7 ವರ್ಷದ ಮಗುವನ್ನು ಬಿಟ್ಟು ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿಯಾದ ಹಿಂದೂ ವಿವಾಹಿತ ಮಹಿಳೆ!
ದಿನಂಪ್ರತಿ ಲವ್ ಜಿಹಾದ್ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದ್ದು, ಪ್ರೀತಿ ಕುರುಡು…ಎಂಬ ಮಾತಿನಂತೆ ಮದುವೆಯಾಗಿ ಪುಟ್ಟ ಕಂದಮ್ಮ ಇದ್ದರೂ ಕೂಡ ಹಿಂದು ಶಿಕ್ಷಕಿಯೊಬ್ಬರು ಮುಸ್ಲಿಂ ಸಮುದಾಯದ ಯುವಕನೊಂದಿಗೆ ಓಡಿ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಯಚೂರಿನಲ್ಲಿ ವಿವಾಹಿತ ಶಿಕ್ಷಕಿಯೊಬ್ಬರು ೭ ವರ್ಷದ ಮಗುವನ್ನೂ ತೊರೆದು ನಾಪತ್ತೆಯಾಗಿದ್ದು, ಇದರ ಹಿಂದೆ ಲವ್ ಜಿಹಾದ್ ನಡೆದಿದೆ ಎಂದು ಶಿಕ್ಷಕಿಯ ತಾಯಿ ಅಲ್ಲದೆ, ಕುಟುಂಬಸ್ಥರು ಆರೋಪಿಸಿದ್ದಾರೆ.
10 ವರ್ಷಗಳ ಹಿಂದೆ ಲಿಂಗರಾಜ ಎಂಬವರ ಜೊತೆ ಸುಹಾಸಿನಿಯ ಮದುವೆಯಾಗಿದ್ದು, ಈಕೆ ಯರಮರಸ್ ಬಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ.
ಸುಹಾಸಿನಿಗೆ 7 ವರ್ಷದ ಮಗುವಿದ್ದು, ಆ ಮಗುವನ್ನು ಬಿಟ್ಟು ಓಡಿ ಹೋಗಿರುವ ದುರಂತಮಯ ಪ್ರೇಮ ಪ್ರಕರಣ ಮುನ್ನಲೆಗೆ ಬಂದಿದೆ.
ಲವ್ ಜಿಹಾದ್ ಆರೋಪ ಹೊತ್ತಿರುವ ಸಲೀಂ, ರಾಯಚೂರು ನಗರದ ಹೊರವಲಯದ ಪೊತಗಲ್ ಗ್ರಾಮದ ನಿವಾಸಿಯಾಗಿದ್ದು, ಈತ ಗಂಜ್‌ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ. ಸಲೀಂಗೆ ಮದುವೆಯಾಗಿ ಒಂದು ಹೆಣ್ಣು ಮಗು ಕೂಡ ಇದ್ದರು ಸಹಿತ ಈತ ಶಿಕ್ಷಕಿ ಸುಹಾಸಿನಿ ಹಿಂದೆ ಪ್ರೇಮದ ಬಲೆಯಲ್ಲಿ ಹಿಂದೆಬಿದ್ದಿದ್ದ ಎನ್ನಲಾಗಿದೆ.
