Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದು ಸೆಕ್ಸ್ ಮಾಡುತ್ತಿದ್ದ ಅಫ್ತಾಬ್ | ಭಯಾನಕ ಮಾಹಿತಿ ಬಹಿರಂಗ!

ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ತನ್ನನ್ನು ಮದುವೆಯಾಗೆಂದು ಹೇಳಿದ ಕಾರಣಕ್ಕಾಗಿ, ಲಿವಿಂಗ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಪ್ರಿಯಕರ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಷ್ಟೆ ಅಲ್ಲದೇ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಇಡಲು ಫ್ರಿಡ್ಜ್ ಖರೀದಿಸಿದ ವಿಚಿತ್ರ ಘಟನೆ ನಡೆದು ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ ಅಚ್ಚರಿಯ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

 

ಹೌದು!!!.. ನಿನ್ನೆ ದೇಶವನ್ನೇ ಬೆಚ್ಚಿ ಬೀಳಿಸಿದ, ದೆಹಲಿಯಲ್ಲಿ ತನ್ನ ಲೀವಿಂಗ್ ಪಾರ್ಟ್‌ನರ್‌ನನ್ನು 35 ತುಂಡುಗಳಾಗಿ ಬರ್ಬರವಾಗಿ ಹತ್ಯೆಗೈದ ಆರೋಪಿ ಅಫ್ತಾಬ್ ಬಂಧನನದ ಬಳಿಕ ಈ ಭೀಕರ ಹತ್ಯೆಯ ಮತ್ತಷ್ಟು ರೋಚಕ ಮಾಹಿತಿಗಳು ವಿಚಾರಣೆ ವೇಳೆ ಹೊರಬಂದಿವೆ.

ದೆಹಲಿಯಲ್ಲಿ ನಡೆದ ಯುವತಿ ಶ್ರದ್ಧಾ ಕೊಲೆ ಪ್ರಕರಣ ತನಿಖೆ ನಡೆಯುತ್ತಿದ್ದಂತೆ ಆರೋಪಿಯ ಕರ್ಮಕಾಂಡಗಳು ಒಂದೊಂದಾಗಿ ಹೊರ ಬರುತ್ತಿವೆ. ಶ್ರದ್ಧಾ(Shraddha) ಹಾಗೂ ಅಫ್ತಾಬ್ ಪೂನಾವಾಲ (Aftab Poonawala) ಡೇಟಿಂಗ್ ಆಪ್ ಬಂಬಲ್ (Bumble) ನಲ್ಲಿ ಪರಸ್ಪರ ಮೊದಲ ಬಾರಿಗೆ ಭೇಟಿಯಾಗಿದ್ದರು. ಮುಂಬೈನಲ್ಲಿ ಆರಂಭವಾದ ಈ ಪ್ರೇಮಕಥನ ದೆಹಲಿಯಲ್ಲಿ ಭಯಾನಕ ಕೊಲೆಯೊಂದಿಗೆ ಅಂತ್ಯವಾಗಿದೆ. ಮೊದಲು ಮೂರು ವರ್ಷ ಇವರು ಜೊತೆಯಾಗಿಯೇ ಜೀವಿಸಿದ್ದು, ಅಫ್ತಾಬ್ ಜೊತೆಗಿನ ಪ್ರೇಮದ ಕಾರಣಕ್ಕೆ ಶ್ರದ್ಧಾ ಪೋಷಕರು ಮಗಳೊಂದಿಗೆ ಮುನಿಸಿಕೊಂಡಿದ್ದರು.

ಪೋಷಕರ ವಿರೋಧದ ನಡುವೆಯೂ ಶ್ರದ್ಧಾ ಮನೆ ಬಿಟ್ಟು ಬಂದಿದ್ದು, ಅಫ್ತಾಬ್ ಜೊತೆ ದೆಹಲಿಗೆ ಬಂದು ದೆಹಲಿಯ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಿದ್ದರು ಎನ್ನಲಾಗಿದೆ. ಇತ್ತ ಮನೆಯೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದ ಶ್ರದ್ಧಾ, ಫೇಸ್ಬುಕ್‌ನಲ್ಲಿ ಆಗಾಗ ಏನಾದರೂ ಪೋಸ್ಟ್‌ಗಳನ್ನು ಮಾಡುತ್ತಿದ್ದಳು. ಮಗಳೊಂದಿಗೆ ಮಾತುಕತೆ ಇಲ್ಲದಿದ್ದರೂ ಪೋಷಕರು ಈ ಮೂಲಕ ಮಗಳ ಇರುವಿಕೆಯನ್ನು ಗಮನಿಸುತ್ತಿದ್ದರು ಎನ್ನಲಾಗಿದ್ದು, ಆದರೆ ಅನೇಕ ದಿನಗಳಿಂದ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ಗಳು ಬಾರದ ಹಿನ್ನೆಲೆಯಲ್ಲಿ ಪೋಷಕರಿಗೆ ತಮ್ಮ ಮಗಳೇನಾದಳು ಎಂಬ ಬಗ್ಗೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಶ್ರದ್ಧಾ ತಂದೆ ಐದು ತಿಂಗಳ ಹಿಂದೆ ದೆಹಲಿಗೆ ಬಂದು ಶ್ರದ್ಧಾ ಇರುವ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಬೀಗ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಶ್ರದ್ಧಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾಗಿ ಐದು ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ತನ್ನ ಜೊತೆ ಜೀವನ ನಡೆಸುತ್ತಿದ್ದ ಗೆಳತಿ ಶ್ರದ್ಧಾಳನ್ನು ಆಕೆಯ ಲವ್ವರ್ ಅಫ್ತಾಬ್ ಅಮೀನ್ ಪೂನಾವಾಲಾ ಬರ್ಬರವಾಗಿ ಹತ್ಯೆಗೈದಿದ್ದಲ್ಲದೆ, ಗೆಳತಿಯ ಹತ್ಯೆ ಬಳಿಕ ಆಕೆಯ ಮೃತದೇಹವನ್ನು 35 ಪೀಸುಗಳಾಗಿ ಮಾಡಿ ಕತ್ತಿರಿಸಿ ಪ್ರಿಡ್ಜ್‌ನಲ್ಲಿ ಇರಿಸಿದ್ದ. ಅಲ್ಲದೆ, ಇದಕ್ಕಾಗಿ ಹೊಸದೊಂದು ಫ್ರಿಡ್ಜ್‌ನ್ನು ಆತ ಖರೀದಿಸಿ, ನಂತರ ಸುಮಾರು 18 ದಿನಗಳ ಕಾಲ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮೃತದೇಹದ ಸ್ವಲ್ಪ ಸ್ವಲ್ಪ ಭಾಗವನ್ನೇ ಸಮೀಪದ ಮೆಹ್ರುಲಿಯ ಕಾಡಿನಲ್ಲಿ ತೆಗೆದುಕೊಂಡು ಹೋಗಿ ಎಸೆದಿದ್ದಾನೆ.

