ವಿಟ್ಲ : ಆಟೋ ಚಾಲಕನ ಮೇಲೆ ಹಲ್ಲೆ , ಗಂಭೀರ !

ವಿಟ್ಲ: ಆಟೋ ಚಾಲಕನೋರ್ವನನ್ನು ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಬೋಳಂತೂರು ಸಮೀಪದ ನಾಡಾಜೆಯಲ್ಲಿ ನಡೆದಿದೆ.

 

ಬೋಳಂತೂರು ಸಮೀಪದ ಗುಳಿ ನಿವಾಸಿ ಅಬೂಬಕ್ಕರ್ ಪುತ್ರ ಆಟೋ ಚಾಲಕ ಶಾಕೀರ್(30) ಹಲ್ಲೆಗೊಳಗಾದವರು. ಇವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಬಡ್ಡಿ ಮ್ಯಾಚ್ ಮುಗಿಸಿ ರಾತ್ರಿ 2ಗಂಟೆಯ ಬಳಿಕ ಮನೆಗೆ ಹಿಂತಿರುಗುತ್ತಿದ್ದ ಶಾಕೀರ್‌ನನ್ನು ಬೋಳಂತೂರು ಸಮೀಪದ ನಾಡಾಜೆ ರಸ್ತೆಯಲ್ಲಿ ತಡೆದು ನಾಲ್ವರು ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ್ದಾರೆ. ದಾಳಿಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ಈ ಹೇಯ ಕೃತ್ಯ ಎಸಗಿರಬೇಕೆಂದು ಸ್ಥಳೀಯರು ಆರೋಪಿಸಿದ್ದಾರೆ.

Leave A Reply

Your email address will not be published.