NPS-APY Rules : ಗಮನಿಸಿ | NPS ನಲ್ಲಿ ದೊಡ್ಡ ಬದಲಾವಣೆ | ಈ ಹೊಸನಿಯಮ ನೀವು ತಿಳಿದಿರ್ಬೇಕು
ನೀವೇನಾದರೂ ನಿಮ್ಮ ಮತ್ತು ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಥವಾ ಅಟಲ್ ಪಿಂಚಣಿ ಯೋಜನೆ (APY)ನಲ್ಲಿ ಹೂಡಿಕೆ ಮಾಡಿದ್ದರೆ, ನೀವು ಅದರ ಹೊಸ ನಿಯಮ ತಿಳಿದುಕೊಂಡು ಅದನ್ನು ಸಂಪೂರ್ಣವಾಗಿ ನವೀಕರಿಸಬೇಕಾಗುತ್ತದೆ.
ಪಿಂಚಣಿ ನಿಧಿ ನಿಯಂತ್ರಕ ಪಿಎಫ್‌ಆರ್ಡಿಎ(PFRDA) ಎನ್ಪಿಎಸ್ ಮತ್ತು ಅಟಲ್ ಪಿಂಚಣಿ ಯೋಜನೆ ಎರಡರಲ್ಲಿ ಕೂಡ ಬದಲಾವಣೆಯನ್ನು ಮಾಡಿದೆ. ಈ ಹೊಸ ಬದಲಾವಣೆಯ ಬಳಿಕ ಯೋಜನೆಗೆ ಸಂಬಂಧಿಸಿದ ಚಂದಾದಾರರು ಈಗ ಯುಪಿಐ ಪಾವತಿ ವ್ಯವಸ್ಥೆಯಿಂದ ಕೊಡುಗೆಗಳನ್ನು ಪಾವತಿ ಮಾಡಲು ಸಾಧ್ಯವಾಗುತ್ತದೆ.
ಪಿಂಚಣಿ ನಿಧಿ ನಿಯಂತ್ರಕರ ಮಾಹಿತಿ ಪ್ರಕಾರ, ಚಂದಾದಾರರು ಬೆಳಿಗ್ಗೆ 9.30ರೊಳಗೆ ತಮ್ಮ ಕೊಡುಗೆಯನ್ನು ಪಾವತಿಸಿದರೆ ಆ ಪಾವತಿಯನ್ನು ಅದೇ ದಿನದ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, 9.30ರ ನಂತರ ಖಾತೆಗೆ ಜಮಾ ಮಾಡಿದ ಮೊತ್ತ ಮರುದಿನದ ಹೂಡಿಕೆಯ ಲೆಕ್ಕಕ್ಕೆ ಸೇರುತ್ತದೆ. ಇದುವರೆಗೆ ಚಂದಾದಾರರು IMPS/IMPS ನ್ನು ಬಳಸುತ್ತಿದ್ದಾರೆ. NEFT RTGS (IMPS/IMPS) ಕೊಡುಗೆಯ ಮೊತ್ತವನ್ನು ಕಳುಹಿಸಬಹುದಿತ್ತು. ಆದರೆ ಅದರ ವ್ಯಾಪ್ತಿಯನ್ನು ಹೆಚ್ಚಿಸಿದ ಬಳಿಕ ಈಗ UPI ನ್ನೂ ಮಾಡಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆಯಲ್ಲಿ ಏನೆಲ್ಲಾ ಬದಲಾವಣೆ ಎಂದರೆ, ಅಟಲ್ ಪಿಂಚಣಿ ಯೋಜನೆಯು (APY) ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ. ಈ ಯೋಜನೆಯ ಚಂದಾದಾರರು ತಮ್ಮ ಕೊಡುಗೆಯನ್ನು ಅವಲಂಬಿಸಿ 60 ವರ್ಷ ವಯಸ್ಸಿನ ನಂತರ ಖಾತರಿಯೊಂದಿಗೆ ತಿಂಗಳಿಗೆ 1,000 ರಿಂದ 5,000 ರೂ.ಗಳ ಕನಿಷ್ಠ ಪಿಂಚಣಿಯನ್ನು ಪಡೆಯುತ್ತಾರೆ.
ಅಟಲ್ ಪಿಂಚಣಿ ಯೋಜನೆಯು ಅಕ್ಟೋಬರ್ 1ರಿಂದ ಬದಲಾವಣೆಯಾಗಿದೆ. ಇದೀಗ ಹೊಸ ನಿಯಮಗಳ ಪ್ರಕಾರ, ಆದಾಯ ತೆರಿಗೆ ಪಾವತಿದಾರರು ಇನ್ನ್ಮುಂದೆ ಅಟಲ್ ಪಿಂಚಣಿ ಯೋಜನೆಗೆ (APY) ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಹಾಗೇ NPS ಯೋಜನೆಯು ಸಂಘಟಿತ ವಲಯದ ಉದ್ಯೋಗಿಗಳಿಗಾಗಿ ಇರುವಂತದ್ದಾಗಿದೆ. 2004 ರಿಂದ ಜಾರಿಯಲ್ಲಿರುವ ಈ ಯೋಜನೆ ಕೇಂದ್ರ ಸರ್ಕಾರಿ ನೌಕರರಿಗೆ (ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ) ಕಡ್ಡಾಯವಾಗಿದೆ. ಜನವರಿ 1, 2004 ರಂದು ಅಥವಾ ಅದರ ನಂತರ ಸೇವೆಗೆ ಸೇರಿದ ಉದ್ಯೋಗಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಇನ್ನೂ, ಮೇ 2009 ರಲ್ಲಿ ಇದನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಖಾಸಗಿ ಮತ್ತು ಅಸಂಘಟಿತ ವಲಯಕ್ಕೆ ವಿಸ್ತರಿಸಲಾಗಿದೆ.