ಈ ಭೀಕರ ಕೊಲೆ ಪ್ರಕರಣ ನಡೆದು ಆರು ತಿಂಗಳ ಬಳಿಕ ಪೊಲೀಸರು ನಿನ್ನೆ ಅಫ್ತಾಬ್‌ನನ್ನು ಬಂಧಿಸಿದ್ದಾರೆ. ಈತನ ಬಂಧನದ (Arrest) ಬಳಿಕ ಈ ಭೀಕರ ಕೊಲೆ (Brutual Murder) ಪ್ರಕರಣ ಬಯಲಾಗಿದ್ದು, ತನಿಖೆ ವೇಳೆ, ಹೀನ ಕೃತ್ಯದ ಒಂದೊಂದೆ ರಹಸ್ಯಗಳು ಮುನ್ನಲೆಗೆ ಬರುತ್ತಿವೆ . ಶ್ರದ್ಧಾಳನ್ನು ತನ್ನ ಕೈಯಾರೆ ಭೀಕರವಾಗಿ ಹತ್ಯೆ ಮಾಡಿದ 15 ರಿಂದ 20 ದಿನಗಳ ನಂತರ ಅಫ್ತಾಬ್ ಪೂನಾವಾಲಾ ಡೇಟಿಂಗ್ ಆಪ್ (Dating App) ಮೂಲಕ ಮತ್ತೊಬ್ಬ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ.

ಅಲ್ಲದೇ ಆಕೆಯೊಂದಿಗೆ ಡೇಟಿಂಗ್ ಶುರು ಮಾಡಿದ್ದ ಎನ್ನಲಾಗಿದ್ದು, ಅಲ್ಲದೇ ಶ್ರದ್ಧಾ ಮೃತದೇಹ ಮನೆಯಲ್ಲಿರುವ ವೇಳೆಯೇ ಆತ ಆ ಹೊಸ ಹುಡುಗಿಯನ್ನು ದೆಹಲಿಯಲ್ಲಿ (Delhi) ತಾನು ವಾಸವಿದ್ದ ಬಾಡಿಗೆ ಮನೆಗೆ ಆಗಾಗ ಕರೆದುಕೊಂಡು ಬರುತ್ತಿದ್ದ ಎಂಬ ಬೆಚ್ಚಿ ಬೀಳಿಸುವ ಅಂಶವನ್ನು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.

ಹೊಸ ಗೆಳತಿಯ ಆಗಮನದ ಸಂದರ್ಭದಲ್ಲಿಯೂ ಕೂಡ ಶ್ರದ್ಧಾ ದೇಹದ ತುಣುಕುಗಳು ಅಫ್ತಾಬ್ ಕೊಂಡ 300 ಲೀಟರ್‌ನ ಹೊಸ ಪ್ರಿಡ್ಜ್‌ ಒಳಗೆ ಇರಿಸಿದ್ದ ಎಂಬ ಅಚ್ಚರಿಯ ವಿಚಾರವನ್ನು ವಿಚಾರಣೆ ವೇಳೆ ಆರೋಪಿ ಅಫ್ತಾಬ್ ಬಾಯ್ಬಿಟ್ಟಿದ್ದಾನೆ. ಪೊಲೀಸರು ಇಂದು ಶ್ರದ್ಧಾಳ ದೇಹದ ಭಾಗಗಳನ್ನು ಬಿಸಾಕಿದ ಮೆಹ್ರುಲಿಯ ಕಾಡಿಗೆ ಆರೋಪಿಯನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ.

Leave A Reply

Your email address will not be published.