ಈ ಶಾಲೆಯ ಮಕ್ಕಳು ಏಕಕಾಲದಲ್ಲಿ ಎರಡೂ ಕೈಯಲ್ಲಿ ಬರೀತಾರೆ!

ಮನಸಿದ್ದರೆ ಮಾರ್ಗ ಎಂಬ ಮಾತಿನಂತೆ ಯಾವುದೇ ಸಾಧನೆ ಮಾಡಲು ಮನಸ್ಸು ಮತ್ತು ಪ್ರಯತ್ನ ಇರಬೇಕು. ಒಂದು ಮಗುವಿಗೆ ನಾವು ಯಾವ ರೀತಿ ಮಾರ್ಗದರ್ಶನ ನೀಡುತ್ತೇವೆ ಅದೇ ರೀತಿ ಮಗು ವಿಷಯವನ್ನು ಮನದಟ್ಟು ಮಾಡಿಕೊಳ್ಳುತ್ತದೆ.

 

ಹಾಗೇಯೇ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿರುವ ಶಾಲೆಯೊಂದರಲ್ಲಿ 100 ವಿದ್ಯಾರ್ಥಿಗಳು ಎರಡೂ ಕೈಗಳಲ್ಲಿಯೂ ಏಕಕಾಲದಲ್ಲಿಯೇ ಬರೆಯುವ ಪ್ರಾವೀಣ್ಯತೆ ಹೊಂದಿದ್ದಾರೆ. ಈ ಬಗ್ಗೆ ವೀಡಿಯೋ ಸಹ ವೈರಲ್ ಆಗಿದೆ.

ಸಿಂಗ್ರೌಲಿಯ ಬುಧೇಲಾ ಗ್ರಾಮದಲ್ಲಿರುವ ವೀಣಾ ವಾದಿನಿ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ವಿರಂಗದ್ ಶರ್ಮಾ ಪ್ರಕಾರ ವಿದ್ಯಾರ್ಥಿಗಳ ಈ ಕೌಶಲ್ಯದ ಹಿಂದೆ ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರೇ ಸ್ಫೂರ್ತಿಯಾಗಿದ್ದಾರೆ. ರಾಜೇಂದ್ರ ಪ್ರಸಾದ್ ದ್ವಂದ್ವಾರ್ಥಿ, ಎರಡೂ ಕೈ ಬಳಸಿ ಬರೆಯಬಲ್ಲರು. ನಾವು ಅದನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದೇವೆ ಮತ್ತು ನಮ್ಮ ಮಕ್ಕಳಿಗೆ ಅದೇ ರೀತಿಯ ಕೌಶಲ್ಯವನ್ನು ಕಲಿಯಲು ಸಹಾಯ ಮಾಡಿದೆವು ಎಂದು ತಿಳಿಸಿದ್ದಾರೆ.
ಜೊತೆಗೆ ಅವರೆಲ್ಲರೂ ಐದು ಭಾಷೆಗಳಲ್ಲಿಯೂ ಪಾರಂಗತರಾಗಿದ್ದಾರೆ. ಹಿಂದಿ, ಸಂಸ್ಕೃತ, ಇಂಗ್ಲಿಷ್, ಉರ್ದು ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮತ್ತು 1999ರಲ್ಲಿ ವೀಣಾ ವಾದಿನಿ ಪಬ್ಲಿಕ್ ಸ್ಕೂಲ್ ಸ್ಥಾಪಿಸಲಾಯಿತು. ಇಲ್ಲಿಯವರೆಗೆ ಸುಮಾರು 480 ವಿದ್ಯಾರ್ಥಿಗಳು ಇಲ್ಲಿಂದ ಪದವಿ ಪಡೆದಿದ್ದಾರೆ ಮತ್ತು ಅವರೆಲ್ಲರೂ ಎರಡೂ ಕೈಗಳನ್ನು ಬಳಸಿ ಬರೆಯಬಲ್ಲರು. ಈ ಶಾಲೆಯಲ್ಲಿ ನಿಯಮಿತ ತರಗತಿಗಳ ಜೊತೆಗೆ, ವಿದ್ಯಾರ್ಥಿಗಳಿಗೆ ಒಂದು ಗಂಟೆ ಯೋಗ ಮತ್ತು ಧ್ಯಾನವನ್ನು ಸಹ ಕಲಿಸಲಾಗುತ್ತದೆ. ಈ ಶಾಲೆಯ ವಿದ್ಯಾರ್ಥಿಗಳು ಒಂದು ನಿಮಿಷದಲ್ಲಿ 250 ಪದಗಳ ಪಠ್ಯವನ್ನು ಭಾಷಾಂತರಿಸುವ ಸಾಮಾಥ್ರ್ಯ ಹೊಂದಿದ್ದಾರೆ ಎಂದು ಸಂಕ್ಷಿಪ್ತ ಮಾಹಿತಿಯನ್ನು ಪ್ರಾಂಶುಪಾಲರು ನೀಡಿದ್ದಾರೆ.

