತರ ಮುಂಬೈನ ಕಾಲ್ ಸೆಂಟರ್‍ನಲ್ಲಿ ಇಬ್ಬರು ಒಟ್ಟಿಗೆ ಕೆಲಸಕ್ಕೆ ಸೇರಿದೆವು. ಕೆಲವು ಸಮಯದ ನಂತರ ನಮ್ಮ ಆತ್ಮೀಯತೆ ಹೆಚ್ಚಿ ಪ್ರೀತಿಗೆ ತಿರುಗಿತು. 2019ರಲ್ಲಿ ಕೆಲಸ ಆರಂಭಿಸಿದ ನಮಗೆ ಎಲ್ಲವೂ ಸರಿಯಾಗಿತ್ತು. ನಮ್ಮ ಮದುವೆಯ ಬಗ್ಗೆ ಶ್ರದ್ಧಾ ಅವಳ ಮನೆಯಲ್ಲಿ ಪ್ರಸ್ತಾಪಿಸಿದಳು. ಆದರೆ ಅವಳ ಮನೆಯಲ್ಲಿ ಒಪ್ಪಿಗೆ ನೀಡದೆ, ವಿರೋಧ ವ್ಯಕ್ತವಾಯಿತು. ವಿರೋಧದ ಬಳಿಕ ನಾವು ಮುಂಬೈನ ನೈಗಾಂವ್‍ನಲ್ಲಿ ವಾಸಿಸಲು ಪ್ರಾರಂಭಿಸಿದೆವು.

ಆದರೆ ಕೆಲವು ದಿನಗಳು ಕಳೆದ ನಂತರ ಅಲ್ಲಿಂದ ದೆಹಲಿಗೆ ಶಿಫ್ಟ್ ಆದೆವು. ನಂತರ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಮತ್ತೆ ದೆಹಲಿಗೆ ಮರಳಿದೆವು. ದೆಹಲಿಯ ಪಹರ್‍ಗಂಜ್‍ನ ಹೋಟೆಲ್‍ನಲ್ಲಿ ಒಂದು ದಿನ ಉಳಿದುಕೊಂಡೆವು. ನಂತರ ದಕ್ಷಿಣ ದೆಹಲಿಯ ಸೈದುಲಾಜಾಬ್‍ನಲ್ಲಿರುವ ಹಾಸ್ಟೆಲ್‍ನಲ್ಲಿ ತಂಗಿದ್ದೆವು.

ಕೊನೆಗೆ ಮೇ 15ರಂದು ಮೆಹ್ರೋಲಿಯ ಛತ್ತರಪುರ ಪಹಾಡಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಒಟ್ಟಿಗೆ ವಾಸಿಸುತ್ತಿದ್ದೆವು. ಆದರೆ ಮೇ 18ರಂದು ಮದುವೆಯ ವಿಚಾರಕ್ಕೆ ಜಗಳ ಶುರುವಾಯಿತು. ಜಗಳ ಮಿತಿಮೀರಿ, ನಾನು ಅವಳ ಬಾಯಿ ಮುಚ್ಚುವ ಪ್ರಯತ್ನ ಮಾಡಿದೆ. ನಂತರ ಶ್ರದ್ಧಾಳ ಕತ್ತು ಹಿಸುಕಿದೆ ಕೂಡಲೇ ಅವಳು ಸಾವನ್ನಪ್ಪಿದಳು.

ಆಕೆಯನ್ನು ಕೊಲೆಮಾಡಿ ಆಯಿತು, ಇನ್ನೂ ಮೇ 19ರಂದು ಆಕೆಯ ದೇಹದ ವಿಲೇವಾರಿಯ ಬಗ್ಗೆ ಚಿಂತಿಸಿದೆ. ತುಂಬಾ ಯೋಚಿಸಿದ ನಂತರ ಮಾರ್ಕೆಟ್‍ನಿಂದ 23,500 ರೂಪಾಯಿ ನೀಡಿ ಫ್ರಿಡ್ಜ್ ಒಂದನ್ನು ಖರೀದಿಸಿದೆ. ಅದರ ಜೊತೆಗೆ ಸಣ್ಣ ಹರಿತವಾದ ಗರಗಸವನ್ನೂ ಖರೀದಿಸಿದೆ. ಕೊನೆಗೆ ಮೇ 20ರಂದು ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿಸಿಟ್ಟೆ. ಪ್ರತಿದಿನ ರಾತ್ರಿ ಒಂದು ಗಂಟೆಯ ನಂತರ ಆ ತುಂಡುಗಳ ಕವರ್ ಗಳನ್ನು ಕಾಡಿನ ಮಧ್ಯಕ್ಕೆ ಹೋಗಿ ಎಸೆದು ಬರ್ತಿದ್ದೆ.

ಯಾರಿಗೂ ಸಂಶಯ ಬರಬಾರದೆಂದು ಅದೇ ಏರಿಯಾದಲ್ಲಿ ಓಡಾಡುತ್ತಿದ್ದೆ. ರಾತ್ರಿಯ ಸಮಯದಲ್ಲಿ ಹೆಚ್ಚು ಸದ್ದು ಆಗಬಾರದೆಂದು ನೀರಿನ ಮೋಟರ್ ಆನ್ ಮಾಡುತ್ತಿದ್ದೆ. ಅದರ ವಾಸನೆ ತಡೆಯಲು ಅಗರಬತ್ತಿಯನ್ನು ಬಳಸುತ್ತಿದ್ದೆ. ಕೊಲೆ ಮಾಡಿದ ನಂತರ ದೇಹ ವೀಲೆವಾರಿ ಮಾಡಲು ಟೆಲಿವಿಷನ್ ಅಪರಾಧ ಸರಣಿ ‘ಡೆಕ್ಸ್ಟರ್’ ನೆರವಾಯಿತು. ಹಾಗಾಗಿ ಗೂಗಲ್‍ನಿಂದಲೂ ನಾನು ಮಾಹಿತಿ ಕಲೆ ಹಾಕಿ ಈ ಕೆಲಸ ಮಾಡಿ ಮುಗಿಸಿದೆ ಎಂದು ಭಯಾನಕವಾದ ಮಾಹಿತಿಯನ್ನು ತಿಳಿಸಿದ್ದಾನೆ.

Leave A Reply

Your email address will not be published.