ಪುರುಷರೇ ನೀವೆಷ್ಟು ಸ್ವೀಟ್ | ಮಹಿಳೆಯರೇ ನಿಮಗಿದು ಅನ್ವಯಿಸಲ್ಲ | ಅಂಕಿ ಅಂಶದಿಂದ ದೃಢ

ಸಾಮಾನ್ಯವಾಗಿ ಮಾತನಾಡುವ ಸಂದರ್ಭಗಳಲ್ಲಿ ಮಹಿಳಾ ಮಣಿಗಳಿಗೆ ‘ಸೋ ಸ್ವೀಟ್’ ಎಂದು ಕರೆಯುವುದು ಕೇಳಿರುತ್ತೇವೆ. ಆದರೆ ಭಾರತದಲ್ಲಿ ಸದ್ಯ ಪುರುಷರೇ ‘ಸೋ ಸ್ವೀಟ್’ ಎಂದು ಅಂಕಿ-ಅಂಶವೊಂದು ಕೂಡ ದೃಢಪಡಿಸಿದೆ.

 

ಅರೆ ಇದೇನಪ್ಪಾ ಅಂತ ಯೋಚಿಸುತ್ತಿದ್ದೀರಾ?? 35- 40 ರ ವಯೋಮಿತಿಯ ಆಸು ಪಾಸು ಸಮಿಸುತ್ತಿದ್ದಂತೆ ಫ್ರೀ ಆಗಿ ಬರುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಸಕ್ಕರೆಯ ವಿಷಯದಲ್ಲಿ ದೇಶದಲ್ಲಿ ಮಧುಮೇಹಿಗಳ ಪೈಕಿ ಮಧುಮೇಹಿಗಳಾಗುವ ಹಂತದಲ್ಲಿ ಇರುವವರ ಪೈಕಿ ಮಹಿಳೆಯರಿಗಿಂತ ಪುರುಷರ ಪ್ರಮಾಣವೇ ಹೆಚ್ಚು ಎಂಬುದನ್ನು ವರದಿಯೊಂದು ಹೇಳಿದೆ.

ಭಾರತದ ನ್ಯಾಷನಲ್​ ಫ್ಯಾಮಿಲಿ ಹೆಲ್ತ್ ಸರ್ವೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, ಭಾರತದಲ್ಲಿನ ಆರು ಪುರುಷರ ಪೈಕಿ ಒಬ್ಬರು ಮಧುಮೇಹಿ ಆಗಿರುತ್ತಾರೆ ಇಲ್ಲವೇ ಮಧುಮೇಹಿ ಆಗುವ ಹಂತದಲ್ಲಿರುವ ವಿಚಾರವನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ.

ವರದಿಯ ಅನ್ವಯ, ಭಾರತದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ 140 ಎಂಜಿ/ಡಿಎಲ್​ಗಿಂತ ಹೆಚ್ಚು ಇರುವ ಪುರುಷರ ಸಂಖ್ಯೆ ಶೇ. 15.6ರಷ್ಟಿದೆ. ಆದರೆ ಮಹಿಳೆಯರಿಗೆ ಸಂಬಂಧಿಸಿದಂತೆ ಇದು ಶೇ. 13.5ರಷ್ಟಿದೆ. ಮಧುಮೇಹಿ ಅಥವಾ ಮಧುಮೇಹಿಯಾಗುವ ಹಂತದಲ್ಲಿರುವ ಪುರುಷರ ಪೈಕಿ ಹೆಚ್ಚಿನವರು ಕೇರಳದಲ್ಲಿದ್ದಾರೆ ಎಂದು ಹೇಳಲಾಗಿದ್ದು, ಅಲ್ಲಿ ಇಂಥವರ ಪ್ರಮಾಣ ದೇಶದ ಒಟ್ಟು ಪ್ರಮಾಣಕ್ಕೆ ಹೋಲಿಸಿದರೆ ಶೇ. 27. ನಂತರದ ಸ್ಥಾನ ತಮಿಳುನಾಡು ಮತ್ತು ಆಂಧ್ರಪ್ರದೇಶದ್ದಾಗಿದ್ದು, ಅಲ್ಲಿ ಈ ಪ್ರಮಾಣ ಶೇ. 22 ರಷ್ಟಿದೆ.ವಿಶೇಷವೆಂದರೆ ಮಧುಮೇಹಿ ಅಥವಾ ಮಧುಮೇಹಿ ಆಗುವ ಹಂತದಲ್ಲಿರುವ ಪುರುಷ ಮತ್ತು ಮಹಿಳೆಯರಲ್ಲಿ ಕೇರಳವೇ ಹೆಚ್ಚಿನ ಪಾಲನ್ನು ವಶ ಪಡಿಸಿಕೊಂಡಿದೆ.

ಇಲ್ಲಿರುವ ಪುರುಷರು ಮತ್ತು ಮಹಿಳೆಯರಲ್ಲಿ ಮಧುಮೇಹದ ಸಾಧ್ಯತೆಗಳು ಬೇರೆ ಕಡೆಗೆ ಹೋಲಿಸಿದರೆ ತುಸು ಅಧಿಕ ಎಂದರು ತಪ್ಪಾಗದು.ಎನ್​ಎಫ್​ಎಚ್​ಎಸ್​-5 2019-21ರ ಸಮೀಕ್ಷೆಯಲ್ಲಿ ಅಂಶಗಳು ಸಾಬೀತಾಗಿದ್ದು, 8.3 ಲಕ್ಷ ಪುರುಷರು ಮತ್ತು 9.6 ಲಕ್ಷ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿ, ಈ ಅಂಕಿ-ಅಂಶಗಳನ್ನು ಪಡೆಯಲಾಗಿದೆ ಎನ್ನಲಾಗಿದೆ.

Leave A Reply

Your email address will not be published.