ಯರಮರಸ್ ಕ್ಯಾಂಪ್ ನಿವಾಸಿ ಶಿಕ್ಷಕಿ ಸುಹಾಸಿನಿ (29) ಅ.20ರಂದು ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ನಾಪತ್ತೆಯಾಗಿದ್ದು, ಸಲೀಂ ಎಂಬ ಮುಸ್ಲಿಂ ಯುವಕನ ಜೊತೆ ಈಕೆ ಹೋಗಿರಬಹುದೆಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಸುಹಾಸಿನಿ ತಾಯಿ ನಿರ್ಮಲಾರವರು ಈ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
ತಾನು ಸುಹಾಸಿನಿಯ ಕ್ಲಾಸ್‌ಮೇಟ್ ಎಂಬ ಕಾರಣವನ್ನು ಮುಂದಿಟ್ಟುಕೊಂಡು, ಸಲೀಂ ಸರಾಗವಾಗಿ ಮನೆಗೆ ಬರುತ್ತಿದ್ದ ಎನ್ನಲಾಗಿದ್ದು, ಯಾರೂ ಇಲ್ಲದ ವೇಳೆಯಲ್ಲಿ ಮನೆಗೆ ಬಂದು ಸರಸವಾಡುತ್ತಿದ್ದ ಎನ್ನಲಾಗಿದ್ದು, ಮದುವೆ ಆಗಿ ಮಕ್ಕಳಿದ್ದರೂ ಶಿಕ್ಷಕಿ ಸುಹಾಸಿನಿ ಜೊತೆ ಸಲೀಂ ಸಂಪರ್ಕ ಹೊಂದಿದ್ದಾನೆ. ಒಂದು ತಿಂಗಳ ಹಿಂದೆಯಷ್ಟೇ ಶಿಕ್ಷಕಿ ಮನೆಯಲ್ಲಿ ಅರಿವಿಗೆ ಬರುತ್ತಿದ್ದಂತೆ ಹುಡುಗನೊಂದಿಗೆ ಪರಾರಿಯಾಗಿದ್ದಾನೆ ಎಂದು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುಹಾಸಿನಿ ಮಿಸ್ಸಿಂಗ್ ಬಗ್ಗೆ ತಾಯಿ ನಿರ್ಮಲಾ ಹೇಳಿರುವ ಹೇಳಿಕೆ ನೀಡಿದ್ದು, ಸಲೀಂ ತನಗೆ ಇಷ್ಟವೆಂದು ಮಗಳು ಸುಹಾಸಿನಿ ಹೇಳಿದ್ದು, ಜೊತೆಗೆ ಅವನನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾಳೆ. ಆದರೆ,ಪೋಷಕರು ಇದನ್ನು ಒಪ್ಪದೇ ಬುದ್ಧಿವಾದ ಹೇಳಿದ್ದು, ಮದುವೆಯಾಗಿ ಮಗುವೂ ಇರುವಾಗ ಇದು ಬೇಡವೆಂದು ತಾಯಿ ಹೇಳಿದ್ದಾರೆ. ಈ ನಡುವೆ ಸಲೀಂ ಕಾಲ್ ಮಾಡಿ, ನಾವಿಬ್ಬರೂ ಮದುವೆಯಾಗುತ್ತೇವೆ ಎಂದು ಕೂಡ ಶಿಕ್ಷಕಿಯ ತಾಯಿಗೆ ಹೇಳಿದ್ದು, ಆಕೆಗೆ ಡೈವೋರ್ಸ್ ನೀಡದೆ ಹೇಗೆ ಮದುವೆ ಆಗಲು ಸಾಧ್ಯ ಎಂದು ನಿರ್ಮಲಾ ರವರು ಪ್ರಶ್ನಿಸಿದ್ದಾರೆ.
ಈ ಘಟನೆಯ ಬಳಿಕ, ಅ.20ರಂದು ಮನೆಯಲ್ಲಿ ಜಗಳ ಮಾಡಿ ಮನೆಬಿಟ್ಟು ಶಿಕ್ಷಕಿ ಓಡಿ ಹೋಗಿದ್ದಾರೆ. ಇದರ ಜೊತೆಗೆ ತನ್ನ ಸಂಬಂಧಿಕರಿಗೆ ಕರೆ ಮಾಡಿ ತಾವು ಮದುವೆ ಆಗಿದ್ದೇವೆಂದು ಸುಹಾಸಿನಿ ಹೇಳಿಕೊಂಡಿದ್ದಾಳೆ.
ಇಷ್ಟೇ ಅಲ್ಲದೆ, ಮಗಳು ಓಡಿ ಹೋಗಿರುವ ಸಲೀಂ ಮನೆಯಲ್ಲಿ 58 ವರ್ಷ ಒಬ್ಬಳು ಹೆಣ್ಣು ಮಗಳು, ಸಲೀಂ ಹೊರತುಪಡಿಸಿ ಇನ್ನೊಬ್ಬ ವ್ಯಕ್ತಿ ಸಹ ಇದ್ದಾರೆ ಎಂದು ತಾಯಿ ನಿರ್ಮಲಾ ದೂರಿದ್ದಾರೆ. ಈ ಪ್ರಕರಣದ ಕುರಿತಾಗಿ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಹ ನಿರ್ಮಲಾ ರವರು ದೂರಿದ್ದಾರೆ.