FIFA World Cup : ಈ ಬಾರಿಯ ಫಿಫಾ ವರ್ಲ್ಡ್ ಕಪ್ ನಲ್ಲಿ ಈ ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ ಖಂಡಿತ ! ಯಾವುದು ಅದು ?
ಈ ಬಾರಿಯ ವಿಶ್ವಕಪ್ನಲ್ಲಿ 32 ದೇಶಗಳು ಭಾಗವಹಿಸುವುದರಿಂದ, ಕತಾರ್ ನ ದೋಹಾಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಹಾಗಾಗಿಯೇ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಮಂಡಳಿ ರೂಪಿಸಿರುವುದು ಕೆಲವರಿಗೆ ಖುಷಿ ಹಾಗೂ ಬೇಸರ ತರಬಹುದು.
ಈ ನಿಯಮ ವಿಶೇಷವಾಗಿ UK, USA ಮತ್ತು ಪ್ರಪಂಚದ ಇತರ ಭಾಗಗಳಿಂದ ಬರುವ ಮಹಿಳಾ ಅಭಿಮಾನಿಗಳಿಗೆ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ. ನಿಯಮವೇನೆಂದರೆ, ಮಹಿಳಾ ಅಭಿಮಾನಿಗಳು ಮೈ ತೋರಿಸುವಂತಹ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗಿದೆ. ಕತಾರ್ನಲ್ಲಿ ಇರುವ ಕಾನೂನುಗಳ ಬಗ್ಗೆ ಅವರು ಗಮನಹರಿಸಬೇಕು. ಅಲ್ಲಿ ಅಂತಹ ಬಟ್ಟೆಗಳನ್ನು ಧರಿಸುವುದು ನಿಷೇಧ ಮಾಡಲಾಗಿದೆ. FIFA ತನ್ನ ವೆಬ್ಸೈಟ್ನಲ್ಲಿ ಅಭಿಮಾನಿಗಳು ತಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸಬಹುದು ಆದರೆ ಅವರು ದೇಶದ ಕಾನೂನುಗಳನ್ನು ಗೌರವಿಸಬೇಕು ಮತ್ತು ತಮ್ಮ ದೇಹದ ಭಾಗಗಳನ್ನು ಮುಚ್ಚಬೇಕು ಎಂದು ಹೇಳಿ ಖಡಕ್ ಸೂಚನೆ ನೀಡಿದೆ.
ಅತಿಯಾದ ಸೆಖೆಯಿಂದಾಗಿ ಅಭಿಮಾನಿಗಳು ತಮ್ಮ ಬಟ್ಟೆಗಳನ್ನು ತೆಗೆದರೆ, ಕ್ರೀಡಾಂಗಣಗಳಲ್ಲಿ ಅಳವಡಿಸಲಾಗಿರುವ ವಿಶೇಷ ಕ್ಯಾಮೆರಾಗಳ ಮೂಲಕ ಅವುಗಳನ್ನು ಗುರುತಿಸಲಾಗುತ್ತದೆ. ಇದು ಗಮನಿಸಬಹುದಾದ ಅಂಶವಾಗಿದೆ.
ಹಾಗೆನೇ ಡ್ರೆಸ್ ಕೋಡ್ ಅನುಸರಿಸದವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಜೈಲು ಶಿಕ್ಷೆಗೆ ಕೂಡ ಗುರಿಯಾಗಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.