Green Coffee : ಗ್ರೀನ್ ಕಾಫಿ ಬಗ್ಗೆ ಕೇಳಿದ್ದೀರಾ? ಇಲ್ವಾ ? ಬನ್ನಿ ಇಲ್ಲಿದೆ ಉತ್ತರ

ನೀವು ಬ್ಲ್ಯಾಕ್ ಕಾಫಿ ಕುಡಿದಿರ್ಬೊದು ಅಥವಾ ಹೆಸರನ್ನು ಕೇಳಿರ್ಬೊದು. ಈಗಿನ ಟ್ರೆಂಡ್ ನಲ್ಲಿ ಹಸಿರು ಕಾಫಿಯ ಹೆಸರು ಕೇಳಿಬರ್ತಿದೆ. ಇದೇನಿದು ಹಸಿರು ಕಾಫಿ ಅಂತ ಯೋಚಿಸ್ತಿದ್ದೀರಾ? ಇಲ್ಲಿದೆ ಇದರ ಸಂಪೂರ್ಣ ವಿವರ.


Ad Widget

Ad Widget

Ad Widget

Ad Widget
Ad Widget

Ad Widget

ಹಸಿರು ಕಾಫಿಯು ಕಾಫಿ ಹಣ್ಣುಗಳಿಂದ ಸಿದ್ಧಪಡಿಸಿದ(ಕಾಫಿಯಾ ಅರೇಬಿಕಾ, ಕಾಫಿ ಕ್ಯಾನೆಫೊರಾ) ಹುರಿಯದ ಕಾಫಿ ಬೀಜವಾಗಿದೆ. ಮೊದಲು ಬೀಜಗಳನ್ನು ಬೇರ್ಪಡಿಸಿ ಒಣಗಿಸಲಾಗುತ್ತದೆ. ನಂತರ ಅದನ್ನು ಪುಡಿಮಾಡಿ ಹಸಿರು ಕಾಫಿಯ ಪುಡಿಯನ್ನು ತಯಾರಿಸುತ್ತಾರೆ. ಇದನ್ನು ಹುರಿಯದೇ ಇರುವುದರಿಂದ ಕಾಫಿಗಿಂತ ಹೆಚ್ಚು ಕ್ಲೋರೊಜೆನಿಕ್ ಆಮ್ಲವನ್ನು ಹೊಂದಿರುತ್ತದೆ.
ಹಸಿರು ಕಾಫಿಯಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.


Ad Widget

ಹಸಿರು ಕಾಫಿಯಲ್ಲಿರುವ ಕ್ಲೋರೊಜೆನಿಕ್ ಆಮ್ಲವು ರಕ್ತನಾಳಗಳ ಮೇಲೆ ಪರಿಣಾಮ ಬೀರವುದರಿಂದ, ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹವು ರಕ್ತದಲ್ಲಿನ ಸಕ್ಕರೆ ಮತ್ತು ಚಯಾಪಚಯದ ನಿರ್ವಹಣೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯ ಕಾಫಿಗಿಂತ ಹಸಿರು ಕಾಫಿಯಲ್ಲಿ ಕಡಿಮೆ ಕೆಫೇನ್ ಅಂಶವಿರುತ್ತದೆ. ಇದು ಬೊಜ್ಜು, ರಕ್ತದೊತ್ತಡ ಸೇರಿದಂತೆ ಹಲವು ಸಮಸ್ಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ದೇಹವನ್ನು ಆರೋಗ್ಯವಾಗಿಡುತ್ತದೆ.

ಕ್ರಮವಿಲ್ಲದ ಆಹಾರ ಪದ್ಧತಿಗಳಿಂದಾಗಿ, ಬೊಜ್ಜು ಜನರಲ್ಲಿ ಸಾಮಾನ್ಯವಾಗಿದೆ. ದೇಹದ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಹಸಿರು ಕಾಫಿಯ ಸೇವನೆ ಉತ್ತಮ. ಏಕೆಂದರೆ ಇದು ಆಂಟಿಬೆಸಿಟಿ ಅಂಶವನ್ನು ಹೊಂದಿರುತ್ತದೆ. ಮ್ಯಾಕ್ರೋ ಪೋಷಕಾಂಶಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಸಹ ಇದರಲ್ಲಿ ಸಾಕಷ್ಟು ಇರುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ.

ರಕ್ತದೊತ್ತಡಕ್ಕೆ ರಾಮಬಾಣದಂತೆ ಕೆಲಸ ಮಾಡುವ ಹಸಿರು ಕಾಫಿಯು ಬಿಪಿಯನ್ನು ನಿಯಂತ್ರಿಸುತ್ತದೆ. ಹೃದಯಾಘಾತ ಮತ್ತು ದೀರ್ಘಕಾಲದ ಮೂತ್ರಪಿಂಡ ವೈಫಲ್ಯದಂತಹ ಅಪಾಯಕಾರಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದೂ, ಹಸಿರು ಕಾಫಿಯಲ್ಲಿ ಕೆಫೀನ್ ಇದೆ. ಇದು ತಲೆನೋವಿಗೆ ಪರಿಹಾರ ನೀಡುತ್ತದೆ. ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಇದರ ಬಳಕೆಯು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

error: Content is protected !!
Scroll to Top
%d bloggers like this: