ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ಶಿಕ್ಷಕ,ಸಿಬ್ಬಂದಿಗಳಿಗೆ ಗುಡ್ ನ್ಯೂಸ್!

ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ( Grant-in-aid educational institution ) ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದಿರುವಂತ ಶಿಕ್ಷಕ, ಸಿಬ್ಬಂದಿಗಳಿಗೆ ನಿವೃತ್ತಿಯ ನಂತರದ ಗಳಿಕೆ ರಜೆ ನಗಧೀಕರಣಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ( Education Department ) ಆದೇಶಿಸಿದೆ.

 

2020-21 ರಿಂದ 2021-22ನೇ ಸಾಲಿನವರೆಗೆ ನಿವೃತ್ತರಾದ ಅನುದಾನಿತ ಶಾಲಾ ಶಿಕ್ಷಕರುಗಳಿಗೆ ನಿವೃತ್ತಿಯ ನಂತರದ ಗಳಿಕೆ ರಜೆ ನಗಧೀಕರಣ ಸೌಲಭ್ಯಕ್ಕೆ ಸಂಬಂಧ ರೂ.95.99 ಕೋಟಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದಿದ್ದಾರೆ.

ಈ ಪ್ರಸ್ತಾವನೆಯ ಪೈಕಿ 2021-22ನೇ ಸಾಲಿನಲ್ಲಿ ರೂ.7.02 ಕೋಟಿಗಳನ್ನು ಹಾಗೂ 2022-23ನೇ ಸಾಲಿನಲ್ಲಿ ರೂ.42.72 ಕೋಟಿಗಳ್ನು ಸರ್ಕಾರದಿಂದ ಪ್ರಥಮ ಕಂತಾಗಿ ಬಿಡುಗಡೆ ಮಾಡಲಾಗಿರುತ್ತದೆ. ಈ ಮೊತ್ತವನ್ನು ಪ್ರತಿ ಜಿಲ್ಲೆಯ ಒಟ್ಟಾರೆ ಬೇಡಿಕೆಯ ಶೇ.50ರಷ್ಟು ಮೊತ್ತವನ್ನು ಎಲ್ಲಾ ತಾಲೂಕುಗಳಿಗೆ ಕೆ2 ತಂತ್ರಾಂಶದಡಿ ಬಿಡುಗಡೆ ಮಾಡಿ ಆಯಾ ಡಿಡಿಓಗಳಿಗೆ ಹಂಚಿಕೆ ಮಾಡಲಾಗಿರುತ್ತದೆ ಎಂದು ತಿಳಿಸಿದೆ.

ಪ್ರಸ್ತುತ ಬಿಡುಗಡೆ ಮಾಡಲಾದ ಅನುದಾನವನ್ನು ಸೂಚಿಸಲಾದ ನಿಯಮ ಹಾಗೂ ಮಾರ್ಗಸೂಚಿಗಳಂತೆ ವೆಚ್ಚ ಭರಿಸುವುದು. ಯಾವುದೇ ಕಾರಣಕ್ಕೂ ಜೇಷ್ಠತೆಯನ್ನು ಹೊರತುಪಡಿಸಿ ವೆಚ್ಚ ನಿರ್ವಹಿಸುವಂತಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.