ತನ್ನ ಬಾಲ್ಯದ ಫೋಟೋ ಹಂಚಿಕೊಂಡ ನಟಿ | ಇಲ್ಲಿಯವರೆಗೂ ಯಾರೂ ಕಂಡು ಹಿಡಿದಿಲ್ಲ…ನೀವು ಕಂಡುಹಿಡಿತೀರಾ?

ಮಕ್ಕಳ ದಿನಾಚರಣೆ ಪ್ರಯುಕ್ತ ನವೆಂಬರ್ 14 ರಂದು ಕನ್ನಡ ಚಿತ್ರರಂಗದ ನಟ-ನಟಿಯರು ತಮ್ಮ ತಮ್ಮ ಬಾಲ್ಯದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಬೇರೆ ಬೇರೆ ಖಾತೆಗಳಲ್ಲಿ ಅಪ್ಲೋಡ್ ಮಾಡಿ ಯಾರೆಂದು ಗೆಸ್ ಮಾಡಲು ಕೇಳಿದ್ದಾರೆ. ಬಹುತೇಕರನ್ನು ಕಂಡು ಹಿಡಿಯಲಾಯಿತು. ಆದರೆ ಈ ಒಂದು ಫೋಟೋ ಮಾತ್ರ ಸ್ವಲ್ಪ ಗಲಿಬಿಲಿ ಮಾಡಿದೆ. ನೀಲಿ- ಕೆಂಪು ಬಣ್ಣದ ಭರತನಾಟ್ಯ ಉಡುಪನ್ನು ಧರಿಸಿ, ದೇಗುಲದಲ್ಲಿ ನೃತ್ಯ ಮಾಡುವಾಗ ಸೆರೆ ಹಿಡಿದ ಫೋಟೋದಲ್ಲಿ ಗೊಂಬೆಯಂತಿರುವ ಪುಟ್ಟ ಹುಡುಗಿ ಯಾರಾಗಿರಬಹುದು? ನಿಮಗೇನಾದರೂ ಈ ಫೋಟೊದಲ್ಲಿರುವವರು ಯಾರೆಂದು ಗೊತ್ತಾ?

 

ಮೊದಲು ಹಳೆ ನಟಿ ಇರಬೇಕು ಎಂದು ಜನರು ಗೆಸ್ ಮಾಡಿದ್ದಾರೆ. ಆನಂತರ ತಿಳಿಯಿತು ಇದು ಬೇರೆ ಯಾರೂ ಅಲ್ಲ ನಮ್ಮ ನಿಮ್ಮ ಪ್ರೀತಿಯ ಆಶಾ ಭಟ್ ಎಂದು. ಹೌದು! ರಾಬರ್ಟ್ ಚಿತ್ರರಂಗದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಂದುಳ್ಳಿ ಚೆಲುವೆ ಆಶಾ ಭಟ್ ಫೋಟೋ ಇದು.

ಕನ್ನಡತಿ ಹುಡುಗಿ ಆಶಾ ಮೂಲತಃ ಭದ್ರಾವತಿಯವರು. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಓದುತ್ತಿರುವಾಗಲೇ ಮಿಸ್ ಸುಪ್ರಾ ಅಡಿಷನ್ ಒದಗಿಬಂದಿತ್ತು. ಸಣ್ಣ ಆತಂಕದಲ್ಲೇ ಭಾಗವಹಿಸಿದ ಈ ನೀಳ ಸುಂದರಿ, 2014ರಲ್ಲಿ ಪೋಲೆಂಡ್‌ನಲ್ಲಿ ನಡೆದ ‘ಮಿಸ್ ಸುಪ್ರಾ ಇಂಟರ್‌ನ್ಯಾಶನಲ್’ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದರು. ಈ ಸ್ಪರ್ಧೆಯಲ್ಲಿ ಭುವನ ಸುಂದರಿ ಕಿರೀಟ ಧರಿಸಿ ವಿಶ್ವದ ಗಮನ ಸೆಳೆದರು. ಈ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ನಾರಿ ಆಶಾ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಭದ್ರಾವತಿಯ ಬೆಡಗಿ, ಆಶಾ ಭಟ್ ಬಾಲ್ಯದಿಂದಲೂ ಬಹಳ ಚುರುಕಿನ ಹುಡುಗಿ.ಸಂಗೀತ, ನೃತ್ಯ, ನಾಟಕ, ಎನ್‌ಸಿಸಿ ಹೀಗೆ ಓದಿನ ಜೊತೆಗೆ ಪಟ್ಯೇತರ ಚಟುವಟಿಕೆಯಲ್ಲೂ ಸಖತ್ ಆಕ್ಟಿವ್ ಆಗಿದ್ದರು.

ಆಶಾ ಭಟ್ ಅವರು ಸಿನಿಮಾಗೆ ಬಂದದ್ದೂ ಆಕಸ್ಮಿಕವಲ್ಲ. ಅವರಿಗೆ ಆಸೆ ಇತ್ತು ಅದಕ್ಕಾಗಿಯೇ ಪ್ರತಿದಿನ ಆಡಿಷನ್‌ಗೆ ಹೋಗುತ್ತಿದ್ದರು. ಇದರ ಜೊತೆಯಲ್ಲೆ ಮ್ಯೂಸಿಕ್, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್ ಮಾಡೆಲಿಂಗ್, ಫ್ಯಾಷನ್ ಶೋಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲೇ ಜಂಗ್ಲಿ, ರಾಬರ್ಟ್ ಸಿನಿಮಾದಿಂದ, ಚಿತ್ರರಂಗದಲ್ಲಿ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸಖತ್ ಫಿಟ್ ಆಂಡ್ ಸ್ಮಾರ್ಟ್ ಆಗಿರುವ ಆಶಾ ಭಟ್ ಪ್ರತಿ ದಿನವೂ ವರ್ಕೌಟ್ ಮಾಡುತ್ತಾರಂತೆ. ಊಟ, ತಿಂಡಿ ಹೇಗೆ ನಾವು ಮಿಸ್ ಮಾಡುವುದಿಲ್ಲವೋ ಹಾಗೆ ವರ್ಕೌಟ್‌ ಅನ್ನೂ ಕೂಡ ಮಿಸ್ ಮಾಡಲ್ಲ ಅಂತ ಹೇಳುತ್ತಾರೆ. ವಾರಕ್ಕೆರಡು ಬಾರಿ ವೈಟ್ ಟ್ರೈನಿಂಗ್ ಮಾಡುತ್ತಾರೆ. ಮಾರ್ಷೆಲ್ ಆರ್ಟ್, ಬಾಕ್ಸಿಂಗ್ ಮತ್ತು ಫ್ರೀ ಹ್ಯಾಂಡ್ ಎಕ್ಸರ್ಸೈಜ್ ತುಂಬಾನೇ ಇಷ್ಟವಂತೆ. ಶೂಟಿಂಗ್ ಇದ್ದಾಗ ರೂಮ್‌ನಲ್ಲೇ ವರ್ಕೌಟ್ ಮಾಡುತ್ತೀನಿ ವಿನಃ ತಪ್ಪಿಸೋದಿಲ್ಲ. ಏನೇ ತಿಂದರೂ ಜೀರ್ಣ ಮಾಡ್ಕೊಳ್ತಿನಿ. ಹಾಗಾಗಿ ಡಯಟ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

Leave A Reply

Your email address will not be published.