ಶೈನ್ ಶೆಟ್ಟಿ ಮದುವೆ ಆಗ್ತಾರಂತೆ, ವಧು ಯಾರು ಅಂತ ಕೇಳಿದ್ರೆ ಶಾಕ್ ಆಗ್ತೀರಾ!

ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆದ ಶೈನ್ ಶೆಟ್ಟಿ ಅವರದ್ದು ಸಖತ್ ಲಕ್ ! ದೊಡ್ಮನೆ ಅಲ್ಲಿ ಇದ್ದಾಗ ದೀಪಿಕಾ ದಾಸ್ ಜೊತೆ ಕುಚ್ ಕುಚ್ ಇತ್ತು. ಆದ್ರೆ ಇದೀಗ ಸುದ್ದೀನೆ ಬೇರೆ. ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ. ಎಸ್, ಈಗ ಶೈನ್ ಶೆಟ್ಟಿ ಅವರು ಇದೀಗ ಮದುವೆ ಆಗೋಕೆ ರೆಡಿ ಆಗಿದ್ದಾರೆ. ಹುಡುಗಿ ಯಾರು ಗೊತ್ತಾ?

ಸುಕೃತ ನಾಗ್ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಎಲ್ಲರಿಗೂ ಪರಿಚಯವಾದರು. ವೈಟ್ ಬ್ಯೂಟಿ ಜೊತೆಗೆ ಕ್ರಾಸ್ ಹಲ್ಲಿನ ಸುಂದರಿ ಅಂತಾನೆ ಹೇಳಬಹುದು. ಇದೀಗ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷಣ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡ್ತಾ ಇದ್ದಾರೆ. ಇವರ ಜೊತೆ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ರ ಮದುವೆಯಂತೆ. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಶೆಟ್ರು ದೀಪಿಕಾ ಜೊತೆ ಮಾಡಿದ್ದು ಫ್ಲರ್ಟ್ ಆ?? ಅಂತ ಎಲ್ಲರಿಗೂ ಪ್ರಶ್ನೆ ಮೂಡುವುದು ಸಹಜ. ಇರ್ಲಿ ಅವರವರ ವೈಯಕ್ತಿಕ ಜೀವನ ಬಿಡಿ.

ವಿಷಯ ಏನಂದ್ರೆ, ಕಲರ್ಸ್ ಕನ್ನಡದಲ್ಲಿ ಇತೀಚೆಗೆ ಅನುಬಂಧ ಅವಾರ್ಡ್ಸ್ ಪ್ರೋಗ್ರಾಮ್ ಪ್ರಸಾರವಾಗಿತ್ತು. ಆ ಕಾರ್ಯಕ್ರಮದಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಹಾಗೂ ಈ ಹಿಂದೆ ಧಾರವಾಹಿಗಳಲ್ಲಿ ಅಭಿನಯಿಸಿರುವ ಹಾಗೂ ರಿಯಾಲಿಟಿ ಶೋಗಳ ಸ್ಪರ್ಧಿಗಳು ಕೂಡ ಈ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅನುಬಂಧ ಅವಾರ್ಡ್ಸ್ ಗೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು ಈ ಪ್ರೋಮೊದಲ್ಲಿ ಶೈನ್ ಶೆಟ್ಟಿ ಮೇಲೆ ಹುಡುಗಿಯೊಬ್ಬಳು ಬೀಳುತ್ತಾಳೆ, ಎಲ್ರೂ ಟೀಝ್ ಮಾಡುತ್ತಾರೆ. ಆಗ ಶೈನ್ ಶೆಟ್ಟಿ ನನಗಾಗಲೇ ಸುಕೃತ ಎನ್ನುವ ಹುಡುಗಿಯೊಂದಿಗೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳುತ್ತಾರೆ. ಜೊತೆಗೆ ಕಾಲ್ ಮಾಡಿ ಚಿನ್ನಿ, ಮುದ್ದು ಎಂದೆಲ್ಲ ಕಾಲ್ ನಲ್ಲಿ ಸುಕೃತ ನಾಗ್ ಗೆ ಕರೆದಿದ್ದಾರೆ. ಒಟ್ಟಿನಲ್ಲಿ ಎಲ್ರಿಗೂ ಶಾಕ್ ಆಗಿದ್ದಂತು ಪಕ್ಕ!

Leave A Reply