ಎಚ್ಚರ : ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯೊಳಗಿಡಬೇಡಿ | ಅಪಾಯ ಕಟ್ಟಿಟ್ಟಬುತ್ತಿ!
ಸಾಮಾನ್ಯವಾಗಿ ನಾವು ಖರೀದಿಸುವ ಹೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಎಕ್ಸ್‌ಪೈರಿ ಡೇಟ್ ಬರೆದಿರುವುದಿಲ್ಲ. ಬರೆದಿದ್ದರೂ ಕೆಲವೊಂದು ಬಾರಿ ನಾವು ಅದರೆ ಕಡೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಇನ್ನೂ, ಹಲವರು ಭಾವನಾತ್ಮಕ ಬಾಂಧವ್ಯದ ಕಾರಣದಿಂದಾಗಿ ತಮ್ಮ ಮನೆಯ ಯಾವುದೋ ಒಂದು ಮೂಲೆಯಲ್ಲಿ ಮೊಬೈಲ್, ಸ್ಪೀಕರ್ ಹೀಗೆ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ. ಆದರೆ, ಈ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳು ನಮ್ಮ ಜೀವಕ್ಕೆ ಅಪಾಯ ತಂದೊಡ್ಡುತ್ತದೆ ಎಂದರೆ ನಂಬುತ್ತೀರಾ? ಇಲ್ಲಾ ಅಲ್ವಾ! ಆದರೆ ಹೌದು ಇದು ನಿಜವಾದದ್ದು, ಹೇಗೆ ಎಂಬುದಕ್ಕೆ ಇಲ್ಲಿದೆ ವಿವರಗಳು.
ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್ ಸೇರಿದಂತೆ ಮೊಬೈಲ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿವೆ. ಈ ಬ್ಯಾಟರಿಗಳೇ ಅತಿಹೆಚ್ಚು ಹಾನಿಯನ್ನುಂಟು ಮಾಡುವುದು. ಇನ್ನೂ, ಮೊಬೈಲ್ ನ ಬ್ಯಾಟರಿ ಊದಿಕೊಂಡು ಬೆಂಕಿ ಹೊತ್ತಿಕೊಂಡ ಹಲವಾರು ಘಟನೆಗಳನ್ನು ಕೇಳಿದ್ದೇವೆ. ಹಾಗಾಗಿ ನಿಮ್ಮ ಮನೆಯ ಡ್ರಾಯರ್ನಲ್ಲಿ ಹಳೆಯದಾದ ಫೋನ್ಗಳನ್ನು ಇಡುವುದು ಸುರಕ್ಷಿತವಲ್ಲ. ಇದರಿಂದ ಅಸುರಕ್ಷಿತವೇ ಹೆಚ್ಚು.
ಇಂದು ನಡೆಯುತ್ತಿರುವ ಸೈಬರ್ ಪ್ರಕರಣಗಳಿಗೆ ಮುಖ್ಯ ಕಾರಣವೇ ಹಳೆಯ ರೂಟರ್‌ಗಳು. ಹ್ಯಾಕಿಂಗ್ ಸಂಭವಿಸುತ್ತಿರುವುದೇ ಈ ರೀತಿಯ ಸಾಧನಗಳಿಂದಾಗಿ. ಅಷ್ಟೇ ಅಲ್ಲದೆ, ಎಲೆಕ್ಟ್ರಾನಿಕ್ಸ್ ಶಾರ್ಟ್ ಸರ್ಕ್ಯೂಟ್ಗೆ ಕೂಡ ಇದು ಕಾರಣವಾಗಬಹುದು.
ಇನ್ನೂ, ಹಳೆಯ ವಿದ್ಯುತ್ ಕೇಬಲ್ಗಳು ಇವು ತಮ್ಮ ಶಕ್ತಿಯ ಗುಣಲಕ್ಷಣಗಳನ್ನು ಕಳೆದುಕೊಳುತ್ತಿದೆ. ಇದರಲ್ಲಿರುವ ತಂತಿಗಳನ್ನು ಪರಿಶೀಲಿಸದೆ ಇದ್ದರೆ ಬೆಂಕಿ ಅನಾಹುತಕ್ಕೆ ಕಾರಣವಾಗಬಹುದು. ಬಳಕೆಯಲ್ಲಿಲ್ಲದ ಹಳೆಯ ತಂತಿಗಳು ಸಹ ಜೀವಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಹೆಚ್ಚಾಗಿ ಮನೆಗಳಲ್ಲಿ ಹಳೆಯ ಬಲ್ಬ್‌ಗಳು ಅಥವಾ ಟ್ಯೂಬ್ ಲೈಟ್‌ಗಳನ್ನು ಬಿಸಾಕದೆ ಎತ್ತಿಟ್ಟಿರುತ್ತೇವೆ. ಅವುಗಳು ಟಂಗ್ಸ್ಟನ್ ಫಿಲಾಮೆಂಟ್ಸ್, ರಾಸಾಯನಿಕ ಮತ್ತು ಅನಿಲಗಳಂತಹ ಸಣ್ಣ ಭಾಗಗಳನ್ನು ಹೊಂದಿರುತ್ತವೆ. ಅವುಗಳು ಒಡೆದರೆ ದೊಡ್ಡ ಪ್ರಮಾಣದ ಗಾಯವಾಗುತ್ತದೆ. ಹಾಗಾಗಿ ಅವುಗಳಿಂದ ದೂರವಿದ್ದರೆ, ಅಪಾಯದಿಂದ ದೂರವಿದ್ದ ಹಾಗೆ.
