Drone Subsidy : ರೈತರೇ ಗಮನಿಸಿ | ಸರಕಾರದಿಂದ ಡ್ರೋನ್ ಖರೀದಿಗೆ ಶೇ.50 ರಷ್ಟು ಸಬ್ಸಿಡಿ!
ರೈತರು ನಮ್ಮ ದೇಶದ ಬೆನ್ನೆಲುಬು ಮತ್ತು ನಮಗೆಲ್ಲ ಅನ್ನದಾತರು ಕೂಡ ಹೌದು. ಆದರೆ ರೈತರ ಕಷ್ಟ ರೈತರಿಗೇ ಗೊತ್ತು. ರೈತರು ತಮ್ಮ ಕೃಷಿ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟು ಬೆಳೆಸುತ್ತಾರೆ. ನಂತರ ಕಟಾವು ಮಾಡಿ ಮಾರಾಟ ಮಾಡಿ ಸರಿಯಾದ ಬೆಲೆಯನ್ನು ಪಡೆಯಲು ಸಾಧ್ಯ ಆಗದೆ ರೈತರು ಕಣ್ಗೆಟ್ಟು ಹೋಗುವುದು ಪ್ರತಿಯೊಂದು ವರ್ಷವೂ ಒಂದಲ್ಲಾ ಒಂದು ಕಾರಣದಿಂದ ನಡೆಯುತ್ತಲೇ ಇದೆ. ಹಾಗಾಗಿ ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಪ್ರಮುಖ ಯೋಜನೆಗಳನ್ನ ಜಾರಿಗೆ ತರುತ್ತಿದ್ದು, ರೈತರ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿದೆ. ರೈತರು ಅನೇಕ ರೀತಿಯಲ್ಲಿ ಸಬ್ಸಿಡಿ ಪ್ರಯೋಜನಗಳನ್ನ ಪಡೆಯುತ್ತಿದ್ದು, ಈ ಬಾರಿ ಕೇಂದ್ರ ಸರ್ಕಾರವು ಕೃಷಿಯಲ್ಲಿ ಡ್ರೋನ್ ಬಳಕೆಯನ್ನ ಉತ್ತೇಜಿಸಲು ಅತ್ಯುತ್ತಮ ಯೋಜನೆಯನ್ನ ಸಿದ್ಧಪಡಿಸಿದೆ .
ಪ್ರಸ್ತುತ 2023 ರ ಯೋಜನಾ ಸಿದ್ಧತೆಯಲ್ಲಿ ಕೃಷಿ ವೆಚ್ಚ ತಗ್ಗಿಸಲು ಸರ್ಕಾರ ಕೆಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿದೆ. ಇದರಿಂದ ರೈತರ ಆದಾಯ ಹೆಚ್ಚಿಸಬಹುದು. ಡ್ರೋನ್ ಖರೀದಿಗೆ ರೈತರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ರೈತರು ಮತ್ತು ಈಶಾನ್ಯ ರಾಜ್ಯಗಳ ರೈತರಿಗೆ ಡ್ರೋನ್‌ಗಳ ವೆಚ್ಚದ 50 ಪ್ರತಿಶತದವರೆಗೆ ಗರಿಷ್ಠ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಹಾಗೂ ಇತರೆ ರೈತರಿಗೆ ಡ್ರೋನ್ ಖರೀದಿಗೆ ಶೇ.40 ಅಥವಾ ಗರಿಷ್ಠ ರೂ. 4 ಲಕ್ಷ ಸಹಾಯಧನ ನೀಡಲಾಗುತ್ತಿದೆ.
ಡ್ರೋನ್‌ಗಳ ಸಹಾಯದಿಂದ ರೈತರು ಸುಲಭವಾಗಿ ಗದ್ದೆಯಲ್ಲಿ ನಿಂತು ಕಡಿಮೆ ಸಮಯದಲ್ಲಿ ಗೊಬ್ಬರ ಮತ್ತು ಇತರ ಕೀಟನಾಶಕಗಳನ್ನ ಬೆಳೆಗಳಿಗೆ ಸಿಂಪಡಿಸಬಹುದು. ಇದರಿಂದ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಇದಲ್ಲದೇ, ಕೀಟನಾಶಕಗಳು, ಔಷಧಿಗಳು ಮತ್ತು ರಸಗೊಬ್ಬರಗಳನ್ನ ಸಹ ಉಳಿಸಲಾಗುತ್ತದೆ.
ಡ್ರೋನ್‌ಗಳನ್ನ ಬಳಸುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನ ಪಡೆಯಬಹುದು. ಕೃಷಿಯಲ್ಲಿ ಡ್ರೋನ್‌ಗಳನ್ನ ಬಳಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ರೈತರಿಗೆ ಉತ್ತೇಜನ ನೀಡಲು ಇದರ ಖರೀದಿಗೆ ಸಹಾಯಧನ ನೀಡುವ ಯೋಜನೆ ಸಿದ್ಧಪಡಿಸಲಾಗಿದೆ. ಡ್ರೋನ್‌ನ ವೆಚ್ಚದಲ್ಲಿ 50 ಪ್ರತಿಶತ ಸಬ್ಸಿಡಿ, ಸರಕಾರ ರೈತರಿಗೆ ಗರಿಷ್ಠ 5 ಲಕ್ಷದವರೆಗೆ ಆರ್ಥಿಕ ನೆರವು ನೀಡಲಿದೆ ಎಂದು ತಿಳಿಸಲಾಗಿದೆ.
ಒಟ್ಟಿನಲ್ಲಿ ಕೃಷಿ ವೆಚ್ಚ ತಗ್ಗಿಸಲು ಸರ್ಕಾರ ಕೆಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿದ್ದು . ಇದರಿಂದ ರೈತರ ಆದಾಯ ಹೆಚ್ಚಿಸಬಹುದು ಎಂದು ಡ್ರೋನ್ ಖರೀದಿಗೆ ರೈತರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇದರಿಂದ ಕೃಷಿ ವೆಚ್ಚವನ್ನು ತಗ್ಗಿಸಬಹುದು ಎಂಬ ನಿಲುವನ್ನು ಸರ್ಕಾರ ಮನಗಂಡು, ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ರೈತರು ಮತ್ತು ಈಶಾನ್ಯ ರಾಜ್ಯಗಳ ರೈತರಿಗೆ ಈ ಮೇಲಿನ ಸಬ್ಸಿಡಿಗಳನ್ನು ನಿಯಮಗಳ ಅನುಗುಣವಾಗಿ ರೈತರಿಗೆ ನೀಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.