Kantara : ಕರಾವಳಿಗರೇ ಗಮನಿಸಿ | ತುಳು ಭಾಷೆಯಲ್ಲಿ ರಿಲೀಸ್ ಆಗಲಿದೆ ಕಾಂತಾರ!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ವಿಶ್ವದ ಎಲ್ಲೆಡೆ ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದೆ. ಅಷ್ಟೇ ಮಾತ್ರವಲ್ಲದೆ ವರ್ಲ್ಡ್ ವೈಡ್ ಕಲೆಕ್ಷನ್ 361 ಕೋಟಿ ರೂ. ಕಲೆಕ್ಷನ್ ಮಾಡಿ ರಿಷಬ್ ಶೆಟ್ಟಿ ಸಿನಿಮಾ ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದರೂ ಚಿತ್ರದ ಅಬ್ಬರ ಇನ್ನೂ ಕಡಿಮೆ ಆಗಿಲ್ಲ. ಈ ಸಿನಿಮಾ ಬಗ್ಗೆ ನಿತ್ಯ ಒಂದಲ್ಲೊಂದು ಸುದ್ದಿ ಹಬ್ಬುತ್ತಿದ್ದೂ, ಇದೀಗ ‘ಕಾಂತಾರ’ ಸಿನಿಮಾ ತುಳು ಭಾಷೆಯಲ್ಲಿ ಡಬ್ ಆಗಲಿದ್ದು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ ಎಂಬ ವಿಚಾರ ಹೊರಬಿದ್ದಿದೆ.

 

‘ಕಾಂತಾರ’ ಸಿನಿಮಾವು ಮುಖ್ಯವಾಗಿ ದೈವಾರಧನೆ ಭೂತಕೋಲಗಳ ಕಥಾಹಂದಾರ. ಈ ಸಿನಿಮಾವು ತುಳುನಾಡಿನ ಕಥೆಯಾಗಿದ್ದೂ , ತುಳುನಾಡಿಗೂ ಸಿನಿಮಾಗೂ ಸಂಬಂಧ ಇದೆ. ಹಾಗಾಗಿ ಈ ಚಿತ್ರವನ್ನು ತುಳುವಿನಲ್ಲೇ ರಿಲೀಸ್ ಮಾಡುವ ಪ್ಲ್ಯಾನ್​ನಲ್ಲಿ ಚಿತ್ರತಂಡ ಇದೆ. ಸೆನ್ಸಾರ್ ಬಳಿಕ ಸಿನಿಮಾವು ಡಿಸೆಂಬರ್ ಮೊದಲ ವಾರದಲ್ಲೇ ತುಳುವಿನಲ್ಲಿ ತೆರೆ ಕಾಣಲಿದೆ. ಈ ವಿಚಾರ ಕೇಳಿ ಕರಾವಳಿ ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಒಟಿಟಿ ವಿಚಾರದಲ್ಲಿ ‘ಕಾಂತಾರ’ ಸಿನಿಮಾ ಸುದ್ದಿಯಲ್ಲಿದ್ದೂ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಪ್ರಸಾರ ಕಾಣಲಿದೆ.ಥಿಯೇಟರ್​ನಲ್ಲಿ ಸಿನಿಮಾ ಇನ್ನೂ ಅಬ್ಬರಿಸುತ್ತಿರುವುದರಿಂದ ಒಟಿಟಿ ರಿಲೀಸ್ ದಿನಾಂಕ ವಿಳಂಬವಾಗುತ್ತಿದೆ ಎನ್ನಲಾಗಿದೆ.

Leave A Reply

Your email address will not be published.