ಪತಿ ತನ್ನ ಮಾತು ಕೇಳಬೇಕು ಎಂದು ಬ್ಲ್ಯಾಕ್ ಮ್ಯಾಜಿಕ್ ಮೊರೆಹೋದ ಪತ್ನಿ | ನಂತರ ಆದದ್ದು ಮಾತ್ರ ಭಯಾನಕ!

ಗಂಡ- ಹೆಂಡತಿಯರ ನಡುವೆ ಜಗಳ ಬರುವುದು ಸಾಮಾನ್ಯ. ‘ಗಂಡ ಹೆಂಡತಿಯ ಜಗಳ ಉಂಡು ಮಲಗೋ ತನಕ’ ಅನ್ನೋ ಗಾದೆ ಮಾತನ್ನ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಗಂಡನೊಂದಿಗೆ ಜಗಳವಾಡಿ, ಆತನನ್ನು ನಿಯಂತ್ರಿಸಲು ಮಾಟ-ಮಂತ್ರದ ಮೊರೆಹೋಗಿದ್ದಳು. ಆಮೇಲೆ ನಡೆದದ್ದು ಮಾತ್ರ ನೀವು ಊಹಿಸಲಾಗದ್ದು. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

 

ಹದಿಮೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿಗೆ ತನ್ನ ಪತ್ನಿಯ ಅನೈತಿಕ ವಿಚಾರ ತಿಳಿದಾಗ, ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ನೊಂದಿದ್ದ ಉದ್ಯಮಿಯ ಪತ್ನಿ ಆತನನ್ನು ನಿಯಂತ್ರಿಸಲು ಬಯಸಿದ್ದಳು. ಗಂಡನನ್ನು ಬಗ್ಗು ಬಡೆಯಲು ಬ್ಲ್ಯಾಕ್ ಮ್ಯಾಜಿಕ್ ಮೊರೆಹೋಗಿದ್ದಳು. ಇದಕ್ಕೆ ತನ್ನ ಮಾಜಿ ಪ್ರಿಯಕರ ಜ್ಯೋತಿಶ್ ಬಾದಲ್ ಶರ್ಮಾ ಹಾಗೂ ಗೆಳೆಯ ಪರೇಶ್ ಎಂಬುವವನ ಜೊತೆ ಸೇರಿ ಜ್ಯೋತಿಷಿಯ ಸಹಾಯ ಬೇಡಿದ್ದಾಳೆ. ಜ್ಯೋತಿಷಿಯು ಇದಕ್ಕಾಗಿ ಉದ್ಯಮಿಯ ಪತ್ನಿಯಿಂದ 24 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 35 ಲಕ್ಷ ರೂಪಾಯಿ ಮೌಲ್ಯದ ನಗದನ್ನು ತೆಗೆದುಕೊಂಡಿದ್ದಾನೆ.

ಸ್ವಲ್ಪ ದಿನಗಳ ನಂತರ ಆಕೆಗೆ ತಾನು ಮೋಸ ಹೋಗಿರುವ ಸಂಗತಿ ಗೊತ್ತಾಯಿತು. ಉದ್ಯಮಿಯು ದೀಪಾವಳಿಯಂದು ಉದ್ಯೋಗಿಗಳಿಗೆ ಸಂಬಳ ನೀಡಲು, ಬೀರು ತೆರೆದು ನೋಡಿದಾಗ ಅದರಲ್ಲಿ 35 ಲಕ್ಷ ರೂ. ಇರಲಿಲ್ಲ. ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದಾಗ ಮೊದ ಮೊದಲು ಆಕೆ ಏನನ್ನೂ ಹೇಳಿಲ್ಲ. ನಂತರ ಸಮಸ್ಯೆ ಗಂಭೀರವಾಗುತ್ತಿದ್ದಂತೆ ಎಲ್ಲಾ ವಿಷಯ ಬಾಯಿ ಬಿಟ್ಟಿದ್ದಾಳೆ. ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆಯು ಜ್ಯೋತಿಶ್ ಬಾದಲ್ ಶರ್ಮಾನನ್ನು ಸಾಮಾಜಿಕ ಮಾಧ್ಯಮದ ಮೂಲಕ ಭೇಟಿಯಾಗಿದ್ದಳು. ಆಕೆಯ ಪತಿ ತನ್ನ ಸಹೋದರ ಮತ್ತು ಕುಟುಂಬದ ಸದಸ್ಯರ ಮಾತನ್ನು ಮಾತ್ರ ಕೇಳುತ್ತಿದ್ದನಂತೆ. ಹಾಗಾಗಿ, ಪತಿಯನ್ನು ನಿಯಂತ್ರಿಸಲು ಬ್ಲ್ಯಾಕ್ ಮ್ಯಾಜಿಕ್ ಮಾಡುವುದಾಗಿ ಜ್ಯೋತಿಶ್ ಬಾದಲ್ ಹೇಳಿದ್ದ ಹಾಗೂ ಮಾಜಿ ಗೆಳೆಯ ಪರೇಶ್ ಈತನಿಗೆ ಸಹಾಯ ಮಾಡಿದ್ದಾನೆ. ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನು ಕೇಳಿ ಪತಿಯು ಅಕ್ಷರಶಃ ಶಾಕ್ ಆಗಿದ್ದಾರೆ. ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಸದ್ಯ ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

Leave A Reply

Your email address will not be published.