Crime : ಯುವತಿಯ ಕತ್ತು ಸೀಳಿ ಶವದೊಂದಿಗೆ ವೀಡಿಯೋ | ಬೆಚ್ಚಿಬೀಳಿಸೋ ವೀಡಿಯೊ ವೈರಲ್!

ದೇಶವೇ ಬೆಚ್ಚಿ ಬೀಳಿಸುವ ರೀತಿ ದೇಶದ ರಾಜಧಾನಿಯ ಕೊಲೆಯ ವಿಕೃತ ಮುನ್ನಲೆಗೆ ಬಂದ ಬೆನ್ನಲ್ಲೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ದಿನಂಪ್ರತಿ ಲವ್ ಹೆಸರಿನಲ್ಲಿ ಕೊಲೆ ಮಾಡುವುದನ್ನು ಟ್ರೆಂಡ್ ರೀತಿ ಮಾಡಿಕೊಂಡಿರುವ ದುಷ್ಕರ್ಮಿಗಳ ಅಟ್ಟಹಾಸ ಜೋರಾಗಿ ನಡೆಯುತ್ತಿದ್ದು, ಆರೋಪಿಗಳ ಹೆಡೆಮುರಿ ಕಟ್ಟಿ ಭೀಕರ ಶಿಕ್ಷೆ ಕೊಟ್ಟಾಗ ಮಾತ್ರ ಇಂತಹ ಪ್ರಕರಣಗಳು ನಿಲ್ಲಬಹುದೆನೋ???

 


ರೆಸಾರ್ಟ್​ನಲ್ಲಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿರುವ ಜೊತೆಗೆ ವಿಚಿತ್ರ ಹಾಗೂ ತನ್ನ ಸಾಹಸದ ಕಾರ್ಯದ ಬಗ್ಗೆ ಹೆಮ್ಮೆ ಪಡೆಯುವ ರೀತಿ ಶವದೊಂದಿಗೆ ವಿಡಿಯೋ ಮಾಡಿರುವಂತಹ ರಾಕ್ಷಸ ಪ್ರವೃತ್ತಿ ಬಿಂಬಿಸುವ ಘಟನೆಯೊಂದು ವರದಿಯಾಗಿದೆ.

ಮಧ್ಯಪ್ರದೇಶದಲ್ಲಿ (Madhya Pradesh) ವ್ಯಕ್ತಿಯೊಬ್ಬ ಯುವತಿಯ ಕುತ್ತಿಗೆ ಸೀಳಿ ಕೊಂದು, ಆಕೆಯ ಮೃತದೇಹದ ಜೊತೆಗೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದು ಅಲ್ಲದೆ, ಆ ವಿಡಿಯೋವನ್ನು ತಾನೇ ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್​ಲೋಡ್ ಕೂಡ ಮಾಡಿರುವ ಘಟನೆ ನಡೆದಿದೆ.


ಹೌದು!!!.ಈ ಘಟನೆ ನಡೆದು 1 ವಾರ ಕಳೆದಿದ್ದರೂ ಶಿಲ್ಪಾ ಝರಿಯಾ ಎಂಬ 25 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ವಿಡಿಯೋ ಅಪ್​ಲೋಡ್ ಮಾಡಿರುವ ಅಭಿಜಿತ್ ಪಾಟಿದಾರ್‌ ಎಂಬ ಆರೋಪಿಗಾಗಿ ಖಾಕಿ ಪಡೆ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಯಾರೂ ನಂಬಿಕೆಗೆ ದ್ರೋಹ ಮಾಡಬೇಡಿ ಎಂದು ಆ ವ್ಯಕ್ತಿ ಆಕ್ರೋಶದಿಂದ ಆ ಹೆಣದೊಂದಿಗೆ ವಿಡಿಯೋ ಶೂಟ್ ಮಾಡಿದ್ದು, ನಿಮ್ಮ ಮೇಲಿಟ್ಟ ನಂಬಿಕೆಗೆ ಮೋಸ ಮಾಡಬೇಡಿ ಎಂದು ಹೇಳುವ ಆ ಯುವಕ ಹಾಸಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ಶವವನ್ನು ತೋರಿಸಿದ್ದು, ಆಕೆಯ ಕುತ್ತಿಗೆ ಸೀಳಿ ಕೊಂದಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಪಾಟ್ನಾದ ವ್ಯಾಪಾರಿಯಾಗಿರುವ ಅಭಿಜಿತ್​ನ ಗೆಳೆಯ ಜಿತೇಂದ್ರ ಆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಆಕೆ ಜಿತೇಂದ್ರ ಅವರಿಂದ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್‌ಪುರಕ್ಕೆ ಪರಾರಿಯಾಗಿದ್ದಾಳೆ . ಹೀಗಾಗಿ, ಜಿತೇಂದ್ರನ ಸೂಚನೆಯ ಅನ್ವಯ ಆ ಯುವತಿಯನ್ನು ಅಭಿಜಿತ್ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಈ ಪ್ರಕರಣದ ಕುರಿತಾಗಿ ಪೊಲೀಸ್ ಸೈಬರ್ ಸೆಲ್ ಜೊತೆಗೆ 4 ವಿಶೇಷ ತಂಡಗಳು ಆರೋಪಿಗಳಿಗಾಗಿ ಪೋಲಿಸ್ ಪಡೆ ಕಾರ್ಯಾಚರಣೆ ನಡೆಸುತ್ತಿದ್ದು, ಜಬಲ್‌ಪುರದ ಮೇಖ್ಲಾ ರೆಸಾರ್ಟ್‌ನಲ್ಲಿರುವ ಕೊಠಡಿಯಿಂದ ಆ ಯುವತಿಯ ಶವವನ್ನು ವಶಪಡಿಸಿಕೊಳ್ಳಲಾಗಿದೆ.

Leave A Reply

Your email address will not be published.