ಈ ಕುರಿತು ಸ್ಥಳೀಯ ಮನಃಶಾಸ್ತ್ರಜ್ಞ ಆಶಿಶ್ ಪಾಂಡೆ ಅವರು ಮಾತನಾಡಿ, ನಮ್ಮ ಮೆದುಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೆದುಳಿನ ಎರಡೂ ಭಾಗಗಳನ್ನು ಏಕಕಾಲದಲ್ಲಿ ಬಳಸುವಂತೆ ಮತ್ತು ಎರಡೂ ಕೈಗಳನ್ನು ಬಳಸಿ ಬರೆಯಲು ಸಾಧ್ಯವಾಗುವ ರೀತಿಯಲ್ಲಿ ತರಬೇತಿ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಈ ವಿಷಯದ ಮಾಧ್ಯಮದವರೊಂದಿಗೆ ಮಾತನಾಡನಾಡಿದ 8ನೇ ತರಗತಿ ವಿದ್ಯಾರ್ಥಿ ಪಂಕಜ್ ಯಾದವ್, ಮೊದಲು ಬಲಗೈ ಬಳಸಿ ಬರೆಯುತ್ತಿದ್ದೆ, ನಂತರ ಎಡಗೈಯಲ್ಲಿ ಬರೆಯಲು ಕಲಿತೆ. ಮೂರನೇ ತರಗತಿಯಲ್ಲಿ ಎರಡೂ ಕೈಗಳನ್ನು ಬಳಸಿ ಬರೆಯುವುದು ಗೊತ್ತಾಯಿತು ಎಂದು ತಿಳಿಸಿದರೆ, ಮತ್ತೋರ್ವ ವಿದ್ಯಾರ್ಥಿ ಆದರ್ಶ್ ಕುಮಾರ್ ನಾನು ಪ್ರಾಥಮಿಕ ತರಗತಿಯಲ್ಲಿದ್ದಾಗ ಬಲಗೈನಲ್ಲಿ ಬರೆಯುತ್ತಿದ್ದೆ. ನಂತರ ಎಡಗೈನಲ್ಲಿ ಬರೆಯಲು ಪ್ರಾರಂಭಿಸಿದೆ. ನಮಗೆ ಐದು ಭಾಷೆಗಳು ಕೂಡ ಗೊತ್ತು ಎಂದು ವಿದ್ಯಾರ್ಥಿಗಳು ತಮ್ಮ ಅನುಭವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವಿದ್ಯಾರ್ಥಿಗಳು ಎರಡೂ ಕೈಗಳಲ್ಲಿಯೂ ಏಕಕಾಲದಲ್ಲಿಯೇ ಬರೆಯುವ ಪ್ರಾವೀಣ್ಯತೆಯ ವೀಡಿಯೋ ನೋಡಿ ಹಲವಾರು ವೀಕ್ಷಕರು ಪ್ರಶಂಶಿದ್ದು. ಉತ್ತಮ ಪ್ರಯತ್ನ ಮತ್ತು ಸಾಧನೆ ಎಂದು ಕಾಮೆಂಟ್ ನೀಡಿದ್ದಾರೆ.

Leave A Reply

Your email address will not be published.