LPG Subsidy : ಸಾರ್ವಜನಿಕರಿಗೆ ಸಿಹಿ ಸುದ್ದಿ | ಶೀಘ್ರವೇ ಖಾತೆಗೆ ಸಬ್ಸಿಡಿ ಜಮೆ!
ಎಲ್ ಪಿಜಿ ಅಡುಗೆ ಅನಿಲವು ಈಗಂತೂ ಜನರ ಅವಿಭಾಜ್ಯ ಅಂಗವಾಗಿದೆ ಅಂತ ಹೇಳಿದ್ರೂ ತಪ್ಪಾಗೊಲ್ಲ. ಒಂದು ಕಾಲದಲ್ಲಿ ಒಲೆಯಲ್ಲೇ ಅಡುಗೆ ಮಾಡುತ್ತಿದ್ದ ಜನರು, ಈಗಂತೂ ಪಟ್ಟಣ ಮಾತ್ರವಲ್ಲದೆ ಪ್ರತೀ ಹಳ್ಳಿ ಹಳ್ಳಿಗಳಲ್ಲೂ ಗ್ಯಾಸಲ್ಲೇ ಅಡುಗೆ ಮಾಡುವವರು ಹೆಚ್ಚು. ಇದೀಗ ಸರ್ಕಾರವು ಸಾರ್ವಜನಿಕರಿಗೆ ಸಿಹಿ ಸುದ್ದಿ ನೀಡಲು ಯೋಜಿಸಿದೆ. ಅದೇನಪ್ಪಾ ಅಂದ್ರೆ, ಸರ್ಕಾರವು ಕೊರೊನಾ ವೈರಸ್ ಸಮಯದಲ್ಲಿ ನೀಡಿದ ಸಬ್ಸಿಡಿಯನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ ತಿಂಗಳಿನಿಂದ 303 ರೂ.ಗಳ ಸಬ್ಸಿಡಿಯು ಮೊದಲಿನಂತೆ ನಿಮ್ಮ ಖಾತೆಗೆ ತಲುಪುತ್ತದೆ ಎಂದು ತಿಳಿಸಿದೆ.
ಹಣದುಬ್ಬರವು ಈಗ ಹೆಚ್ಚಾಗಿದ್ದೂ, ಬಡ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ದೇಶದ ಕೋಟ್ಯಾಂತರ ಜನರಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ದೇಶೀಯ ಅನಿಲದ ಬೆಲೆಯನ್ನು 300ರೂ.ಗಳಷ್ಟು ಕಡಿಮೆ ಮಾಡಿದೆ. ಇದರಿಂದ ಸಾಮಾನ್ಯ ಜನರಿಗೆ ನೇರ ಪರಿಹಾರ ಸಿಗುತ್ತದೆ. ಈಗಾಗಲೇ ಜಾರ್ಖಂಡ್, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎಲ್ಪಿಜಿ ಮೇಲಿನ ಸಬ್ಸಿಡಿಯನ್ನ ನೀಡಲಾಗುತ್ತಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಯೋಜನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ.
ಸರ್ಕಾರವು ಪೆಟ್ರೋಲಿಯಂ ಕಂಪನಿಯ ಡೀಲರ್ಗೆ 303 ರೂ.ಗಳ ಸಬ್ಸಿಡಿಯನ್ನು ನೀಡುತ್ತದೆ ಮತ್ತು ಅದೇ ರಿಯಾಯಿತಿ ಎಲ್ಪಿಜಿ ಸಿಲಿಂಡರ್ಗಳ ಮೇಲೂ ಲಭ್ಯವಿರುತ್ತದೆ. ಅಂದರೆ 900 ರೂ. ಬದಲು 587ರೂ. ಪಾವತಿಸಬೇಕಾಗುತ್ತದೆ. ಸರ್ಕಾರವು ದೇಶಾದ್ಯಂತ ಸಂಯೋಜಿತ ಸಿಲಿಂಡರ್ ಅನ್ನು ಅನುಮೋದಿಸಿದೆ. ಈ ಸಿಲಿಂಡರ್ 634 ರೂ.ಗೆ ಲಭ್ಯವಾಗಲಿದೆ.
ಸಂಯೋಜಿತ ಸಿಲಿಂಡರ್ ಕಬ್ಬಿಣದ ಸಿಲಿಂಡರ್ ಗಿಂತ 7 ಕೆಜಿ ಹಗುರವಾಗಿದ್ದೂ, ಸಾಕಷ್ಟು ಬಲವಾಗಿದೆ ಮತ್ತು ಇದು ಮೂರು ಪದರಗಳನ್ನು ಸಹ ಹೊಂದಿದೆ. 10 ಕೆಜಿ ಕಾಂಪೋಸಿಟ್ ಸಿಲಿಂಡರಲ್ಲಿ ಕೇವಲ 10 ಕೆಜಿ ಅನಿಲ ಮಾತ್ರ ಬರುತ್ತದೆ. ಈ ರೀತಿಯಾಗಿ, ಈ ಸಿಲಿಂಡರ್’ನ ಒಟ್ಟು ತೂಕವು 20kg ಆಗಿರುತ್ತದೆ. ಕಬ್ಬಿಣದ ಸಿಲಿಂಡರ್’ನ ತೂಕವು 30 ಕೆಜಿಗಿಂತ ಹೆಚ್ಚಾಗಿದೆ. ಆದ್ದರಿಂದ, ಈ ವಿಶೇಷತೆಯೊಂದಿಗೆ ಸಿಲಿಂಡರ್ ಖರೀದಿಸಲು ನೀವು 634 ರೂ.ಗಳನ್ನ ಪಾವತಿಸಬೇಕಾಗುತ್ತದೆ.