ಇನ್ನೂ, ಹಳೆಯ ಚಾರ್ಜರ್‌ಗಳು ಇವು ಹೆಚ್ಚಿನ ಆಣ್ವಿಕ ಪಾಲಿಮರ್, ಗ್ಲಾಸ್ ಫೈಬರ್, ತಾಮ್ರದ ಹಾಳೆ, ಸರ್ಕ್ಯೂಟ್ ಬೋರ್ಡ್‌ಗಳನ್ನು ಹೊಂದಿರುತ್ತದೆ. ಹಳೆಯ ಸರ್ಕ್ಯೂಟ್ ಬೋರ್ಡ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ಫೋಟವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ಇವುಗಳಿಂದ ದೂರವಿದ್ದರೆ ಉತ್ತಮ.
ಹೆಚ್ಚಾಗಿ ಹಳೆಯ ಇಯರ್‌ಫೋನ್‌ಗಳು ಮನೆಯಲ್ಲಿ ಇದ್ದೇ ಇರುತ್ತದೆ. ಆದರೆ ಇವುಗಳನ್ನು ಕೂಡ ಇಟ್ಟುಕೊಳ್ಳುವುದು ತುಂಬಾ ಅಪಾಯಕಾರಿಯಂತೆ. ಯಾಕಂದ್ರೆ ಇಯರ್‌ಫೋನ್ ಮತ್ತು ಸ್ಪೀಕರ್‌ಗಳಲ್ಲಿ ಬಹಳಷ್ಟು ವಿಷಕಾರಿ ವಸ್ತುಗಳಿರುತ್ತದೆ. ಉದಾಹರಣೆಗೆ, ಆಯಸ್ಕಾಂತಗಳು (ಲೋಹ), ತಾಮ್ರದ ಸುರುಳಿಗಳು, ಪ್ಲಾಸ್ಟಿಕ್ ಮತ್ತು ಬ್ಯಾಟರಿಗಳ ಸಮಯ ಕಳೆದಂತೆ ಅಪಾಯ ಹೆಚ್ಚಿರುತ್ತದೆ. ಬ್ಯಾಟರಿಯಲ್ಲಿನ ಲೀಕೆಜ್ ನಿಮ್ಮ ಡ್ರಾಯರ್‌ನಲ್ಲಿರುವ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಹಾಳುಮಾಡುತ್ತದೆ. ಸಹವಾಸ ದೋಷ ಎನ್ನುವ ಹಾಗೆ, ಹಾಗಾಗಿ ಹಳೆಯ ಇಯರ್ ಫೋನ್ ಗಳನ್ನು ಹೊರಗಟ್ಟುವುದು ಒಳ್ಳೆಯದು.
ಹಾಗೇ ಹಳೆಯ ಹಾರ್ಡ್ ಡ್ರೈವ್‌ಗಳ ವಿಷಯಕ್ಕೆ ಬಂದರೆ, ಇವು ಮೇಲ್ನೋಟಕ್ಕೆ ಸುರಕ್ಷಿತವಾಗಿ ಕಾಣಿಸಬಹುದು ಆದರೆ ಇದು ಡ್ರಾಯರ್‌ಗಳ ಒಳಗೆ ಇದ್ದರೆ ಹೆಚ್ಚು ಅಪಾಯ. ಹಾರ್ಡ್ ಡ್ರೈವ್‌ಗಳು ಅಲ್ಯೂಮಿನಿಯಂ, ಪಾಲಿಮರ್‌ಗಳು, ಪ್ಲಾಸ್ಟಿಕ್ ಮತ್ತು ಮ್ಯಾಗ್ನೆಟ್‌ಗಳಂತಹ ವಸ್ತುಗಳನ್ನು ಒಳಗೊಂಡಿರುತ್ತವೆ. ಇವು ಸಮಯ ಕಳೆದಂತೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.