ತಲೆ ಎತ್ತಿದೆ ಮಸೀದಿ ಮಾದರಿಯ ಬಸ್ ನಿಲ್ದಾಣ | ಬೆಳಗಾಗುವಷ್ಟರಲ್ಲಿ ಗುಂಬಜ್ ಗಳ ಮೇಲೆ ಕಳಶ ಬಂತು!

ಹಿಂದೂ ಮುಸ್ಲಿಂ ಸಮುದಾಯದ ನಡುವೆ ಬೆಂಕಿ ಹಚ್ಚಿ , ವಿವಾದ ಸೃಷ್ಟಿಸಿ ಎರಡು ಬಣಗಳ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿವೆ. ರಾಜ್ಯದಲ್ಲಿ ಹಿಜಾಬ್ ಕುರಿತಾದ ಚರ್ಚೆಗಳು, ಮನಸ್ತಾಪಗಳು ಕೇಸರಿ ಶಾಲು ವಿಚಾರಗಳು ತೆರೆಮರೆಗೆ ಬರುತ್ತಿರುವ ನಡುವೆಯೇ ಟಿಪ್ಪು ವಿಚಾರ ಚರ್ಚೆಗೆ ಕಾರಣವಾಗಿತ್ತು. ಇದೀಗ ಮಸೀದಿ ಮಾದರಿಯ ಬಸ್ ಶೆಲ್ಟರ್ ಗಳು ಹೊಸದೊಂದು ವಿವಾದಕ್ಕೆ ನಾಂದಿಯಾಗಿದೆ.

ಮೈಸೂರಿನ ಹಲವೆಡೆಗಳಲ್ಲಿ ಮಸೀದಿ ಮಾದರಿಯ ಬಸ್ ನಿಲ್ದಾಣಗಳು ನಿರ್ಮಾಣಗೊಂಡಿದ್ದು, ತೀವ್ರ ವಿರೋಧಕ್ಕೆ ಕಾರಣವಾಗಿದೆ. ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಹಲವೆಡೆಗಳಲ್ಲಿ ಮಸೀದಿ ಮಾದರಿಯ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ತೀವ್ರ ಆಕ್ಷೇಪ ಹೊರ ಹಾಕಿದ್ದಾರೆ.

ಟಿಪ್ಪು ಪ್ರತಿಮೆ ನಿರ್ಮಾಣ ವಿಚಾರಗಳ ನಡುವೆ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿರುವುದು ಸರಿಯಲ್ಲವೆಂದು ಈ ಸಂದರ್ಭ ಸಂಸದರಾದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಈ ಪ್ರಕರಣದ ಬಳಿಕ ಮಸೀದಿ ಮಾದರಿಯ ಬಸ್ ನಿಲ್ದಾಣಗಳ ಗುಂಬಜ್ ಮೇಲೆ ಇದೀಗ ರಾತ್ರಿ ಬೆಳಗಾಗುವಷ್ಟರಲ್ಲಿ ಕಳಶ ನಿರ್ಮಾಣ ಮಾಡಲಾಗಿದ್ದು, ಬಸ್ ನಿಲ್ದಾಣದ ಮೂರು ಗುಂಬಜ್ ಗಳ ಮೇಲೆ ಕಳಶ ನಿರ್ಮಿಸುವ ಮೂಲಕ ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದು, ಸಾರ್ವಜನಿಕರು ಕಿದಿಕೇಡಿಗಳ ನಡೆಗೆ ಕುಪಿತರಾಗಿದ್ದಾರೆ.

Leave A Reply

Your email address will not be published.